‘ಅಪ್ಪಾಜಿ ಸಿನಿಮಾದ ಕೊನೆಯ ಶಾಟ್ ಅಪ್ಪುನ ಮಣ್ಣು ಮಾಡಿದಲ್ಲೇ ತೆಗೆದಿದ್ದು’; ಭಾವುಕರಾದ ರಾಘಣ್ಣ

| Updated By: ರಾಜೇಶ್ ದುಗ್ಗುಮನೆ

Updated on: Oct 29, 2022 | 3:51 PM

ಪುನೀತ್ ಅವರನ್ನು ಮಣ್ಣು ಮಾಡಿದ ಜಾಗದಲ್ಲೇ ರಾಜ್​ಕುಮಾರ್ ಕೊನೆಯ ಸಿನಿಮಾದ ಶಾಟ್​ ಅನ್ನು ತೆಗೆಯಲಾಗಿತ್ತು. ಈ ಬಗ್ಗೆ ರಾಘಣ್ಣ ಅವರು ಮಾಹಿತಿ ಹಂಚಿಕೊಂಡಿದ್ದಾರೆ.

ಪುನೀತ್ ರಾಜ್​ಕುಮಾರ್ (Puneeth Rajkumar) ಅವರು ನಿಧನ ಹೊಂದಿ ಒಂದು ವರ್ಷ ಕಳೆದು ಹೋಗಿದೆ. ಅವರಿಲ್ಲ ಎಂಬ ನೋವನ್ನು ಯಾರಿಂದಲೂ ಅರಗಿಸಿಕೊಳ್ಳೋಕೆ ಆಗುತ್ತಿಲ್ಲ. ಪುನೀತ್ ಅವರನ್ನು ಕಂಠೀರವ ಸ್ಟುಡಿಯೋದಲ್ಲಿ ಮಣ್ಣು ಮಾಡಲಾಗಿದೆ. ಪುನೀತ್ ಅವರನ್ನು ಮಣ್ಣು ಮಾಡಿದ ಜಾಗದಲ್ಲೇ ರಾಜ್​ಕುಮಾರ್ (Rajkumar) ಕೊನೆಯ ಸಿನಿಮಾದ ಶಾಟ್​ ಅನ್ನು ತೆಗೆಯಲಾಗಿತ್ತು. ಈ ಬಗ್ಗೆ ರಾಘಣ್ಣ ಅವರು ಮಾಹಿತಿ ಹಂಚಿಕೊಂಡಿದ್ದಾರೆ.