ಇಳಕಲ್​​ನಲ್ಲಿ ದಾಖಲೆಯ ಅಡ್ಡಪಲ್ಲಕ್ಕಿ ಮಹೋತ್ಸವ: ನಿರಂತರ 33 ಗಂಟೆ ಮೆರವಣಿಗೆ

ಬಾಗಲಕೋಟೆ ಜಿಲ್ಲೆಯ ಇಳಕಲ್ ನಗರದ ಚಿತ್ತರಗಿ ವಿಜಯಮಹಾಂತೇಶ್ವರ ಮಠ ಶಿವಯೋಗಿಗಳ ಶರಣ ಸಂಸ್ಕೃತಿ ಮಹೋತ್ಸವ ಹಾಗೂ ಜಾತ್ರೆ ಹಿನ್ನೆಲೆ ಇಂದು ಅಡ್ಡಪಲ್ಲಕ್ಕಿ ಉತ್ಸವ ನಡೆಯಿತು. ನಿರಂತರ 33 ಗಂಟೆ ಅಡ್ಡಪಲ್ಲಕ್ಕಿ ಮೆರವಣಿಗೆ ನಡೆಯುವ ಮೂಲಕ ದಾಖಲೆ ಮಾಡಲಾಗಿದೆ. ಭಕ್ತರ ಸಂಭ್ರಮಿಸಿದ್ದಾರೆ.

ಇಳಕಲ್​​ನಲ್ಲಿ ದಾಖಲೆಯ ಅಡ್ಡಪಲ್ಲಕ್ಕಿ ಮಹೋತ್ಸವ: ನಿರಂತರ 33 ಗಂಟೆ ಮೆರವಣಿಗೆ
| Updated By: ಗಂಗಾಧರ​ ಬ. ಸಾಬೋಜಿ

Updated on: Sep 05, 2024 | 2:50 PM

ಬಾಗಲಕೋಟೆ, ಸೆಪ್ಟೆಂಬರ್​ 05: ನಿರಂತರ 33 ಗಂಟೆ ಅಡ್ಡಪಲ್ಲಕ್ಕಿ ಮೆರವಣಿಗೆ (Addapalakki Mahotsava) ಮಾಡುವ ಮೂಲಕ ಜಿಲ್ಲೆಯ ಇಳಕಲ್ ನಗರದಲ್ಲಿ ದಾಖಲೆಯ ಅಡ್ಡಪಲ್ಲಕ್ಕಿ ಮಹೋತ್ಸವ ನೆರವೇರಿಸಲಾಗಿದೆ. ವಿಜಯಮಹಾಂತ ಶಿವಯೋಗಿಗಳ ಶರಣ ಸಂಸ್ಕೃತಿ ಮಹೋತ್ಸವ ಹಾಗೂ ಜಾತ್ರೆ ಹಿನ್ನೆಲೆ ನಡೆದ ಅಡ್ಡಪಲ್ಲಕ್ಕಿ ಉತ್ಸವ ನಡೆಯಿತು. ನಗರದಲ್ಲಿ ಮನೆ ಮನೆಗಳ ಮುಂದೆ ಭಕ್ತರು ಪಲ್ಲಕ್ಕಿ ಪೂಜೆ, ಕಾಯಿ, ಕರ್ಪೂರ ಬೆಳಗಿದ್ದಾರೆ. ಕೇವಲ 1.5 ಕಿ.ಮೀ. ಸಾಗಿ ಮರಳಿ ವಿಜಯಮಹಾಂತೇಶ ಮಠ ತಲುಪಲು 33 ಗಂಟೆ ತೆಗೆದುಕೊಂಡಿದೆ. ಭಕ್ತರ ಸಂಭ್ರಮ, ವಾದ್ಯವೈಭವಗಳ ಜೊತೆ ಅಡ್ಡಪಲ್ಲಕ್ಕಿ ಮೆರವಣಿಗೆ ಸಾಗಿತ್ತು. ವಿಡಿಯೋ ನೋಡಿ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Follow us