AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲಂಚ ಪ್ರಕರಣ: ಜಿಎಐಎಲ್​ನ ಎಕ್ಸಿಕ್ಯೂಟಿವ್ ಡೈರೆಕ್ಟರ್ ಸೇರಿ ಐವರನ್ನು ಬಂಧಿಸಿದ ಸಿಬಿಐ

CBI Arrests GAIL's Executive Director: ಪೈಪ್​ಲೈನ್ ಯೋಜನೆ ಸಂಬಂಧ ಲಂಚ ವಿನಿಮಯವಾದ ಆರೋಪದ ಮೇಲೆ ಸರ್ಕಾರಿ ಸ್ವಾಮ್ಯದ ಗ್ಯಾಸ್ ಅಥಾರಿಟಿ ಆಫ್ ಇಂಡಿಯಾದ ಎಕ್ಸಿಕ್ಯೂಟಿವ್ ಡೈರೆಕ್ಟರ್ ಕೆಬಿ ಸಿಂಗ್ ಹಾಗು ಇತರ ನಾಲ್ವರನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ. ದೆಹಲಿ, ವಿಶಾಖಪಟ್ಟಣಂ, ನೋಯ್ಡಾದ ವಿವಿಧ ಪ್ರದೇಶಗಳಲ್ಲಿ ಸಿಬಿಐ ಅಧಿಕಾರಿಗಳು ದಾಳಿ ನಡೆಸಿ ಶೋಧ ಕಾರ್ಯ ಮಾಡಿದ್ದಾರೆ. ಈ ಕಾರ್ಯಾಚರಣೆ ಇನ್ನೂ ಮುಂದುವರಿದಿದೆ.

ಲಂಚ ಪ್ರಕರಣ: ಜಿಎಐಎಲ್​ನ ಎಕ್ಸಿಕ್ಯೂಟಿವ್ ಡೈರೆಕ್ಟರ್ ಸೇರಿ ಐವರನ್ನು ಬಂಧಿಸಿದ ಸಿಬಿಐ
ಜಿಎಐಎಲ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 05, 2023 | 6:46 PM

Share

ನವದೆಹಲಿ, ಸೆಪ್ಟಂಬರ್ 5: ಸರ್ಕಾರಿ ಸ್ವಾಮ್ಯದ ಜಿಎಐಎಲ್ ಸಂಸ್ಥೆಯ ಹಿರಿಯ ಅಧಿಕಾರಿಯೊಬ್ಬರು ಲಂಚ ಪ್ರಕರಣವೊಂದರಲ್ಲಿ ಸಿಕ್ಕಿಬಿದ್ದಿದ್ದಾರೆ. ಜಿಎಐಎಲ್​ನ ಎಕ್ಸಿಕ್ಯೂಟಿವ್ ಡೈರೆಕ್ಟರ್ ಕೆಬಿ ಸಿಂಗ್ (GAIL’s Executive Director) ಹಾಗೂ ಇತರ ನಾಲ್ವರನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ. ಭಾರತೀಯ ಅನಿಲ ಪ್ರಾಧಿಕಾರ ಜಿಎಐಎಲ್​ನ ಮುಖ್ಯ ಜನರಲ್ ಮ್ಯಾನೇಜರ್ ದಾವಿಂದರ್ ಸಿಂಗ್, ವಡೋದರಾದ ಅಡ್ವಾನ್ಸ್ ಇನ್​ಫ್ರಾಸ್ಟ್ರಕ್ಚರ್ಸ್​ನ ನಿರ್ದೇಶಕ ಸುರೇಂದರ್ ಕುಮಾರ್ ಅವರು ಇತರ ಬಂಧಿತರ ಪೈಕಿ ಇದ್ದಾರೆ. ಇವರ ವಿರುದ್ಧ 50 ಲಕ್ಷ ರೂ ಮೊತ್ತದ ಲಂಚ ಪ್ರಕರಣ ಇದೆ. ಬ್ರೈಬರಿ ಕೇಸ್​ನಲ್ಲಿ ಜಿಎಐಎಲ್​ನ ಅಧಿಕಾರಿಗಳನ್ನು ಬಂಧಿಸಲಾಗಿರುವುದನ್ನು ಸಂಸ್ಥೆ ಕೂಡ ರೆಗ್ಯುಲೇಟರಿ ಫೈಲಿಂಗ್​ನಲ್ಲಿ ಖಚಿತಪಡಿಸಿದೆ.

ಏನಿದು ಲಂಚ ಪ್ರಕರಣ?

ಗ್ಯಾಸ್ ಅಥಾರಿಟಿ ಆಫ್ ಇಂಡಿಯಾ ಲಿ ಸಂಸ್ಥೆಯ ಎರಡು ಪೈಪ್​ಲೈನ್ ಯೋಜನೆಗಳಲ್ಲಿ ಲಂಚ ಸ್ವೀಕರಿಸಿದ ಆರೋಪ ಇದೆ. ಆಂಧ್ರದ ಶ್ರೀಕಾಕುಲಂನಿಂದ ಅಂಗುಲ್​ವರೆಗಿನ ಒಂದು ಪೈಪ್​ಲೈನ್ ಯೋಜನೆ, ಹಾಗು ವಿಜಯ್​ಪುರ್​ನಿಂದ ಔರಾಯವರೆಗಿನ ಇನ್ನೊಂದು ಪೈಪ್​ಲೈನ್ ಯೋಜನೆಯಲ್ಲಿ ಲಂಚ ಪಡೆಯಲಾದ ಆರೋಪ ಇದೆ.

ಸಿಬಿಐ ಈ ನಿಟ್ಟಿನಲ್ಲಿ ಜಿಎಐಎಲ್​ನ ಹಿರಿಯ ಅಧಿಕಾರಿಗಳ ಕಚೇರಿಗಳ ಮೇಲೆ ಶೋಧ ಕಾರ್ಯಾಚರಣೆ ನಡೆಸಿ, ಇಂದು (ಸೆ. 5) ಐವರನ್ನು ಬಂಧಿಸಿದೆ.

ಇದನ್ನೂ ಓದಿ:

ದೆಹಲಿ, ನೋಯ್ಡಾ, ವಿಶಾಖಪಟ್ಟಣಂನ ವಿವಿಧ ಜಾಗದಲ್ಲಿ ಸಿಬಿಐ ಶೋಧ ನಡೆಸಿದೆ. ಈಗಲೂ ಕೂಡ ದೆಹಲಿ, ನೋಯ್ಡಾ, ವಿಶಾಖಪಟ್ಟಣಂ ಇನ್ನೂ ಹಲವು ಪ್ರದೇಶಗಳಲ್ಲಿ ಸಿಬಿಐ ಅಧಿಕಾರಿಗಳು ಏಕಕಾಲದಲ್ಲಿ ಶೋಧ ಕಾರ್ಯಾಚರಣೆ ಕೈಗೊಂಡಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಮಂದಿಯನ್ನು ಬಂಧಿಸುವ ಸಾಧ್ಯತೆ ಇದೆ.

ಏರುಗತಿಯಲ್ಲಿದ್ದ ಜಿಎಐಎಲ್ ಷೇರಿಗೆ ಹಿನ್ನಡೆ?

ಜಿಎಐಎಲ್ ಸಂಸ್ಥೆ ಇವತ್ತಿನವರೆಗೂ ಷೇರುಪೇಟೆಯಲ್ಲಿ ಒಳ್ಳೆಯ ಡಿಮ್ಯಾಂಡ್ ಹೊಂದಿದೆ. ಅದರ ಷೇರುಬೆಲೆ ಬಹುತೇಕ ಉಚ್ಛ್ರಾಯ ಮಟ್ಟಕ್ಕೆ ಏರುತ್ತಿದೆ. 2018ರಲ್ಲಿ ಅದರ ಷೇರುಬೆಲೆ 130 ರೂ ಆಸುಪಾಸಿಗೆ ಏರಿತ್ತು. ಈಗಲೂ ಅದು ಜಿಎಐಎಲ್​ನ ಗರಿಷ್ಠ ಷೇರುಬೆಲೆಯಾಗಿದೆ. ಇವತ್ತು ಅದು 123 ರೂ ಗಟಿ ದಾಟಿದೆ. ಒಂದು ವರ್ಷದ ಹಿಂದೆ 87 ರೂ ಇದ್ದ ಅದರ ಬೆಲೆ ಈಗ 123 ರೂ ಆಗಲು ಸತತ ಓಟ ಕಾರಣ.

ಇದನ್ನೂ ಓದಿ:

ಇದೇ ಸಂದರ್ಭದಲ್ಲಿ ಜಿಎಐಎಲ್​ನ ಅಧಿಕಾರಿಗಳು ಭ್ರಷ್ಟಾಚಾರ ಪ್ರಕರಣಗಳಲ್ಲಿ ಸಿಲುಕಿ ಸಿಬಿಐನಿಂದ ಬಂಧಿತರಾಗಿರುವುದು ಅದರ ಷೇರು ಓಟಕ್ಕೆ ಹಿನ್ನಡೆಯಾಗುವ ಸಾಧ್ಯತೆ ಇಲ್ಲದಿಲ್ಲ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!