’13’ ಸಿನಿಮಾದಲ್ಲಿ ಯಾರು ನಾಯಕ? ರಾಘವೇಂದ್ರ ರಾಜ್​ಕುಮಾರ್ ಹೇಳಿದ್ದು ಹೀಗೆ

|

Updated on: Sep 05, 2023 | 10:54 PM

Raghavendra Rajkumar: ರಾಘವೇಂದ್ರ ರಾಜ್​ಕುಮಾರ್ ಮುಖ್ಯ ಪಾತ್ರದಲ್ಲಿ ನಟಿಸಿರುವ '13' ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗುತ್ತಿದೆ. ಸಿನಿಮಾದಲ್ಲಿ ನಟಿ ಶ್ರುತಿ, ಪ್ರಮೋದ್ ಶೆಟ್ಟಿ ಇನ್ನಿತರರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ರಾಘವೇಂದ್ರ ರಾಜ್​ಕುಮಾರ್, ಶ್ರುತಿ ನಟಿಸಿರುವ ’13’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾದ ಸುದ್ದಿಗೋಷ್ಠಿಗೆ ಆಗಮಿಸಿದ್ದ ನಟ ರಾಘವೇಂದ್ರ ರಾಜ್​ಕುಮಾರ್ ಸಿನಿಮಾ ಬಗ್ಗೆ ಮಾತನಾಡುತ್ತಾ, ಈ ಸಿನಿಮಾದಲ್ಲಿ ನಾಯಕ-ನಾಯಕಿ ಎಂದೇನೂ ಇಲ್ಲ, ಸಿನಿಮಾದ ಕತೆ, ಚಿತ್ರಕತೆ, ಸಿನಿಮಾಕ್ಕೆ ನೀಡಿರುವ ಟ್ರೀಟ್​ಮೆಂಟ್ ನಾಯಕ. ಸಿನಿಮಾವನ್ನು ಚೆನ್ನಾಗಿ ಮಾಡುವುದು ನಮ್ಮ ಕರ್ತವ್ಯವಾಗಿತ್ತು, ಅದನ್ನು ನಿಭಾಯಿಸಿದ್ದೇವೆ, ಇನ್ನುಳಿದಿದ್ದನ್ನು ಪ್ರೇಕ್ಷಕರು ಮಾಡುತ್ತಾರೆ. ಸಿನಿಮಾವನ್ನು ನೋಡಲು ಬೇಕಾದ ಸಾಕಷ್ಟು ಅಂಶಗಳು ಈ ಸಿನಿಮಾದಲ್ಲಿವೆ ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ