AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಹುಲ್ ಗಾಂಧಿ ಅಪ್ರಬುದ್ಧ ಮತ್ತು ವಿರೋಧ ಪಕ್ಷದ ನಾಯಕನಾಗಲು ಅಸಮರ್ಥ: ಜಗದೀಶ್ ಶೆಟ್ಟರ್

ರಾಹುಲ್ ಗಾಂಧಿ ಅಪ್ರಬುದ್ಧ ಮತ್ತು ವಿರೋಧ ಪಕ್ಷದ ನಾಯಕನಾಗಲು ಅಸಮರ್ಥ: ಜಗದೀಶ್ ಶೆಟ್ಟರ್

ಅರುಣ್​ ಕುಮಾರ್​ ಬೆಳ್ಳಿ
|

Updated on: Aug 01, 2025 | 12:50 PM

Share

ಭಾರತದಿಂದ ಅಮೇರಿಕಕ್ಕೆ ರಫ್ತಾಗುವ ವಸ್ತುಗಳ ಮೇಲೆ ಡೊನಾಲ್ಡ್ ಟ್ರಂಪ್ ಶೇಕಡ 25 ರಷ್ಟು ತೆರಿಗೆ ವಿಧಿಸಿರುವುದು ಸರಿಯಲ್ಲ ಎಂದು ಹೇಳಿದ ಶೆಟ್ಟರ್, ರಷ್ಯಾದೊಂದಿಗೆ ವಾಣಿಜ್ಯ ಸಂಬಂಧಗಳನ್ನು ಭಾರತ ಹೊಂದಿರುವುದಕ್ಕೆ ದಂಡ ವಿಧಿಸಲಾಗುವುದು ಅಂತ ಹೇಳಿರುವುದು ಸಮಂಜಸವಲ್ಲ, ಅಮೇರಿಕ ಅಧ್ಯಕ್ಷನ ಕ್ರಮಗಳ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಮತ್ತು ವಾಣಿಜ್ಯ ಮಂತ್ರಾಲಯ ಉಪಕ್ರಮಗಳನ್ನು ಕೈಗೊಳ್ಳಲಿದ್ದಾರೆ ಎಂದು ಶೆಟ್ಟರ್ ಹೇಳಿದರು.

ಬೆಳಗಾವಿ, ಆಗಸ್ಟ್ 1: ರಾಹುಲ್ ಗಾಂಧಿ ಒಬ್ಬ ಅಪ್ರಬುದ್ಧ ರಾಜಕೀಯ ನಾಯಕ (immature leader), ಅವರು ಪ್ರತಿಪಕ್ಷದ ನಾಯಕನಾಗಲು ಅನರ್ಹ, ಯಾಕೆಂದರೆ ಅಮೆರಿಕದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ನೀಡಿದ ಹೇಳಿಕೆಯನ್ನು ರಾಹುಲ್ ಸಮರ್ಥನೆ ಮಾಡುತ್ತಾರೆ ಎಂದು ಬಿಜೆಪಿ ಸಂಸದ ಜಗದೀಶ್ ಶೆಟ್ಟರ್ ಹೇಳಿದರು. ಮಾಧ್ಯಮಗಳೊಂದಿಗೆ ಮಾತಾಡಿದ ಅವರು, ಸಂಸತ್ತಿನಲ್ಲಿ ರಾಹುಲ್ ಗಾಂಧಿ ವಿರೋಧ ಪಕ್ಷದ ನಾಯಕನಾಗಿ ವಿಫಲರಾಗಿದ್ದಾರೆ, ಪಾರ್ಲಿಮೆಂಟ್ ಸೆಷನ್​ನಲ್ಲಿ ಒಂದು ಮಾತಾಡುತ್ತಾರೆ ಮತ್ತು ಹೊರಗಡೆ ಹೋಗಿ ಬೇರೊಂದನ್ನು ಮಾತಾಡುತ್ತಾರೆ, ಪ್ರತಿಪಕ್ಷದ ನಾಯಕನಾಗಿ ದೇಶದ ಹಿತವನ್ನು ಕಾಪಾಡುವ ಜವಾಬ್ದಾರಿ ಅವರ ಮೇಲಿದೆ ಎಂದು ಶೆಟ್ಟರ್ ಹೇಳಿದರು.

ಇದನ್ನೂ ಓದಿ:  ನೀತಿ ಆಯೋಗದ ಸಭೆಗೆ ಸಿದ್ದರಾಮಯ್ಯ ಹೋಗದಿರುವುದು ಅಕ್ಷಮ್ಯ ಅಪರಾಧ: ಜಗದೀಶ್ ಶೆಟ್ಟರ್

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ