‘ಮನೆಯಲ್ಲಿ ಒಂದು ಕಡೆ ಪೂಜೆ, ಇನ್ನೊಂದು ಕಡೆ ನಮಾಜ್’: ‘13’ ಚಿತ್ರದ ಬಗ್ಗೆ ವಿವರಿಸಿದ ರಾಘಣ್ಣ
‘ಜೀವನದಲ್ಲಿ ಗಂಡು-ಹೆಣ್ಣು ಎಂಬುದು ಮುಖ್ಯವಾಗುತ್ತದೆ. ಯಾವ ಧರ್ಮ ಎಂಬುದು ಮುಖ್ಯವಾಗುವುದಿಲ್ಲ. ಮನೆಯಲ್ಲಿ ಒಂದು ಕಡೆ ಪೂಜೆ, ಇನ್ನೊಂದು ಕಡೆ ನಮಾಜ್ ನಡೆಯುತ್ತದೆ’ ಎಂದು ಹೇಳುವ ಮೂಲಕ ‘13’ ಸಿನಿಮಾದ ಕಥಾಹಂದರದ ಬಗ್ಗೆ ರಾಘವೇಂದ್ರ ರಾಜ್ಕುಮಾರ್ ಅವರು ಸುಳಿವು ಬಿಟ್ಟುಕೊಟ್ಟಿದ್ದಾರೆ. ಅವರಿಗೆ ಜೋಡಿಯಾಗಿ ಶ್ರುತಿ ನಟಿಸಿದ್ದಾರೆ.
ರಾಘವೇಂದ್ರ ರಾಜ್ಕುಮಾರ್ (Raghavendra Rajkumar) ನಟನೆಯ ‘13’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈ ಸಿನಿಮಾಗೆ ಕೆ. ನಾಗೇಂದ್ರ ಬಾಬು ಅವರು ನಿರ್ದೇಶನ ಮಾಡಿದ್ದಾರೆ. ಪ್ರಮೋದ್ ಶೆಟ್ಟಿ, ಶ್ರುತಿ ಮುಂತಾದವರು ಕೂಡ ಈ ಸಿನಿಮಾದಲ್ಲಿ ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ. ‘13’ (13 Kannada Movie) ಚಿತ್ರದಲ್ಲಿ ರಾಘವೇಂದ್ರ ರಾಜ್ಕುಮಾರ್ ಅವರು ಹಿಂದೂ ವ್ಯಕ್ತಿಯಾಗಿ ಕಾಣಿಸಿಕೊಂಡಿದ್ದರೆ, ಶ್ರುತಿ ಅವರು ಮುಸ್ಲಿಂ ಮಹಿಳೆಯ ಪಾತ್ರ ಮಾಡಿದ್ದಾರೆ. ಆ ಸಾಮರಸ್ಯದ ಬಗ್ಗೆ ರಾಘಣ್ಣ ವಿವರಿಸಿದ್ದಾರೆ. ‘ಜೀವನದಲ್ಲಿ ಗಂಡು-ಹೆಣ್ಣು ಎಂಬುದು ಮುಖ್ಯವಾಗುತ್ತದೆ. ಯಾವ ಧರ್ಮ ಎಂಬುದು ಮುಖ್ಯವಾಗುವುದಿಲ್ಲ. ಮನೆಯಲ್ಲಿ ಒಂದು ಕಡೆ ಪೂಜೆ, ಇನ್ನೊಂದು ಕಡೆ ನಮಾಜ್ ನಡೆಯುತ್ತದೆ. ಶ್ರುತಿ (Shruthi) ಅವರು ಅದ್ಭುತವಾಗಿ ನಟಿಸಿದ್ದಾರೆ’ ಎಂದು ರಾಘವೇಂದ್ರ ರಾಜ್ಕುಮಾರ್ ಹೇಳಿದ್ದಾರೆ. ‘ಸಂದೇಶ ಕೊಡಲು ಈ ಸಿನಿಮಾ ಮಾಡಿಲ್ಲ. ಮನರಂಜನೆ ನೀಡುವ ಉದ್ದೇಶದಿಂದ ಈ ಚಿತ್ರ ಮಾಡಿದ್ದೇವೆ’ ಎಂದಿದ್ದಾರೆ ರಾಘಣ್ಣ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.