ರಾಮನಗರ: ಶಾಲಾ ಬಾಲಕಿಯರಿಗೆ ವ್ಯಕ್ತಿಯೋರ್ವನಿಂದ ರ‍್ಯಾಗಿಂಗ್! ಕೆಲ ವಿದ್ಯಾರ್ಥಿಗಳ ಮುಂದೆ ಅಲ್ಲಾಹು ಅಕ್ಬರ್ ಎಂದು ಕೂಗಾಟ
ಶಾಲಾ ಬಾಲಕಿಯರಿಗೆ ಮುಸ್ಲಿಂ ವ್ಯಕ್ತಿಯೋರ್ವ ರ‍್ಯಾಗಿಂಗ್ (Ragging) ಮಾಡಿದ ಘಟನೆ ರಾಮನಗರ (Ramanagara) ಪಟ್ಟಣದ ಗ್ರಂಥಾಲಯ ಬಳಿ ನಡೆದಿದೆ. ಕಳೆದೆರಡು ತಿಂಗಳುಗಳಿಂದ ವಿದ್ಯಾರ್ಥಿಗಳ ಜೊತೆ ಅಸಭ್ಯ ವರ್ತನೆ ತೋರುತ್ತಿದ್ದು, ಕೂಡಲೇ ವ್ಯಕ್ತಿಗೆ ಬಂಧಿಸುವಂತೆ ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.
ರಾಮನಗರ, ಡಿ.19: ಶಾಲಾ ಬಾಲಕಿಯರಿಗೆ ಮುಸ್ಲಿಂ ವ್ಯಕ್ತಿಯೋರ್ವ ರ‍್ಯಾಗಿಂಗ್ (Ragging) ಮಾಡಿದ ಘಟನೆ ರಾಮನಗರ (Ramanagara) ಪಟ್ಟಣದ ಗ್ರಂಥಾಲಯ ಬಳಿ ನಡೆದಿದೆ. ಕಳೆದೆರಡು ತಿಂಗಳುಗಳಿಂದ ವಿದ್ಯಾರ್ಥಿಗಳ ಜೊತೆ ಅಸಭ್ಯ ವರ್ತನೆ ತೋರುತ್ತಿದ್ದು, ಬಾಲಕಿಯರ ಬಳಿ ತೆರಳಿ ಚೋಲಿ ಕೆ ಪೀಚೆ ಕ್ಯಾ ಹೈ ಹಾಡು ಹೇಳುವುದಲ್ಲದೆ, ಕೆಲ ವಿದ್ಯಾರ್ಥಿಗಳ ಮುಂದೆ ಅಲ್ಲಾಹು ಅಕ್ಬರ್ ಎಂದು ಕೂಗಾಡುತ್ತಿದ್ದಾನೆ. ಇದರಿಂದ ಶಾಲೆಗೆ ಹೋಗಿ ಬರುವ ವಿದ್ಯಾರ್ಥಿಗಳಿಗೆ ಆತಂಕ ಶುರುವಾಗಿದೆ. ಇನ್ನು ಅಪ್ರಾಪ್ತ ಬಾಲಕಿಯರಿಗೆ ದುರುಗುಟ್ಟಿ ನೋಡುವ ಹಿನ್ನಲೆ ನಿನ್ನೆ ಕೆಲವರು ಧರ್ಮದೇಟು ಕೊಟ್ಟಿದ್ದು, ಕೂಡಲೇ ವ್ಯಕ್ತಿಗೆ ಬಂಧಿಸುವಂತೆ ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.
ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ
Published on: Dec 19, 2023 05:39 PM
Latest Videos