ರಜೆಗೆ ಮನೆಗೆ ಹೊರಟಿದ್ದ ಸೈನಿಕ ಕಾಲು ಜಾರಿ ರೈಲಿನಡಿ ಬಿದ್ದು ಸಾವು
ರಜೆಯ ಮೇಲೆ ಮನೆಗೆ ಹೋಗುತ್ತಿದ್ದ ಆರ್‌ಎಎಫ್ ಯೋಧ ಅಲಿಗಢ್ ರೈಲು ನಿಲ್ದಾಣದಲ್ಲಿ ಚಲಿಸುತ್ತಿದ್ದ ರೈಲು ಮತ್ತು ಪ್ಲಾಟ್‌ಫಾರ್ಮ್ ನಡುವೆ ಜಾರಿಬಿದ್ದು ಸಾವನ್ನಪ್ಪಿದ್ದಾರೆ. ಮರಣೋತ್ತರ ಪರೀಕ್ಷೆಯ ನಂತರ, ಪೊಲೀಸರು ವ್ಯಕ್ತಿಯ ದೇಹವನ್ನು ಆರ್‌ಎಎಫ್‌ಗೆ ಹಸ್ತಾಂತರಿಸಿದರು. ನಂತರ ಅದನ್ನು ಸಂಪೂರ್ಣ ಗೌರವದೊಂದಿಗೆ ಬಿಹಾರದಲ್ಲಿರುವ ಮೃತ ಇನ್ಸ್‌ಪೆಕ್ಟರ್ ಮನೆಗೆ ಕಳುಹಿಸಲಾಯಿತು.
ನವದೆಹಲಿ: ದುರಂತ ಘಟನೆಯೊಂದರಲ್ಲಿ, ಉತ್ತರ ಪ್ರದೇಶದ ಅಲಿಗಢ್ ರೈಲು ನಿಲ್ದಾಣದಲ್ಲಿ ಚಲಿಸುವ ರೈಲು ಮತ್ತು ಪ್ಲಾಟ್‌ಫಾರ್ಮ್‌ನ ನಡುವೆ ಬಿದ್ದು ಆರ್‌ಎಎಫ್ ಜವಾನ ಮೃತಪಟ್ಟಿದ್ದಾರೆ. ರಜೆ ಪಡೆದು ಮನೆಗೆ ಹೊರಟಿದ್ದ ಸೈನಿಕ ರೈಲು ಹತ್ತಲು ಪ್ಲಾಟ್‌ಫಾರ್ಮ್ ಮೇಲೆ ನಡೆಯುತ್ತಿದ್ದಾಗ ಕಾಲು ಜಾರಿ ರೈಲಿನಡಿ ಬಿದ್ದಿದ್ದಾರೆ. ತಕ್ಷಣ ಅವರನ್ನು ಜೆಎನ್ ವೈದ್ಯಕೀಯ ಕಾಲೇಜಿಗೆ ಸೇರಿಸಲಾಯಿತು. ಆದರೆ, ಚಿಕಿತ್ಸೆಯ ಸಮಯದಲ್ಲಿ ಅವರು ಪ್ರಾಣ ಕಳೆದುಕೊಂಡಿದ್ದಾರೆ. ಈ ಘಟನೆಯ ಭಯಾನಕ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಮೃತರನ್ನು ಅಲಿಗಢ್‌ನ 104ನೇ ಬೆಟಾಲಿಯನ್‌ನಲ್ಲಿ ನಿಯೋಜಿಸಲಾಗಿದ್ದ ಎಎಸ್‌ಐ ಬಿಂದಾ ರೈ ಎಂದು ಗುರುತಿಸಲಾಗಿದ್ದು, ಬಿಹಾರದ ಪಾಟ್ನಾ ಜಿಲ್ಲೆಯ ಸೈನಿಕ ಕಾಲೋನಿ ದಾನಪುರ ರಸ್ತೆ ನಿವಾಸಿಯಾಗಿದ್ದಾರೆ. ರಜೆಯ ಮೇಲೆ ಬಿಹಾರದ ಮನೆಗೆ ಹೋಗುತ್ತಿದ್ದರು. ಭಾನುವಾರ ರಾತ್ರಿ ಬಿಹಾರಕ್ಕೆ ತೆರಳಲು ಅಲಿಗಢ ನಿಲ್ದಾಣ ತಲುಪಿ ಎಸಿ ಕೋಚ್ ನಲ್ಲಿ ರಿಸರ್ವೇಶನ್ ಮಾಡಿಕೊಂಡಿದ್ದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ