ಅಪ್ಪಾಜಿ ಕಿಡ್ನಾಪ್ ಆಗಿ ವಾಪಸ್ ಬಂದಾಗ ಆದಷ್ಟು ಸಂತೋಷ ಈಗ ಆಗಿದೆ: ರಾಘಣ್ಣ
‘ಶಿವರಾಜ್ಕುಮಾರ್ ಚಿಕಿತ್ಸೆಗಾಗಿ ಅಮೆರಿಕಕ್ಕೆ ಹೋಗುವಾಗ ದುಃಖದಲ್ಲಿ ಕಳಿಸಿಕೊಟ್ಟೆವು. ಇಂದು ಯಶಸ್ವಿ ಚಿಕಿತ್ಸೆ ಮುಗಿಸಿಕೊಂಡು ವಾಪಸ್ ಬಂದಿದ್ದಾನೆ. ಒಬ್ಬ ಮಗನಿಗೆ ತಂದೆಯನ್ನು ನೋಡಿದಾಗ ಎಷ್ಟು ಖುಷಿ ಆಗತ್ತೋ ಅಷ್ಟೇ ಖುಷಿ ನನಗೆ ಆಗಿದೆ. ಅಭಿಮಾನಿಗಳ ಪೂಜೆಯೇ ಅವನನ್ನು ವಾಪಸ್ ಕರೆದುಕೊಂಡಿದೆ’ ಎಂದು ನಟ ರಾಘವೇಂದ್ರ ರಾಜ್ಕುಮಾರ್ ಅವರು ಹೇಳಿದ್ದಾರೆ.
ನಟ ಶಿವರಾಜ್ಕುಮಾರ್ ಅವರು ಅಮೆರಿಕದಲ್ಲಿ ಕ್ಯಾನ್ಸರ್ಗೆ ಚಿಕಿತ್ಸೆ ಪಡೆದು ಭಾರತಕ್ಕೆ ಮರಳಿದ್ದಾರೆ. ಅವರಿಗೆ ಅದ್ದೂರಿ ಸ್ವಾಗತ ಕೋರಲಾಗಿದೆ. ಈ ಖುಷಿಯಲ್ಲಿ ಸಹೋದರ ರಾಘವೇಂದ್ರ ರಾಜ್ಕುಮಾರ್ ಅವರು ಮಾತನಾಡಿದ್ದಾರೆ. ‘ನಮ್ಮ ತಂದೆ ಕಿಡ್ನಾಪ್ ಆಗಿ ಬಿಡುಗಡೆ ಆದಾಗ ಒಂದು ರೀತಿ ಸಂತೋಷ ಆಗಿತ್ತು. ನನಗೆ ಈ ದಿನ ಅದೇ ರೀತಿ ಫೀಲ್ ಆಗುತ್ತಿದೆ’ ಎಂದು ರಾಘಣ್ಣ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.