ಬೆಂಗಳೂರು: BEML​ನಲ್ಲಿ ವಂದೇ ಭಾರತ್​ ಸ್ಲೀಪರ್ ಕೋಚ್ ಪರಿಶೀಲಿಸಿದ ಅಶ್ವಿನಿ ವೈಷ್ಣವ್​​

ವಿವೇಕ ಬಿರಾದಾರ

Updated on: Sep 01, 2024 | 11:52 AM

ವಂದೇ ಭಾರತ್​ ಸ್ಲೀಪರ್ ಕೋಚ್​​ಗಳು ಬೆಂಗಳೂರಿನ ಬಿಇಎಂಎಲ್​​​​ ಉತ್ಪಾದನಾ ಘಟಕದಲ್ಲಿ ​ತಯಾರಾಗುತ್ತಿವೆ. ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಇಂದು (ಸೆ.1) ಬೆಂಗಳೂರಿನ ಬಿಇಎಂಎಲ್​ಗೆ ಭೇಟಿ ನೀಡಿ ವಂದೇ ಭಾರತ್​ ಸ್ಲೀಪರ್ ಕೋಚ್‌ ಪರಿಶೀಲನೆ ನಡೆಸಿದರು.

ವಂದೇ ಭಾರತ್​ ಸ್ಲೀಪರ್ ಕೋಚ್​​ಗಳು (Vande Bharat Sleeper Coach) ಬೆಂಗಳೂರಿನ (Bengaluru) ಬಿಇಎಂಎಲ್ (BEML)​​​​ ಉತ್ಪಾದನಾ ಘಟಕದಲ್ಲಿ ​ತಯಾರಾಗುತ್ತಿವೆ. ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw) ಅವರು ಇಂದು (ಸೆ.1) ಬೆಂಗಳೂರಿನ ಬಿಇಎಂಎಲ್​ಗೆ ಭೇಟಿ ನೀಡಿ ವಂದೇ ಭಾರತ್​ ಸ್ಲೀಪರ್ ಕೋಚ್‌ ಪರಿಶೀಲನೆ ನಡೆಸಿದರು. ಅಶ್ವಿನಿ ವೈಷ್ಣವ್​​ ಅವರಿಗೆ ರಾಜ್ಯ ರೈಲ್ವೆ ಸಚಿವ ವಿ. ಸೋಮಣ್ಣ (V Somanna) ಸಾಥ್​​ ನೀಡಿದರು. ಬಳಿಕ ಮಾತನಾಡಿದ ಅಶ್ವಿನಿ ವೈಷ್ಣವ್​​  “ಇಂದಿನಿಂದ ಮೂರು ತಿಂಗಳ ಒಳಗಾಗಿ ವಂದೇ ಭಾರತ್​​ ಸ್ಲೀಪರ್ ಕೋಚ್​ಗಳು ಲೋಕಾರ್ಪಣೆಗೊಳ್ಳಲಿವೆ ಎಂದು ಭರವಸೆ ನೀಡಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published on: Sep 01, 2024 11:38 AM
Follow Us
Vivek Biradar

ಮೂಲತಃ ಧಾರವಾಡ ಜಿಲ್ಲೆಯ ಹುಬ್ಬಳ್ಳಿಯವ. ಪ್ರಸ್ತುತ ಬೆಂಗಳೂರಿನಲ್ಲಿ ವಾಸಿಸುತ್ತಿದ್ದೇನೆ. ಕಳೆದ ಮೂರು ವರ್ಷಗಳಿಂದ ಡಿಜಿಟಲ್​ ಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಚಲಿತ ವಿದ್ಯಮಾನ, ರಾಜಕೀಯ, ಅಪರಾಧ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದೇನೆ.