AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಿಲ್ ಹಿಡಿದ ಈ ಅದ್ಭುತ ಕ್ಯಾಚ್​ಗೆ ಎಷ್ಟು ಅಂಕ ಕೊಡ್ತೀರಾ? ಕಾಮೆಂಟ್ ಮಾಡಿ

ಗಿಲ್ ಹಿಡಿದ ಈ ಅದ್ಭುತ ಕ್ಯಾಚ್​ಗೆ ಎಷ್ಟು ಅಂಕ ಕೊಡ್ತೀರಾ? ಕಾಮೆಂಟ್ ಮಾಡಿ

ಪೃಥ್ವಿಶಂಕರ
|

Updated on: Sep 05, 2024 | 6:08 PM

Duleep Trophy 2024: ಭಾರತ ಬಿ ತಂಡದ ಪರ ಆಡುತ್ತಿರುವ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ರಿಷಬ್ ಪಂತ್ ನೀಡಿದ ಕಷ್ಟಕರವಾದ ಕ್ಯಾಚನ್ನು ಭಾರತ ಎ ತಂಡದ ನಾಯಕ ಶುಭ್​ಮನ್​ ಗಿಲ್ ಚಿರತೆಯಂತೆ ಎಗರಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಅದರ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗುತ್ತಿದೆ.

ದುಲೀಪ್ ಟ್ರೋಫಿಯಲ್ಲಿ ಭಾರತ ಎ ಹಾಗೂ ಭಾರತ ಬಿ ತಂಡಗಳು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್ ಆರಂಭಿಸಿರುವ ಭಾರತ ಬಿ ತಂಡಕ್ಕೆ ಮುಶೀರ್ ಖಾನ್ ಆಸರೆಯಾಗಿ ನಿಂತಿದ್ದಾರೆ. ಉಳಿದಂತೆ ತಂಡದ ಯಾವೊಬ್ಬ ಬ್ಯಾಟರ್​ಗೂ ನೆಲಕಚ್ಚಿ ಆಡುವ ಅವಕಾಶ ಸಿಗಲಿಲ್ಲ. ಅದ್ಭುತವಾಗಿ ಬೌಲ್ ಮಾಡಿದ ಭಾರತ ಎ ತಂಡದ ವೇಗಿಗಳು ಭಾರತ ಬಿ ತಂಡದ ಬ್ಯಾಟಿಂಗೆ ಬೆನ್ನೇಲುಬು ಮುರಿದರು. ಇದೇ ವೇಳೆ ಭಾರತ ಬಿ ತಂಡದ ಪರ ಆಡುತ್ತಿರುವ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ರಿಷಬ್ ಪಂತ್ ನೀಡಿದ ಕಷ್ಟಕರವಾದ ಕ್ಯಾಚನ್ನು ಭಾರತ ಎ ತಂಡದ ನಾಯಕ ಶುಭ್​ಮನ್​ ಗಿಲ್ ಚಿರತೆಯಂತೆ ಎಗರಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಅದರ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗುತ್ತಿದೆ.

ಗಿಲ್ ಅದ್ಭುತ ಫೀಲ್ಡಿಂಗ್‌

ವೇಗಿ ಆಕಾಶ್ ಸಿಂಗ್ ಎಸೆದ ಚೆಂಡನ್ನು ರಿಷಬ್ ಪಂತ್, ನಿಂತಲ್ಲೇ ಲೆಗ್ ಸೈಡ್​ನಿಂದ ಹೊಡೆಯಲು ಯತ್ನಿಸಿದರು. ಆದರೆ ಚೆಂಡು ಸರಿಯಾಗಿ ಬ್ಯಾಟ್‌ಗೆ ತಾಕದೆ ಗಾಳಿಯಲ್ಲಿ ಮಿಡ್ ಆಫ್ ಕಡೆಗೆ ಹೋಯಿತು. ಅಲ್ಲಿ ಶುಭ್‌ಮನ್ ಗಿಲ್ ಫೀಲ್ಡಿಂಗ್ ಮಾಡುತ್ತಿದ್ದರು. ಹಿಮ್ಮುಖವಾಗಿ ಓಡಿ, ಡೈವ್ ಮಾಡಿ ಚೆಂಡನ್ನು ಹಿಡಿದರು. ಇದು ಕ್ರಿಕೆಟ್‌ನಲ್ಲಿ ಅತ್ಯಂತ ಕಷ್ಟಕರವಾದ ಕ್ಯಾಚ್‌ಗಳಲ್ಲಿ ಒಂದಾಗಿದ್ದು, ಗಿಲ್ ಅವರ ಅದ್ಭುತ ಫೀಲ್ಡಿಂಗ್​ಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅಂತಿಮವಾಗಿ ಪಂತ್, ಗಿಲ್ ಹಿಡಿದ ಕ್ಯಾಚ್​ನಿಂದಾಗಿ ತಮ್ಮ ಇನ್ನಿಂಗ್ಸ್‌ನಲ್ಲಿ ಕೇವಲ 10 ನೇ ಎಸೆತಗಳನ್ನು ಎದುರಿಸಿ 7 ರನ್ ಗಳಿಸಲಷ್ಟೇ ಶಕ್ತರಾದರು.