ಚಿಕ್ಕೋಡಿ: ಹಾಲು ಕುಡಿಯಬೇಕಿದ್ದ 5 ವರ್ಷದ ಮೊಮ್ಮಗನಿಗೆ ಮದ್ಯ ಕುಡಿಸಿದ ಅಜ್ಜ!
ಹಾಲು ಕುಡಿಯಬೇಕಿದ್ದ 5 ವರ್ಷದ ಬಾಲಕನಿಗೆ ಮದ್ಯ ಕುಡಿಸಿ ಅಜ್ಜನೋರ್ವ ವಿಕೃತಿ ಮೆರೆದಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗ ಪಟ್ಟಣದ ಬಾರ್ ಒಂದರಲ್ಲಿ ನಡೆದಿದೆ. ಅಲ್ಲಿದ್ದವರ ವಿರೋಧದ ನಡುವೆಯೂ ಗ್ಲಾಸ್ನಲ್ಲಿ ಮದ್ಯ ಹಾಕಿ ಮೊಮ್ಮಗನಿಗೆ ತಾತ ನೀಡಿರುವ ವಿಡಿಯೋ ಸಾಮಾಜಿಕ ಜಾಲತಾನದಲ್ಲಿ ವೈರಲ್ ಆಗಿದ್ದು, ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.
ಚಿಕ್ಕೋಡಿ, ಡಿಸೆಂಬರ್ 28: ಮದ್ಯ ಸೇವಿಸಲು ಬಾರ್ಗೆ ಸ್ನೇಹಿತರು,ಸಂಬಂಧಿಕರನ್ನು ಕರೆದುಕೊಂಡು ಹೋಗೋದನ್ನ ನಾವು ಕೇಳಿದ್ದೇವೆ, ನೋಡಿದ್ದೇವೆ. ಆದ್ರೆ ಬೆಳಗಾವಿಯಲ್ಲೊಬ್ಬ ಪಾಪಿ ಅಜ್ಜ ಮೊಮ್ಮಗನ ಬಾರ್ಗೆ ಕರೆದುಕೊಂಡು ಹೋಗಿದ್ದಲ್ಲದೆ ಆತನಿಗೆ ಎಣ್ಣೆ ಕುಡಿಸಿರುವ ವಿಡಿಯೋವೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬೆಳಗಾವಿ ಜಿಲ್ಲೆಯ ರಾಯಬಾಗ ಪಟ್ಟಣದ ಬಾರ್ ಒಂದರಲ್ಲಿ ಘಟನೆ ನಡೆದಿದ್ದು, ಅಲ್ಲಿದ್ದವರ ವಿರೋಧದ ನಡುವೆಯೂ ಅಜ್ಜ ಚಿಕ್ಕ ಹುಡುಗನಿಗೆ ಕುಡಿಯಲು ಮದ್ಯ ನೀಡಿದ್ದಾನೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
Published on: Dec 28, 2025 02:12 PM