ಕಾಂಗ್ರೆಸ್ ಪಕ್ಷದ ವೋಟು ಒಡೆಯುವ ಉದ್ದೇಶದಿಂದ ಸರ್ಕಾರ ಟಿಪ್ಪು ಜಯಂತಿ ಆಚರಣೆಗೆ ಅವಕಾಶ ನೀಡಿದೆ: ಪ್ರಮೋದ್ ಮುತಾಲಿಕ್
ಟಿಪ್ಪು ಒಬ್ಬ ರಾಷ್ಟ್ರದ್ರೋಹಿ ಮತ್ತು ಧರ್ಮದ್ರೋಹಿ, ಅವನ ಜಯಂತಿಗೆ ಅವಕಾಶ ನೀಡಬಾರದಿತ್ತು ಎಂದು ಹೇಳಿದ ಮುತಾಲಿಕ್ ಸರ್ಕಾರದ ವಿರುದ್ಧ ಸಾರ್ವಜನಿಕ ಹಿತಾಸಕ್ತಿಯ ಮೊಕದ್ದಮೆ ಹೂಡುವುದಾಗಿ ಹೇಳಿದರು.
ಹುಬ್ಬಳ್ಳಿ: ರಾಜ್ಯದಲ್ಲಿ ಆಡಳಿತ ನಡೆಸಿತ್ತಿರುವ ಬಿಜೆಪಿ ಸರ್ಕಾರ ಕೇವಲ ರಾಜಕೀಯ ಉದ್ದೇಶವನ್ನಿಟ್ಟುಕೊಂಡು ಎಐಎಮ್ ಐ ಎಮ್ ನಂಥ (AIMIM) ರಾಷ್ಟ್ರದ್ರೋಹಿ ಸಂಘಟನೆಗೆ ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿ (Tipu Jayanti) ಆಚರಿಸಲು ಅವಕಾಶ ನೀಡಿದೆ ಎಂದು ಶ್ರೀರಾಮ ಸೇನೆ ಮುಖ್ಯಸ್ ಪ್ರಮೋದ್ ಮುತಾಲಿಕ್ (Pramod Muthalik) ಆರೋಪಿಸಿದರು. ಹುಬ್ಬಳ್ಳಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಅವರು, ಬೇರೆ ಮಹಾನುಭಾವರ ಜಯಂತಿ ಆಚರಿಸಲು ತಮ್ಮದೇನೂ ಅಭ್ಯಂತರವಿಲ್ಲ, ಅದರೆ ಟಿಪ್ಪು ಒಬ್ಬ ರಾಷ್ಟ್ರದ್ರೋಹಿ ಮತ್ತು ಧರ್ಮದ್ರೋಹಿ, ಅವನ ಜಯಂತಿಗೆ ಅವಕಾಶ ನೀಡಬಾರದಿತ್ತು ಎಂದು ಹೇಳಿದ ಮುತಾಲಿಕ್ ಸರ್ಕಾರದ ವಿರುದ್ಧ ಸಾರ್ವಜನಿಕ ಹಿತಾಸಕ್ತಿಯ ಮೊಕದ್ದಮೆ ಹೂಡುವುದಾಗಿ ಹೇಳಿದರು.
Latest Videos