ಕಾಳಿ ವೇಷ ಧರಿಸುತ್ತಿದ್ದಂತೆ ಏನಾಗುತ್ತಿತ್ತು, ವಿವರಿಸಿದ ನಟಿ ರಾಧಿಕಾ ಕುಮಾರಸ್ವಾಮಿ
Radhika Kumaraswamy: ನಟಿ ರಾಧಿಕಾ ಕುಮಾರಸ್ವಾಮಿ ನಟಿಸಿರುವ ‘ಭೈರಾದೇವಿ’ ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದೆ. ಸಿನಿಮಾದಲ್ಲಿ ಕಾಳಿ ವೇಷ ಧರಿಸಿ ನಟಿಸುವಾಗ ನಡೆದ ಕೆಲವು ವಿಸ್ಮಯಕಾರಿ ಸಂಗತಿಗಳನ್ನು ನಟಿ ರಾಧಿಕಾ ಕುಮಾರಸ್ವಾಮಿ ಹೇಳಿದ್ದಾರೆ.
ರಾಧಿಕಾ ಕುಮಾರಸ್ವಾಮಿ ನಟಿಸಿರುವ ‘ಭೈರಾದೇವಿ’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾದ ಟ್ರೈಲರ್ ನಿನ್ನೆ ರಾತ್ರಿ ಬೆಂಗಳೂರಿನಲ್ಲಿ ಬಿಡುಗಡೆ ಆಗಿದೆ. ಸಿನಿಮಾದಲ್ಲಿ ನಟಿ ರಾಧಿಕಾ ಕುಮಾರಸ್ವಾಮಿ ಕಾಳಿ ವೇಷದಲ್ಲಿ ಕಾಣಿಸಿಕೊಂಡಿದ್ದಾರೆ. ಕಾಳಿ ವೇಷ ಧರಿಸಿದಾಗ ತಮ್ಮಲ್ಲಿ ಕೆಲವು ಬದಲಾವಣೆ ಆಗುತ್ತಿದ್ದವು ಎಂದು ನಟಿ ರಾಧಿಕಾ ಕುಮಾರಸ್ವಾಮಿ ಹೇಳಿದ್ದಾರೆ. ಕಾಳಿ ವೇಷ ಧರಿಸಿದಾಗ ಮೊದಲ ದಿನ ತಲೆ ಸಹ ಎತ್ತಲು ನನಗೆ ಆಗಲಿಲ್ಲ. ಆ ನಂತರ ನಮ್ಮ ಕೋರಿಯೋಗ್ರಫರ್ ಹಾಗೂ ನಿರ್ದೇಶಕರು ದೇವಸ್ಥಾನವೊಂದಕ್ಕೆ ಕರೆದುಕೊಂಡು ಹೋಗಿ ದೃಷ್ಟಿ ತೆಗೆದರು ಅದಾದ ಮೇಲೆ ಮಾತ್ರವೇ ನನಗೆ ನಟಿಸಲು ಸಾಧ್ಯ ಆಯ್ತು’ ಎಂದಿದ್ದಾರೆ ರಾಧಿಕಾ ಕುಮಾರಸ್ವಾಮಿ. ಸಿನಿಮಾದಲ್ಲಿ ರಾಧಿಕಾ ಜೊತೆಗೆ ನಟ ರಮೇಶ್ ಅರವಿಂದ್ ಸಹ ನಟಿಸಿದ್ದಾರೆ. ರಮೇಶ್ ಅವರನ್ನು ಖಡಕ್ ಪೊಲೀಸ್ ಅಧಿಕಾರಿ ಪಾತ್ರ. ಅತೀಂದ್ರಿಯ ಶಕ್ತಿ, ದೇವರು-ದುಷ್ಟ ಶಕ್ತಿ ನಡುವಿನ ಯುದ್ಧದ ಕತೆಯನ್ನು ಸಿನಿಮಾ ಒಳಗೊಂಡಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ