ಒಂದೇ ಮನೆಗೆ ಎರಡು ವಿದ್ಯುತ್ ಬಿಲ್: ರಾಯಚೂರಲ್ಲಿ ಜೆಸ್ಕಾಂ ಯಡವಟ್ಟು?
ಒಂದೇ ಮನೆಗೆ ಜೆಸ್ಕಾಂ ಎರಡೆರಡು ವಿದ್ಯುತ್ ಬಿಲ್ ನೀಡಿರುವ ಆರೋಪ ರಾಯಚೂರಿನ ಕಡಂಗದೊಡ್ಡಿ ಗ್ರಾಮದಲ್ಲಿ ಕೇಳಿಬಂದಿದೆ. ಭಾಗ್ಯಮ್ಮ ಎಂಬ ಮಹಿಳೆಯ ಮನೆಗೆ ಎರಡು ಬಿದ್ಯುತ್ ಬಿಲ್ಗಳು ಬಂದಿದ್ದು, ಆ ಪೈಕಿ ಒಂದು ಮಾತ್ರ ನಮ್ಮ ಮನೆಯದ್ದು. ಇನ್ನೊಂದು ನಮ್ಮದಲ್ಲ. ಹಾಗಿದ್ದರೂ ಆ ಬಿಲ್ ಪಾವತಿಸುಂತೆ ನಮಗೆ ಟಾರ್ಚರ್ ಮಾಡಲಾಗ್ತಿದೆ ಎಂದು ಅವರು ಆರೋಪಿಸಿದ್ದಾರೆ.
ರಾಯಚೂರು, ನವೆಂಬರ್ 19: ಒಂದೇ ಮನೆಗೆ ಜೆಸ್ಕಾಂ ಎರಡೆರಡು ವಿದ್ಯುತ್ ಬಿಲ್ ನೀಡಿರುವ ಪರಿಣಾಮ ಮಹಿಳೆ ಕಂಗಾಲಾಗಿರುವ ಘಟನೆ ರಾಯಚೂರು ತಾಲೂಕಿನ ಕಡಂಗದೊಡ್ಡಿ ಗ್ರಾಮದಲ್ಲಿ ನಡೆದಿದೆ. ಕಡಂಗದೊಡ್ಡಿ ಗ್ರಾಮದಲ್ಲಿ ಸ್ವಂತ ಮನೆ ಹೊಂದಿರೊ ರೈತ ಮಹಿಳೆ ಭಾಗ್ಯಮ್ಮ ಅವರಿಗೆ ತಮ್ಮದಲ್ಲದ ಬಿಲ್ ಪಾವತಿಸುವಂತೆ ಟಾರ್ಚರ್ ನೀಡಿರುವ ಆರೋಪ ಕೇಳಿಬಂದಿದೆ. ಪ್ರತಿ ತಿಂಗಳು ಭಾಗ್ಯಮ್ಮ ಕುಟುಂಬ 150-350 ರೂ. ವಿದ್ಯುತ್ ಬಿಲ್ ಪಾವತಿಸುತ್ತಿತ್ತು. ಈ ಬಾರಿಯೂ ಅದರ ಮೊತ್ತ 172 ರೂ. ಬಂದಿದೆ. ಆದರೆ ಇದರ ಜೊತೆ ಮತ್ತೊಂದು ಆರ್ಆರ್ ನಂಬರ್ನ ಬಿಲ್ ಬಂದಿದ್ದು, 10,105 ರೂ. ಮೊತ್ತ ಪಾವತಿಸುವಂತೆ ಒತ್ತಾಯಿಸಲಾಗಿದೆ. ಇಲ್ಲದಿದ್ದರೆ ವಿದ್ಯುತ್ ಸಂಪರ್ಕ ಕಡಿತಗೊಳಿಸುವ ಎಚ್ಚರಿಕೆಯನ್ನ ಸಿಬ್ಬಂದಿ ನೀಡಿದ್ದಾರೆ ಎನ್ನಲಾಗಿದೆ. ನೀವು ಬಿಲ್ ನೀಡಿರುವ ಆರ್ಆರ್ ನಂಬರ್ನ ಮೀಟರ್ ಮತ್ತು ಮನೆಯನ್ನು ತೋರಿಸಿ. ಆಗ ನಾವು 10 ಸಾವಿರ ಬಿಲ್ ಕಟ್ಟುತ್ತೀವಿ ಎಂದು ಭಾಗ್ಯಮ್ಮ ತಿಳಿಸಿದ್ದಾರೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
Published on: Nov 19, 2025 10:59 AM
Loading...
Unable to load recommendations.
Follow Us