ರಾಜ್ಕುಮಾರ್ ಹುಟ್ಟಿದ ಗಾಜನೂರಿನಲ್ಲೇ ಸಿನಿಮಾ ಮುಹೂರ್ತ; ಪ್ರಮುಖ ಪಾತ್ರದಲ್ಲಿ ರಾಘಣ್ಣ
ರಾಘವೇಂದ್ರ ರಾಜ್ಕುಮಾರ್ ಮುಖ್ಯಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಸಿನಿಮಾದ ಮುಹೂರ್ತ ಗಾಜನೂರಿನಲ್ಲೇ ನಡೆಯಲಿದೆ. ಈ ಸಲುವಾಗಿ ರಾಘವೇಂದ್ರ ರಾಜ್ಕುಮಾರ್ ಗಾಜನೂರಿಗೆ ಭೇಟಿ ನೀಡಿದ್ದಾರೆ. ‘ಖಡಕ್ ಹಳ್ಳಿ ಹುಡುಗರು’ ಅನ್ನೋದು ಸಿನಿಮಾದ ಹೆಸರು. ಈ ಚಿತ್ರದ ಬಗ್ಗೆ ಅವರು ಮಾಹಿತಿ ನೀಡಿದ್ದಾರೆ.
ಡಾ. ರಾಜ್ಕುಮಾರ್ ಅವರು (Dr Rajkumar) ಹುಟ್ಟಿದ್ದು ಚಾಮರಾಜನಗರದ ಗಾಜನೂರಿನಲ್ಲಿ. ವಿಶೇಷ ಎಂದರೆ ರಾಘವೇಂದ್ರ ರಾಜ್ಕುಮಾರ್ ಮುಖ್ಯಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಸಿನಿಮಾದ ಮುಹೂರ್ತ ಗಾಜನೂರಿನಲ್ಲೇ ನಡೆಯಲಿದೆ. ಈ ಸಲುವಾಗಿ ರಾಘವೇಂದ್ರ ರಾಜ್ಕುಮಾರ್ (Raghavendra Rajkumar) ಗಾಜನೂರಿಗೆ ಭೇಟಿ ನೀಡಿದ್ದಾರೆ. ‘ಖಡಕ್ ಹಳ್ಳಿ ಹುಡುಗರು’ ಅನ್ನೋದು ಸಿನಿಮಾದ ಹೆಸರು. ಈ ಚಿತ್ರದ ಬಗ್ಗೆ ಅವರು ಮಾಹಿತಿ ನೀಡಿದ್ದಾರೆ. ‘ಗಾಜನೂರಿನಲ್ಲಿ (Gajanur) ಸಂಪತ್ತಿಗೆ ಸವಾಲ್, ಶ್ರೀನಿವಾಸ ಕಲ್ಯಾಣ ಚಿತ್ರಗಳ ಶೂಟಿಂಗ್ ಆಗಿದೆ. ಆದರೆ, ಯಾವುದೇ ಚಿತ್ರದ ಮುಹೂರ್ತ ನಡೆದಿಲ್ಲ. ಹೀಗಾಗಿ ಗಾಜನೂರಿನಲ್ಲೇ ಈ ಸಿನಿಮಾ ಮುಹೂರ್ತ ಮಾಡಿ, ನಮ್ಮ ಸೋದರತ್ತೆ ನಾಗಮ್ಮನ ಕೈಲಿ ಪೂಜೆ ಮಾಡಿಸುತ್ತೇವೆ. ನಾನು ಈ ಚಿತ್ರದ ಹೀರೋ ಅಲ್ಲ. ಆದರೆ, ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದೇನೆ. ಅಪ್ಪಾಜಿ ಹುಟ್ಟಿದ ಮನೆ, ಓದಿದ ಶಾಲೆ, ಮಂಟೇಸ್ವಾಮಿ ದೇವಾಲಯದಲ್ಲಿ ಚಿತ್ರೀಕರಣ ನಡೆಯುತ್ತದೆ. ‘ಕನ್ನಡಕ್ಕೆ ಮೊದಲ ಗೌರವ..’ ಎಂಬ ಹಾಡಿನ ಚಿತ್ರೀಕರಣ ಇಲ್ಲೇ ನಡೆಯಲಿದೆ’ ಎಂದಿದ್ದಾರೆ ರಾಘವೇಂದ್ರ ರಾಜ್ಕುಮಾರ್.
ಇದನ್ನೂ ಓದಿ: ಪಟಾಕಿ ಯಾರದ್ದೇ ಆಗಿರ್ಲಿ, ಹಚ್ಚೋದು ಮಾತ್ರ ಪುನೀತ್ ರಾಜ್ಕುಮಾರ್: ವಂಶಿಕಾ ಸೂಪರ್ ಮಾತು
‘ವೇದ’ ಸಿನಿಮಾ ಮಾಡುವಾಗ ನನ್ನಲ್ಲಿ ಅಪ್ಪುನ ಹುಡಕೋ ಪ್ರಯತ್ನ ಮಾಡಿದ್ದೇನೆ; ಶಿವರಾಜ್ಕುಮಾರ್