ಭಾರತ್ ಜೋಡೊ ಯಾತ್ರೆ ನಡೆಸುತ್ತಿರುವ ರಾಹುಲ್ ಗಾಂಧಿ ಬೆಂಗಳೂರಿನ ದಾಸರಹಳ್ಳಿ ಕ್ಷೇತ್ರಕ್ಕೊಮ್ಮೆ ಬಂದು ಪಕ್ಷದ ಕಾರ್ಯಕರ್ತರನ್ನು ನೋಡಬೇಕು!

Edited By:

Updated on: Nov 10, 2022 | 1:21 PM

ದಾಸರಹಳ್ಳಿ ಕ್ಷೇತ್ರಕ್ಕೆ ಪಕ್ಷದ ಉಸ್ತುವಾರಿಯಾಗಿರುವ ನಾಗಲಕ್ಷ್ಮಿ ಅವರು ಕಾಂಗ್ರೆಸ್ ಕಾರ್ಯಾಗಾರಕ್ಕೆ ಕೆಪಿಸಿಸಿ ಸದಸ್ಯರಾಗಿರುವ ಪಿ ಎನ್ ಕೃಷ್ಣಮೂರ್ತಿಯವರನ್ನು ಆಹ್ವಾನಿಸಿಲ್ಲ

ಬೆಂಗಳೂರು: ತಮ್ಮ ತಮ್ಮೊಳಗೆ ಬಡಿದಾಡುತ್ತಿರುವ ಕಾಂಗ್ರೆಸ್ ಕಾರ್ಯಕರ್ತರ ಅಗ್ರಗಣ್ಯ ನಾಯಕನಾಗಿರುವ ರಾಹುಲ್ ಗಾಂಧಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಭಾರತ ಜೋಡೋ ಯಾತ್ರೆ ಮಾಡುತ್ತಿದ್ದಾರೆ! ವಿರೋಧಾಭಾಸ ಅಂದರೆ ಇದೇ ಇರಬೇಕು. ಘಟನೆ ನಡೆದಿರುವುದು ಬೆಂಗಳೂರಿನ ದಾಸರಹಳ್ಳಿ ಕ್ಷೇತ್ರದಲ್ಲಿ. ವಿಷಯವೇನೆಂದರೆ, ದಾಸರಹಳ್ಳಿ ಕ್ಷೇತ್ರಕ್ಕೆ ಪಕ್ಷದ ಉಸ್ತುವಾರಿಯಾಗಿರುವ ನಾಗಲಕ್ಷ್ಮಿ ಅವರು ಕಾಂಗ್ರೆಸ್ ಕಾರ್ಯಾಗಾರಕ್ಕೆ ಕೆಪಿಸಿಸಿ ಸದಸ್ಯರಾಗಿರುವ ಪಿ ಎನ್ ಕೃಷ್ಣಮೂರ್ತಿಯವರನ್ನು ಆಹ್ವಾನಿಸಿಲ್ಲ. ಇದರಿಂದ ರೊಚ್ಚಿಗೆದ್ದಿರುವ ಕೃಷ್ಣಮೂರ್ತಿ ಬೆಂಬಲಿಗರು ಕಾರ್ಯಾಗಾರ ನಡೆಯುತ್ತಿದ್ದ ಸಭಾಂಗಣದಲ್ಲಿ ಗಲಾಟೆ ನಡೆಸಿದ್ದಾರೆ.