Loading video

ಹೆಗಲ ಮೇಲೆ ಬೈಕ್​ ಹೊತ್ತು ಸಾಗಿದ ಭೂಪ, ಆಧುನಿಕ ಬಾಹುಬಲಿಯ ಗಾಂಭೀರ್ಯ ನಡಿಗೆ ವಿಡಿಯೋ ವೈರಲ್

| Updated By: ರಮೇಶ್ ಬಿ. ಜವಳಗೇರಾ

Updated on: Jun 29, 2023 | 11:33 AM

ಸವಾರನೊರ್ವ ತನ್ನ ಬೈಕ್​ ಅನ್ನು ಹೆಗಲ ಮೇಲೆ ಹೊತ್ತುಕೊಂಡು ನೀರಿನಲ್ಲಿ ನಡೆದುಕೊಂಡು ಹೋಗಿದ್ದಾರೆ. ಈ ಆಧುನಿಕ ಬಾಹುಬಲಿಯ ಗಾಂಭೀರ್ಯ ನಡಿಗೆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ರಾಯಚೂರು: ಕಳೆದ ಎರಡೂ ದಿನಗಳ ಹಿಂದೆ ರಾಯಚೂರು ಜಿಲ್ಲೆಯಲ್ಲಿ ಧಾರಾಕಾರವಾಗಿ ಮಳೆಯಾಗಿದೆ. ಈ ಹಿನ್ನೆಲೆಯಲ್ಲಿ ರಾಯಚೂರು ತಾಲೂಕಿನ ಕರೇಕಲ್ ಗ್ರಾಮದ ರೇಲ್ವೆ ಅಂಡರ್ ಪಾಸ್​ನಲ್ಲಿ ನೀರು ತುಂಬಿಕೊಂಡು ನದಿಯಂತಾಗಿದೆ. ಇದರಿಂದ ವಾಹನ ಸಂಚಾರಕ್ಕೆ ತೊಂದೆಯುಂಟಾಗಿದೆ. ಇನ್ನು ಬೈಕ್​ ಸವಾರನೋರ್ವ, ತನ್ನ ಬೈಕ್​ ಅನ್ನು ಹೆಗಲ ಮೇಲೆ ಹೊತ್ತುಕೊಂಡು ನೀರಿನಲ್ಲಿ ನಡೆದು ಹೋಗಿದ್ದಾರೆ. ಕರೇಕಲ್ ಗ್ರಾಮದ ‌ನಿವಾಸಿಯಾಗಿರುವ ಮೈಲಾರಲಿಂಗ, ತನ್ನ ಎಚ್ ಎಫ್ ಡೀಲಕ್ಸ್ ಬೈಕ್ ಹೆಗಲ ಮೇಲೆ ಹೊತ್ತೊಂಡು ಹೋಗಿದ್ದಾನೆ. ನೀರಿನಲ್ಲಿ ಈತನ ಗಾಂಭೀರ್ಯ ನಡಿಗೆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಆಧುನಿಕ ಬಾಹುಬಲಿ ಎಂದು ಕರೆದಿದ್ದಾರೆ.

Published on: Jun 29, 2023 11:32 AM