ರಾಯಚೂರು ನಗರಸಭೆಯಲ್ಲಿನ ಲಂಚಾವತಾರ ಬಯಲು ಮಾಡಿದ ಸಾರ್ವಜನಿಕರು, ವಿಡಿಯೋ ವೈರಲ್

| Updated By: Rakesh Nayak Manchi

Updated on: Sep 11, 2023 | 9:17 AM

ರಾಯಚೂರು ನಗರಸಭೆಗೆ ಹೋಗಿ ಜನನ ಮತ್ತು ಮರಣ ಪತ್ರ ಕೊಡಿ ಎಂದು ಅರ್ಜಿ ಹಾಕಿದರೆ ಅದಕ್ಕೆ ಲಂಚ ಕೊಡಬೇಕು. ಇದರಿಂದ ಬೇಸತ್ತ ಸಾರ್ವಜನಿಕರು ಲಂಚ ಕೇಳುತ್ತಿರುವ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಆ ಮೂಲಕ ನಗರಸಭೆಯ ಲಂಚಾವತಾರವನ್ನು ಬಯಲಿಗೆಳೆದಿದ್ದಾರೆ.

ರಾಯಚೂರು, ಸೆ.11: ನಗರಸಭೆಗೆ (City Municipal Council) ಹೋಗಿ ಜನನ ಮತ್ತು ಮರಣ ಪತ್ರ ಕೊಡಿ ಎಂದು ಅರ್ಜಿ ಹಾಕಿದರೆ ಅದಕ್ಕೆ ಲಂಚ ಕೊಡಬೇಕು. ಇದರಿಂದ ಬೇಸತ್ತ ಸಾರ್ವಜನಿಕರು ಲಂಚ ಕೇಳುತ್ತಿರುವ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಆ ಮೂಲಕ ನಗರಸಭೆಯ ಲಂಚಾವತಾರವನ್ನು ಬಯಲಿಗೆಳೆದಿದ್ದಾರೆ. ನಗರಸಭೆಯಲ್ಲಿ ಕಂಪ್ಯೂಟರ್ ಆಪರೇಟರ್ ಆಗಿರುವ ಜಯಶ್ರೀ ಎಂಬವರು ಹಣ ಪಡೆಯುತ್ತಿದ್ದಾರೆ. ಸರ್ಕಾರದ ನಿಯಮ ಅನುಸಾರ ಒಂದು ಪ್ರತಿಗೆ 12 ರೂಪಾಯಿ, ಎರಡನೇ ಪ್ರತಿಗೆ 5 ರೂ.ಇದೆ. ಆದರೆ ಇಲ್ಲಿ ಎರಡು ಪ್ರತಿಗೆ 100 ರೂಪಾಯಿ ಕೊಡಬೇಕು. ಇಷ್ಟು ಹಣ ಕೊಡದಿದ್ದರೆ ಪ್ರಮಾಣಪತ್ರ ನೀಡದೆ ಸತಾಯಿಸಲಾಗುತ್ತದೆ ಎಂದು ಆರೋಪಿಸಲಾಗಿದೆ.

ಮತ್ತಷ್ಟು ವಿಡಿಯೋ ಸ್ಟೋರಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ