ವಾಲಿಬಾಲ್ ಟಚ್ ಆಯ್ತು ಎಂದು ಜಗಳ; ರಾಡ್​ನಿಂದ ವಿದ್ಯಾರ್ಥಿಯಿಂದ ಮತ್ತೊಂದು ವಿದ್ಯಾರ್ಥಿ ಮೇಲೆ ಹಲ್ಲೆ

ರಾಮನಗರ ಜಿಲ್ಲೆ ಚನ್ನಪಟ್ಟಣದಲ್ಲಿರುವ ಮೋರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳು ವಾಲಿಬಾಲ್ ವಿಚಾರಕ್ಕೆ ಜಗಳ ಮಾಡಿಕೊಂಡಿದ್ದಾರೆ. ಪುನೀತ್ ಎಂಬ ವಿದ್ಯಾರ್ಥಿ ಕಾಲಿಗೆ ವಾಲಿಬಾಲ್ ಟಚ್ ಆದ ಕಾರಣ ಪುನೀತ್, ಸೊಳ್ಳೆ ಪರದೆ ಹಾಕಲು ಅಳವಡಿಸಲಾಗಿದ್ದ ರಾಡ್​ನಿಂದ ರಾಹುಲ್ ಎಂಬ ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಿದ್ದಾನೆ. ಹೊಡೆದಿರೋ ವಿಚಾರ ಪೋಷಕರಿಗೆ ತಿಳಿಸಿದ್ರೇ ಅಷ್ಟೇ. ಗೊತ್ತಲ್ಲ‌ ಇಲ್ಲಿ ನಾನೇ ಪ್ರಧಾನ ಮಂತ್ರಿ, ಇಲ್ಲಿ ನಂದೇ ರೂಲ್ಸ್ ಅಂತ ವಾರ್ನಿಂಗ್ ಮಾಡಿದ್ದಾನೆ.

ವಾಲಿಬಾಲ್ ಟಚ್ ಆಯ್ತು ಎಂದು ಜಗಳ; ರಾಡ್​ನಿಂದ ವಿದ್ಯಾರ್ಥಿಯಿಂದ ಮತ್ತೊಂದು ವಿದ್ಯಾರ್ಥಿ ಮೇಲೆ ಹಲ್ಲೆ
ರಾಡ್​ನಿಂದ ವಿದ್ಯಾರ್ಥಿಯಿಂದ ಮತ್ತೊಂದು ವಿದ್ಯಾರ್ಥಿ ಮೇಲೆ ಹಲ್ಲೆ
Follow us
ಸೈಯ್ಯದ್​ ನಿಜಾಮುದ್ದೀನ್​, ರಾಮನಗರ
| Updated By: ಆಯೇಷಾ ಬಾನು

Updated on: Sep 19, 2023 | 9:41 AM

ರಾಮನಗರ, ಸೆ. 19: ಹತ್ತನೇ ತರಗತಿ ವಿದ್ಯಾರ್ಥಿ(Students) 9ನೇ ತರಗತಿ ವಿದ್ಯಾರ್ಥಿಗೆ ರಾಡ್​ನಿಂದ‌ ಹಲ್ಲೆ ಮಾಡಿರುವ ಘಟನೆ ರಾಮನಗರ ಜಿಲ್ಲೆ ಚನ್ನಪಟ್ಟಣದಲ್ಲಿರುವ ಮೋರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಡೆದಿದೆ. ರಾಹುಲ್ (14) ಹಲ್ಲೆಗೊಳಗಾದ ವಿದ್ಯಾರ್ಥಿ. ಪುನೀತ್ ಗೌಡ ಎಂಬ ವಿದ್ಯಾರ್ಥಿ ಮೇಲೆ ದೂರು ದಾಖಲಾಗಿದೆ. ಸೆ.12ರಂದು ನಡೆದಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. 10ನೇ ತರಗತಿ ಓದುತ್ತಿರುವ ಪುನೀತ್, ಶಾಲೆಯ ಚುನಾವಣೆಯಲ್ಲಿ ಪ್ರಧಾನಿ ಪಟ್ಟ ಗಿಟ್ಟಿಸಿಕೊಂಡಿದ್ದ. ಅಲ್ಲಿಂದ ಶಾಲೆಯಲ್ಲಿ ತನ್ನ ಹಿಡಿತ ಸಾಧಿಸಲು ಶುರು ಮಾಡಿದ್ದ. ಸದ್ಯ ಇಬ್ಬರು ವಿದ್ಯಾರ್ಥಿಗಳ ನಡುವೆ ಚಿಕ್ಕ ಗಲಾಟೆಯಾಗಿದ್ದು ಹಲ್ಲೆ ನಡೆದಿದೆ.

ಪುನೀತ್ ಶಾಲೆಯ ಪ್ರಧಾನಿ ಎಂಬ ಸೊಕ್ಕಿನಲ್ಲಿ ತಾನು ಏನೇ ಮಾಡಿದ್ರು ಯಾರೂ ತನ್ನ ವಿರುದ್ಧ ಮಾತಾಡಬಾರದು ಅಂತ ವಾರ್ನಿಂಗ್ ಕೊಟ್ಟಿದ್ದನಂತೆ. ಸೆ.12ರ ರಾತ್ರಿ ಊಟದ ಬಳಿಕ ರಾಹುಲ್ ವಾಲಿಬಾಲ್ ಆಡಲು ತೆರಳಿದ್ದ. ರಾಹುಲ್ ತೆರಳುವ ದಾರಿಯಲ್ಲಿ ಪುನೀತ್ ಕೂತಿದ್ದ. ಈ ವೇಳೆ ನನ್ನ ಕಾಲಿಗೆ ಏನಾದ್ರು ವಾಲಿಬಾಲ್ ಟಚ್ ಆದರೆ ಪರಿಣಾಮ ನೆಟ್ಟಗಿರಲ್ಲ ಎಂದು ರಾಹುಲ್​ಗೆ ಬವಾರ್ನಿಂಗ್ ಕೊಟ್ಟಿದ್ದಾನೆ. ಆಟ ಆಡುವ ವೇಳೆ ಅಜಾನಕ್ ಆಗಿ ಪುನೀತ್ ಕಾಲಿಗೆ ವಾಲಿಬಾಲ್ ಟಚ್ ಆಗಿದೆ. ಇದರಿಂದ ಕೋಪಗೊಂಡ ಪುನೀತ್, ಸೊಳ್ಳೆ ಪರದೆ ಹಾಕಲು ಅಳವಡಿಸಲಾಗಿದ್ದ ರಾಡ್​ನಿಂದ ಹಲ್ಲೆ ನಡೆಸಿದ್ದಾನೆ. ಹೊಡೆದಿರೋ ವಿಚಾರ ಪೋಷಕರಿಗೆ ತಿಳಿಸಿದ್ರೇ ಅಷ್ಟೇ. ಗೊತ್ತಲ್ಲ‌ ಇಲ್ಲಿ ನಾನೇ ಪ್ರಧಾನ ಮಂತ್ರಿ, ಇಲ್ಲಿ ನಂದೇ ರೂಲ್ಸ್ ಅಂತ ವಾರ್ನಿಂಗ್ ಕೊಟ್ಟಿದ್ದಾನೆ.

ಇದನ್ನೂ ಓದಿ: ಕುಡಿದ ಮತ್ತಿನಲ್ಲಿ ಪತ್ನಿಯ ನಂಬರ್ ಕೇಳಿದ ಸ್ನೇಹಿತನ ಮೇಲೆ ಹಲ್ಲೆ,‌ ರೌಡಿಶೀಟರ್ ಮನೆಗೆ ದಾಳಿ

ಇನ್ನು ಹಲ್ಲೆ ನಂತರವೂ ರಾಹುಲ್ ಮೇಲೆ ಪುನೀತ್ ದಬ್ಬಾಳಿಕೆ ಮುಂದುವರೆದಿದ್ದು ಮಾನಸಿಕವಾಗಿ ಕುಗ್ಗಿದ್ದ ರಾಹುಲ್ ಕೊನೆಗೂ ತನ್ನ ತಂದೆ ಬಳಿ ತನ್ನ ಮೇಲಿನ ಹಲ್ಲೆ ಬಗ್ಗೆ ತಿಳಿಸಿದ್ದಾನೆ. ಅಲ್ಲದೆ ಹಲ್ಲೆ ಬಳಿಕ ತಾನೇ ಬಿದ್ದೆ ಅಂತ ಹೇಳು ಎಂದು ಪುನೀತ್, ರಾಹುಲ್​ಗೆ ಐಡಿಯಾ ಕೊಟ್ಟಿದ್ದ ಜೊತೆಗೆ ಮೊರಾರ್ಜಿ ದೇಸಾಯಿ ಶಾಲೆ ಪ್ರಾಂಶುಪಾಲರು ಕೂಡ ಹಲ್ಲೆಯ ವಿಚಾರ ಹೇಳದಂತೆ ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಕಾಟ್ ಮೇಲಿಂದ‌‌ ಬಿದ್ದೆ ಅಂತ ಹೇಳು, ಇಲ್ದಿದ್ರೆ ಚೆನ್ನಾಗಿರಲ್ಲ ಅಂತ ಪ್ರಾಂಶುಪಾಲರು ಬೆದರಿಕೆ ಹಾಕಿದ್ದರಂತೆ. ಹಲ್ಲೆ ವಿಚಾರ ಮನೆಯಲ್ಲಿ ತಿಳಿಸದ ಕಾರಣ ಪುನೀತ್ ಮತ್ತೆ ರ‍್ಯಾಗಿಂಗ್‌ ಶುರುಮಾಡಿದ್ದನಂತೆ. ಸದ್ಯ ಘಟನೆ ಸಂಬಂಧ ಚನ್ನಪಟ್ಟಣ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ದೂರು ದಾಖಲಿಸಿಕೊಂಡು ಪೊಲೀಸರು ಪರಿಶೀಲನೆ ಆರಂಭಿಸಿದ್ದಾರೆ.

ರಾಮನಗರಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ