ಭಾರತೀಯ ಷೇರುಮಾರುಕಟ್ಟೆಗೆ ಈಗ ಶುಭಕಾಲ; ರಾಧಿಕಾ ಗುಪ್ತಾ ವಿವರಣೆ ಕೇಳಿ

Updated on: Sep 18, 2024 | 4:39 PM

Edelweiss Mutual Fund CEO Radhika Gupta speaks: ಭಾರತದ ಷೇರುಮಾರುಕಟ್ಟೆಗೆ ಈ ದಶಕ ಬಹಳ ಶುಭಕರ ಎನ್ನುತ್ತಾರೆ ಎಡೆಲ್​ವೀಸ್ ಮ್ಯೂಚುವಲ್ ಫಂಡ್ ಸಿಇಒ ರಾಧಿಕಾ ಗುಪ್ತಾ.

ಭಾರತದ ಷೇರುಮಾರುಕಟ್ಟೆಗೆ ಈ ದಶಕ ಬಹಳ ಶುಭಕರ ಎನ್ನುತ್ತಾರೆ ಎಡೆಲ್​ವೀಸ್ ಮ್ಯೂಚುವಲ್ ಫಂಡ್ ಸಿಇಒ ರಾಧಿಕಾ ಗುಪ್ತಾ. ಭಾರತ 4 ಟ್ರಿಲಿಯನ್ ಆರ್ಥಿಕತೆ ಆಗುತ್ತಿದೆ. ಅಮೆರಿಕ, ಚೀನಾ ಮತ್ತು ಜಪಾನ್ ಈ ಮೂರು ದೇಶಗಳು 2 ಟ್ರಿಲಿಯನ್​ನಿಂದ 5 ಟ್ರಿಲಿಯನ್ ಜಿಡಿಪಿ ದಾರಿ ದಾಟಿವೆ. ಈ ಹಂತದಲ್ಲಿ ಅಮೆರಿಕದ ಷೇರುಪೇಟೆ 20 ಪಟ್ಟು ಬೆಳೆದಿದೆ. ಚೀನಾ ನಾಲ್ಕೈದು ಪಟ್ಟು ಬೆಳೆದಿದೆ. ಜಪಾನ್ 20 ಪಟ್ಟು ಬೆಳೆಯಿತು. ಭಾರತದ ಷೇರು ಮಾರುಕಟ್ಟೆ ಇನ್ನೂ ಕೂಡ 3 ಪಟ್ಟು ಬೆಳೆದಿಲ್ಲ. ಹೀಗಾಗಿ, ಬೆಳೆಯುವ ಅವಕಾಶ ಬಹಳಷ್ಟಿದೆ ಎನ್ನುತ್ತಾರೆ ಅವರು.

Follow Us
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More