ಶೂಟಿಂಗ್ ಸಮಯದಲ್ಲಿ ತಮಗಾದ ಕಹಿ ಅನುಭವದ ಬಗ್ಗೆ ರಾಧಿಕಾ ಕುಮಾರಸ್ವಾಮಿ ಮಾತು
ಚಿತ್ರರಂಗದಲ್ಲಿ ಈ ಮತ್ತೊಮ್ಮೆ ಮೀ ಟೂ ಕುರಿತ ಚರ್ಚೆ ಎದ್ದಿದೆ. ಲೈಂಗಿಕ ದೌರ್ಜನ್ಯ ಕುರಿತ ವರದಿಯೊಂದು ತಯಾರಿಸಲು ಸಮಿತಿ ರಚನೆಯಾಗಬೇಕು ಎಂಬ ಕೂಗು ಎದ್ದಿದೆ. ಈ ನಡುವೆ ನಟಿ ರಾಧಿಕಾ ಪಂಡಿತ್ ತಮಗೆ ಸಿನಿಮಾ ಚಿತ್ರೀಕರಣ ಸಂದರ್ಭದಲ್ಲಿ ಆದ ಕೆಟ್ಟ ಅನುಭವದ ಬಗ್ಗೆ ಮಾತನಾಡಿದ್ದಾರೆ.
ನಟಿ ರಾಧಿಕಾ ಕುಮಾರಸ್ವಾಮಿ ದಶಕಗಳಿಂದಲೂ ಚಿತ್ರರಂಗದಲ್ಲಿ ನಾಯಕಿಯಾಗಿ ನಟಿಸುತ್ತಾ ಬರುತ್ತಿದ್ದಾರೆ. ಚಿತ್ರರಂಗದಲ್ಲಿ, ವೈಯಕ್ತಿಕ ಜೀವನದಲ್ಲಿ ಹಲವು ಏಳು-ಬೀಳುಗಳನ್ನು ನಟಿ ರಾಧಿಕಾ ಕುಮಾರಸ್ವಾಮಿ ಕಂಡಿದ್ದಾರೆ. ಇದೀಗ ರಾಧಿಕಾ ನಟನೆಯ ‘ಬೈರಾದೇವಿ’ ಸಿನಿಮಾದ ಬಿಡುಗಡೆಯಾಗಲಿದೆ. ಟಿವಿ9 ಜೊತೆ ಮಾತನಾಡಿರುವ ರಾಧಿಕಾ, ಚಿತ್ರರಂಗದಲ್ಲಿ ಈಗ ಚರ್ಚೆಯಾಗುತ್ತಿರುವ ಮೀ ಟೂ ವಿಚಾರ, ದೌರ್ಜನ್ಯ ತಡೆ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ತಮಗೆ ವೈಯಕ್ತಿಕವಾಗಿ ತೀರ ಕೆಟ್ಟ ಅನುಭವ ಆಗಿಲ್ಲ, ಆದರೆ ನನಗೆ ಹಾಗೆ ಆಗಿಲ್ಲ ಎಂದ ಮಾತ್ರಕ್ಕೆ ಬೇರೆಯವರಿಗೂ ಆಗಿಲ್ಲ ಎನ್ನಲಾಗದು ಎಂದಿರುವ ರಾಧಿಕಾ, ಚಿತ್ರೀಕರಣ ಸಮಯದಲ್ಲಿ ತಾವು ಎದುರಿಸಿದ ಕೆಲ ಸಮಸ್ಯೆಗಳ ಬಗ್ಗೆಯೂ ಮಾತನಾಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Sep 05, 2024 06:04 PM