Roopesh Shetty: ತುಳುವಿನ ‘ಸರ್ಕಸ್’ ಸಿನಿಮಾ ಕನ್ನಡದಲ್ಲಿ ಯಾಕಿಲ್ಲ? ಉತ್ತರಿಸಿದ ರೂಪೇಶ್ ಶೆಟ್ಟಿ
ಬಿಗ್ ಬಾಸ್ ವಿನ್ ಆದ ಬಳಿಕ ರೂಪೇಶ್ ಖ್ಯಾತಿ ಕನ್ನಡದಲ್ಲೂ ಹಬ್ಬಿದೆ. ಈ ಕಾರಣದಿಂದ ‘ಸರ್ಕಸ್’ ಚಿತ್ರವನ್ನು ಅನೇಕರು ಕನ್ನಡದಲ್ಲೂ ನೋಡಲು ಬಯಸಿದ್ದಾರೆ. ಈ ಬಗ್ಗೆ ಅವರು ಮಾತನಾಡಿದ್ದಾರೆ.
ರೂಪೇಶ್ ಶೆಟ್ಟಿ (Roopesh Shetty) ಅವರು ನಟಿಸಿ, ನಿರ್ದೇಶಿಸಿರುವ ‘ಸರ್ಕಸ್’ ಸಿನಿಮಾ ರಿಲೀಸ್ ಆಗಿ ಎಲ್ಲ ಕಡೆಗಳಿಂದ ಮೆಚ್ಚುಗೆ ಪಡೆಯುತ್ತಿದೆ. ಈ ಸಿನಿಮಾ ತುಳುವಿನಲ್ಲಿ ಮಾತ್ರ ರಿಲೀಸ್ ಆಗಿದೆ. ಈ ಚಿತ್ರ ಕನ್ನಡಕ್ಕೂ ಬರಬೇಕಿತ್ತು ಎಂದು ಅನೇಕರು ಕೋರಿಕೆ ಇಟ್ಟಿದ್ದರು. ಬಿಗ್ ಬಾಸ್ (Bigg Boss) ವಿನ್ ಆದ ಬಳಿಕ ರೂಪೇಶ್ ಖ್ಯಾತಿ ಕನ್ನಡದಲ್ಲೂ ಹಬ್ಬಿದೆ. ಈ ಕಾರಣದಿಂದ ಈ ಚಿತ್ರವನ್ನು ಅನೇಕರು ಕನ್ನಡದಲ್ಲೂ ನೋಡಲು ಬಯಸಿದ್ದಾರೆ. ಈ ಬಗ್ಗೆ ಅವರು ಮಾತನಾಡಿದ್ದಾರೆ. ‘ಇದು ದೊಡ್ಡ ಬಜೆಟ್ ಸಿನಿಮಾ. ಹೀಗಾಗಿ, ತುಳುವಿನಲ್ಲಿ ಗೆದ್ದರೆ ಸಾಕು ಎಂದಿತ್ತು. ಅಲ್ಲಿ ಗೆದ್ದಿದೆ. ಅನೇಕರು ಈ ಸಿನಿಮಾನ ಕನ್ನಡದಲ್ಲೂ ಡಬ್ ಮಾಡಿ ಬಿಡಬೇಕು ಎನ್ನುತ್ತಿದ್ದಾರೆ. ನಮಗೆ ಸಮಯದ ಅಭಾವ ಇತ್ತು. ಮುಂದಿನ ದಿನಗಳಲ್ಲಿ ಈ ಬಗ್ಗೆ ಗಮನ ಹರಿಸುತ್ತೇವೆ’ ಎಂದಿದ್ದಾರೆ ರೂಪೇಶ್.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos