Loading video

ರೈಲ್ವೇ ಹಳಿ ಮೇಲೆ ಕಾದು ನಿಂತ ಯಮ! ರೈಲ್ವೇ ಇಲಾಖೆಯಿಂದ ಜಾಗೃತಿ ಕಾರ್ಯಕ್ರಮ

| Updated By: ಆಯೇಷಾ ಬಾನು

Updated on: Jun 10, 2024 | 11:38 AM

ಮೈಸೂರಿನಲ್ಲಿ ರೈಲ್ವೇ ಇಲಾಖೆ ವತಿಯಿಂದ ವಿನೂತನ ಜಾಗೃತಿ ಕಾರ್ಯಕ್ರಮ ಮಾಡಲಾಯಿತು. ಯಮನ ವೇಷ ಹಾಕಿದ್ದ ವ್ಯಕ್ತಿ ರೈಲ್ವೆ ಹಳಿಗಳ ಮೇಲೆ ಓಡಾಡುತ್ತ ಯಮ ರೈಲ್ವೆ ಹಳಿಗಳ ಮೇಲೆ ಕಾದು ಕುಳಿತಿರುತ್ತಾನೆ. ಹೀಗಾಗಿ ಹಳಿ ದಾಡುವಾಗ ಎಚ್ಚರದಿಂದಿರಿ, ಮೊಬೈಲ್ ಬಳಸಬೇಡಿ ಎಂಬ ಸಂದೇಶ ರವಾನಿಸಲಾಯಿತು.

ಮೈಸೂರು, ಜೂನ್.10: ಮೈಸೂರಿನ ಜಯನಗರ ರೈಲ್ವೆ ಗೇಟ್ ಬಳಿ ರೈಲ್ವೇ ಇಲಾಖೆಯಿಂದ ವಿನೂತನ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ರೈಲು ಹಳಿ ಮೇಲೆ ನಿಂತು ಯಮ ಧರ್ಮ ವೇಷಧಾರಿಯಿಂದ ಜಾಗೃತಿ ಮೂಡಿಸಲಾಯಿತು. ನೈರುತ್ಯ ರೈಲ್ವೆ ಇಲಾಖೆಯಿಂದ ಲೆವೆಲ್ ಕ್ರಾಸಿಂಗ್ ಜಾಗೃತಿ ಕಾರ್ಯಕ್ರಮ ನಡೆಯಿತು. ಯಮನ ವೇಷಧಾರಿ, ಸ್ಕೌಟ್ಸ್ ವಿಧ್ಯಾರ್ಥಿಗಳು ಅಣುಕು ಪ್ರದರ್ಶನ ಮಾಡಿ ಜನರಲ್ಲಿ ಜಾಗೃತಿ ಮೂಡಿಸಿದರು. ರೈಲ್ವೆ ಹಳಿ ದಾಡುವಾಗ ಎಚ್ಚರ ವಹಿಸುವಂತೆ ತಿಳಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ