AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟೀಮ್ ಇಂಡಿಯಾ ಸೆಮಿಫೈನಲ್​ಗೆ ಎಂಟ್ರಿ

ಟೀಮ್ ಇಂಡಿಯಾ ಸೆಮಿಫೈನಲ್​ಗೆ ಎಂಟ್ರಿ

ಝಾಹಿರ್ ಯೂಸುಫ್
|

Updated on: Nov 19, 2025 | 9:28 AM

Share

Asia Cup Rising Stars 2025: ಮೊದಲು ಬ್ಯಾಟ್ ಮಾಡಿದ ಒಮಾನ್ ತಂಡವು 20 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು 135 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಭಾರತ ಎ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ಆರಂಭಿಕರಾಗಿ ಕಣಕ್ಕಿಳಿದ ಪ್ರಿಯಾಂಶ್ ಆರ್ಯ 10 ರನ್​ಗಳಿಸಿ ಔಟಾದರೆ, ವೈಭವ್ ಸೂರ್ಯವಂಶಿ 12 ರನ್​​ಗಳಿಸಿ ವಿಕೆಟ್ ಒಪ್ಪಿಸಿದರು.

ದೋಹಾದಲ್ಲಿ ನಡೆಯುತ್ತಿರುವ ಏಷ್ಯಾಕಪ್ ರೈಸಿಂಗ್ ಸ್ಟಾರ್ ಟಿ20 ಟೂರ್ನಿಯ 10ನೇ ಪಂದ್ಯದಲ್ಲಿ ಭಾರತ ಎ ತಂಡ ಭರ್ಜರಿ ಜಯ ಸಾಧಿಸಿದೆ. ವೆಸ್ಟ್ ಎಂಡ್ ಪಾರ್ಕ್​ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಭಾರತ ಎ ಹಾಗೂ ಒಮಾನ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ಜಿತೇಶ್ ಶರ್ಮಾ ಬೌಲಿಂಗ್ ಆಯ್ದುಕೊಂಡಿದ್ದರು.

ಅದರಂತೆ ಮೊದಲು ಬ್ಯಾಟ್ ಮಾಡಿದ ಒಮಾನ್ ತಂಡವು 20 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು 135 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಭಾರತ ಎ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ಆರಂಭಿಕರಾಗಿ ಕಣಕ್ಕಿಳಿದ ಪ್ರಿಯಾಂಶ್ ಆರ್ಯ 10 ರನ್​ಗಳಿಸಿ ಔಟಾದರೆ, ವೈಭವ್ ಸೂರ್ಯವಂಶಿ 12 ರನ್​​ಗಳಿಸಿ ವಿಕೆಟ್ ಒಪ್ಪಿಸಿದರು.

ಈ ಹಂತದಲ್ಲಿ ಜೊತೆಗೂಡಿದ ನಮನ್ ಧೀರ್ ಹಾಗೂ ಹರ್ಷ್ ದುಬೆ ಉತ್ತಮ ಜೊತೆಯಾಟ ಪ್ರದರ್ಶಿಸಿದರು. ನಮನ್​ ಧೀರ್ 19 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 2 ಫೋರ್​ಗಳೊಂದಿಗೆ 30 ರನ್ ಬಾರಿಸಿದರೆ, ಹರ್ಷ್ ದುಬೆ 44 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 7 ಫೋರ್​ನೊಂದಿಗೆ ಅಜೇಯ 53 ರನ್​ ಚಚ್ಚಿದರು.

ಈ ಅರ್ಧಶತಕದ ನೆರವಿನೊಂದಿಗೆ ಭಾರತ ಎ ತಂಡವು 17.5 ಓವರ್​ಗಳಲ್ಲಿ 4 ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತು. ಈ ಗೆಲುವಿನೊಂದಿಗೆ ಟೀಮ್ ಇಂಡಿಯಾ ಏಷ್ಯಾಕಪ್ ರೈಸಿಂಗ್ ಸ್ಟಾರ್ ಟಿ20 ಟೂರ್ನಿಯಲ್ಲಿ ಸೆಮಿಫೈನಲ್​ಗೇರಿದೆ.

ಭಾರತ ಎ ಪ್ಲೇಯಿಂಗ್ 11: ವೈಭವ್ ಸೂರ್ಯವಂಶಿ , ಪ್ರಿಯಾಂಶ್ ಆರ್ಯ , ನಮನ್ ಧೀರ್ , ಜಿತೇಶ್ ಶರ್ಮಾ (ನಾಯಕ) ,
ನೆಹಾಲ್ ವಧೇರಾ , ಅಶುತೋಷ್ ಶರ್ಮಾ , ರಮಣದೀಪ್ ಸಿಂಗ್ , ಹರ್ಷ್ ದುಬೆ , ಗುರ್ಜಪ್ನೀತ್ ಸಿಂಗ್ , ಸುಯಶ್ ಶರ್ಮಾ , ವಿಜಯಕುಮಾರ್ ವೈಶಾಕ್.

ಒಮಾನ್ ಪ್ಲೇಯಿಂಗ್ 11: ಹಮ್ಮದ್ ಮಿರ್ಝ (ನಾಯಕ), ಕರಣ್ ಸೋನಾವಾಲೆ , ವಾಸಿಮ್ ಅಲಿ , ನಾರಾಯಣ್ ಸೈಶಿವ್ , ಆರ್ಯನ್ ಬಿಶ್ತ್ , ಜಿಕ್ರಿಯ ಇಸ್ಲಾಂ , ಸುಫ್ಯಾನ್ ಮೆಹಮೂದ್ , ಮುಜಾಹಿರ್ ರಾಝ , ಸಮಯ್ ಶ್ರೀವಾಸ್ತವ , ಶಫೀಕ್ ಜಾನ್ , ಜೇ ಒಡೆದ್ರಾ.