Torrential rains in DK: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿರಂತರ ಮಳೆ, ಆರೇಂಜ್ ಅಲರ್ಟ್ ಘೋಷಿಸಿ ಶಾಲಾ ಕಾಲೇಜುಗಳನ್ನು ಮುಚ್ಚಿಸಿದ ಜಿಲ್ಲಾಡಳಿತ

|

Updated on: Jul 04, 2023 | 11:12 AM

ಮಂಗಳೂರು ನಗರದಲ್ಲಿ ರಸ್ತೆಗಳ ಮೇಲೆ ಮೊಣಕಾಲುವರಗೆ ನೀರು ಹರಿಯುತ್ತಿದ್ದು ವಾಹನಗಳ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿದೆ.

ಮಂಗಳೂರು: ಒಂದೆಡೆ ನಿಲ್ಲದ ಮಳೆ ಮತ್ತೊಂದೆಡೆ ಮಾನ್ಸೂನ್ ಋತು (monsoon season) ಶುರುವಾಗಿ ತಿಂಗಳು ಕಳೆದರೂ ಮಳೆಯಿಲ್ಲದೆ ಬರದ ಛಾಯೆ. ಇದು ಕರ್ನಾಟಕದ ಪ್ರಸಕ್ತ ಸ್ಥಿತಿ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ (Dakshina Kannada) ಮಳೆ ನಿರಂತರವಾಗಿ ಸುರಿಯುತ್ತಿದ್ದು ಸಾಮಾನ್ಯ ಜನಜೀವನ ಅಸ್ತವ್ಯಸ್ತಗೊಂಡಿದೆ. ಜಿಲ್ಲೆಯ 5 ತಾಲ್ಲೂಕುಗಳು-ಮಂಗಳೂರು (Mangaluru), ಬಂಟ್ವಾಳ, ಮೂಲ್ಕಿ, ಉಳ್ಳಾಲ ಮತ್ತು ಮೂಡಬಿದಿರೆಯಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಸುರಿಯುತ್ತಿದ್ದು ಆರೇಂಜ್ ಅಲರ್ಟ್ ಘೋಷಿಸಲಾಗಿದೆ. ಮಳೆ ಸುರಿಯುವುದು ನಿಲ್ಲದ ಲಕ್ಷಣಗಳ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಎಲ್ಲ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿದೆ. ಮಂಗಳೂರು ನಗರದಲ್ಲಿ ರಸ್ತೆಗಳ ಮೇಲೆ ಮೊಣಕಾಲುವರಗೆ ನೀರು ಹರಿಯುತ್ತಿದ್ದು ವಾಹನಗಳ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ