Gadag: ದಕ್ಷಿಣದಲ್ಲಿರುವ ಮಳೆ ಉತ್ತರದಲ್ಲಿಲ್ಲ, ಬಿತ್ತನೆ ಮಾಡಿ ಮಳೆಯಿಲ್ಲದೆ ಕಂಗಾಲಾದ ಗದಗ ರೈತರು

ಗದಗ ಜಿಲ್ಲೆಯ ರೋಣ, ಗಜೇಂದ್ರಗಡ, ಮುಂಡರಗಿ, ಶಿರಹಟ್ಟಿ, ಲಕ್ಷ್ಮೇಶ್ವರ, ಗಜೇಂದ್ರಗಡ ತಾಲೂಕಿನಲ್ಲಿ ಹೆಸರು ಬಿತ್ತನೆ ಮಾಡಲಾಗಿದ್ದು ಮಳೆ ಕೊರತೆಯಿಂದ ಬೆಳೆ ನಾಶವಾಗಿದೆ. ಕಳೆದ ಬಾರಿ ಅತಿಯಾದ ಮಳೆಯಿಂದ ಹೆಸರು ಬೆಳೆ ಹಾಳಾಗಿತ್ತು. ಈ ಬಾರಿ‌ ಮಳೆ‌ ಇಲ್ಲದೇ ಹೆಸರು ನಾಟಿಯಾಗದೇ ಹಾಳಾಗುತ್ತಿದೆ.

Gadag: ದಕ್ಷಿಣದಲ್ಲಿರುವ ಮಳೆ ಉತ್ತರದಲ್ಲಿಲ್ಲ, ಬಿತ್ತನೆ ಮಾಡಿ ಮಳೆಯಿಲ್ಲದೆ ಕಂಗಾಲಾದ ಗದಗ ರೈತರು
| Updated By: ಆಯೇಷಾ ಬಾನು

Updated on: Jul 04, 2023 | 9:22 AM

ಗದಗ: ದಕ್ಷಿಣ ಕನ್ನಡದಲ್ಲಿ ಭಾರೀ ಮಳೆಯಾಗುತ್ತಿದ್ದು ಉತ್ತರ ಕರ್ನಾಟದಲ್ಲಿ ಬರದ ಛಾಯೆ ಆವರಿಸಿದೆ(Karnataka Rain). ಗದಗದಲ್ಲಿ(Gadag) ಮಳೆಯಾಗದ ಕಾರಣ ಮಳೆ ನಂಬಿ ಹೆಸರು ಕಾಳು ಬಿತ್ತನೆ ಮಾಡಿದ ರೈತರು ಕಂಗಾಲಾಗಿದ್ದಾರೆ. ರಾಜ್ಯದಲ್ಲೇ ಅತೀ ಹೆಚ್ಚು ಹೆಸರು ಬೆಳೆಯುವ ಗದಗ ಜಿಲ್ಲೆಯಲ್ಲಿ ಈ ಬಾರಿ 50 ಸಾವಿರ ಹೇಕ್ಟರ್ ಹೆಸರು ಬಿತ್ತನೆ ಸರ್ವನಾಶವಾಗಿದೆ. ಬಿತ್ತನೆ ಮಾಡಿ ತಿಂಗಳಾಗುತ್ತಿದ್ರೂ ಮಳೆ ಇಲ್ಲ. ಹೀಗಾಗಿ ರೈತರು ಕಣ್ಣೀರಿಡುತ್ತ ಮಳೆರಾಯನಿಗಾಗಿ ಕಾದು ಕುಳಿತಿದ್ದಾರೆ. ಮಳೆ ನಂಬಿ ಮುಂಗಾರು ಬೆಳೆಯಾದ ಹೆಸರು ಬಿತ್ತನೆ ಮಾಡಿದ ರೈತರಿಗೆ ಮತ್ತೆ ಸಂಕಷ್ಟ ಎದುರಾಗಿದೆ.

ಗದಗ ಜಿಲ್ಲೆಯ ರೋಣ, ಗಜೇಂದ್ರಗಡ, ಮುಂಡರಗಿ, ಶಿರಹಟ್ಟಿ, ಲಕ್ಷ್ಮೇಶ್ವರ, ಗಜೇಂದ್ರಗಡ ತಾಲೂಕಿನಲ್ಲಿ ಹೆಸರು ಬಿತ್ತನೆ ಮಾಡಲಾಗಿದ್ದು ಮಳೆ ಕೊರತೆಯಿಂದ ಬೆಳೆ ನಾಶವಾಗಿದೆ. ಕಳೆದ ಬಾರಿ ಅತಿಯಾದ ಮಳೆಯಿಂದ ಹೆಸರು ಬೆಳೆ ಹಾಳಾಗಿತ್ತು. ಈ ಬಾರಿ‌ ಮಳೆ‌ ಇಲ್ಲದೇ ಹೆಸರು ನಾಟಿಯಾಗದೇ ಹಾಳಾಗುತ್ತಿದೆ. ಮಳೆ ಬಂದ್ರೂ ಕಷ್ಟ, ಮಳೆ ಬರದಿದ್ರೂ ಕಷ್ಟ ಅಂತ ರೈತರ ಅಳಲು ತೋಡಿಕೊಂಡಿದ್ದಾರೆ. ಮಳೆಯಾಗದೆ ಬಿತ್ತನೆ ಮಾಡಿದ ಜಮೀನು ಬಿರುಕು ಬಿಟ್ಟಿದೆ. ಒಂದು ಎಕರೆ ಪ್ರದೇಶಕ್ಕೆ 20-25 ಸಾವಿರ ರೂಪಾಯಿ ಖರ್ಚು ಮಾಡಿ ಬಿತ್ತನೆ ಮಾಡಿದ ರೈತರು ಸಾಲದ ಸುಳಿಯಲ್ಲಿ ಸಿಲುಕಿಕೊಂಡಿದ್ದಾರೆ.

Follow us