‘ಡಾ. ರಾಜ್ಕುಮಾರ್ ಬಗ್ಗೆ ಅವರ ತಂದೆ ನುಡಿದಿದ್ರು ಭವಿಷ್ಯ’: ಅಚ್ಚರಿಯ ಘಟನೆ ಮೆಲುಕು ಹಾಕಿದ ರಾಘಣ್ಣ
Dr Rajkumar: ಕರ್ನಾಟಕ ರಾಜ್ಯ ಚಲನಚಿತ್ರ ಪ್ರದಾನ ಸಮಾರಂಭದಲ್ಲಿ ನಟ ರಾಘವೇಂದ್ರ ರಾಜ್ಕುಮಾರ್ ಮಾತನಾಡಿದರು. ಈ ವೇಳೆ ಅವರು ಡಾ. ರಾಜ್ಕುಮಾರ್ ಕುರಿತು ಕೆಲವು ಸಂಗತಿಗಳನ್ನು ನೆನಪಿಸಿಕೊಂಡರು.
ಡಾ. ರಾಜ್ಕುಮಾರ್ (Dr Rajkumar) ಅವರದ್ದು ಕಲಾವಿದರ ಕುಟುಂಬ. ಅವರ ತಂದೆಯ ಕಾಲದಿಂದಲೂ ಆ ಕುಟುಂಬ ಕಲೆಗೆ ಮೀಸಲಾಗಿತ್ತು. ರಾಜ್ಕುಮಾರ್ ಅವರನ್ನು ಸಿನಿಮಾದಲ್ಲಿ ಹೀರೋ ಆಗಿಸಬೇಕು ಎಂಬುದು ಅವರ ತಂದೆಯ ಆಸೆ ಆಗಿತ್ತು. ಅದಕ್ಕಾಗಿ ಅವರು ಕೆಲವು ಪ್ರಯತ್ನಗಳನ್ನೂ ಮಾಡಿದ್ದರು. ಒಮ್ಮೆ ಆ ಕುರಿತು ಭವಿಷ್ಯ ಕೂಡ ನುಡಿದಿದ್ದರಂತೆ. ಆ ಘಟನೆಯನ್ನು ರಾಘವೇಂದ್ರ ರಾಜ್ಕುಮಾರ್ (Raghavendra Rajkumar) ಅವರು ಈಗ ಮೆಲುಕು ಹಾಕಿದ್ದಾರೆ. ಕರ್ನಾಟಕ ಚಲನಚಿತ್ರ ರಾಜ್ಯ ಪ್ರಶಸ್ತಿ (Karnataka State Film Awards) ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು. ‘ಈ ರಾಜ್ಯದಲ್ಲಿ ಕಲಾರಂಗವನ್ನು ನೀನು ಆಳುತ್ತೀಯ. ಒಂದು ವೇಳೆ ಈ ಮಾತು ನಿಜವಾಗದೇ ಇದ್ದರೆ ನೀನು ನನ್ನ ಮಗನೇ ಅಲ್ಲ ಅಂತ ಅಂದುಕೋ ಎಂದು ಅಪ್ಪಾಜಿಗೆ ನಮ್ಮ ತಾತ ಹೇಳಿದ್ದರು’ ಎಂದಿದ್ದಾರೆ ರಾಘವೇಂದ್ರ ರಾಜ್ಕುಮಾರ್. ಡಾ. ರಾಜ್ಕುಮಾರ್ ಅವರ ಹುಟ್ಟುಹಬ್ಬದ ದಿನವೇ (ಏ.24) ರಾಜ್ಯ ಪ್ರಶಸ್ತಿಗಳನ್ನು ನೀಡಿರುವುದು ತಮಗೆ ಖುಷಿ ನೀಡಿದೆ ಎಂದು ಅವರು ಹೇಳಿದರು.
ಇದನ್ನೂ ಓದಿ:
ಮೇರುನಟ ಡಾ. ರಾಜ್ಕುಮಾರ್ ಸ್ಮರಿಸಿದ ಗಣ್ಯರು; ಅಣ್ಣಾವ್ರ ಜನ್ಮದಿನಕ್ಕೆ ಅಭಿಮಾನದ ಹೊಳೆ
‘ಅಣ್ಣ ನನ್ನನ್ನು ಒಂಟಿಯಾಗಿ ಬಿಟ್ಟು ಹೋಗಿದ್ದಾರೆ’; ರಾಜ್ಕುಮಾರ್ ನೆನೆದು ಸಹೋದರಿ ನಾಗಮ್ಮ ಕಣ್ಣೀರು