ತುಳು ಚಿತ್ರರಂಗದಲ್ಲಿ ದಾಖಲೆ ಬರೆದ ಬಿಗ್​ಬಾಸ್ ರೂಪೇಶ್ ಶೆಟ್ಟಿಯ ಹೊಸ ಸಿನಿಮಾ

Bigg Boss Roopesh Shetty: ಬಿಗ್​ಬಾಸ್ ಸೀಸನ್ 9 ಗೆದ್ದ ರೂಪೇಶ್ ಶೆಟ್ಟಿ ನಟಿಸಿರುವ ಹೊಸ ತುಳು ಸಿನಿಮಾ ಸರ್ಕಸ್ ಜೂನ್ 23ಕ್ಕೆ ಬಿಡುಗಡೆ ಆಗಿದ್ದು, ಬಿಡುಗಡೆ ಆದ ಮೊದಲ ದಿನವೇ ತುಳು ಚಿತ್ರರಂಗದಲ್ಲಿ ದಾಖಲೆ ಬರೆದಿದೆ.

ತುಳು ಚಿತ್ರರಂಗದಲ್ಲಿ ದಾಖಲೆ ಬರೆದ ಬಿಗ್​ಬಾಸ್ ರೂಪೇಶ್ ಶೆಟ್ಟಿಯ ಹೊಸ ಸಿನಿಮಾ
ರೂಪೇಶ್ ಶೆಟ್ಟಿ
Follow us
ಮಂಜುನಾಥ ಸಿ.
|

Updated on: Jun 24, 2023 | 4:44 PM

ಬಿಗ್​ಬಾಸ್ ಒಟಿಟಿ (Bigg Boss OTT) ಹಾಗೂ ಅದರ ಬಳಿಕ ನಡೆದ ಬಿಗ್​ಬಾಸ್ ಸೀಸನ್ 9ರ (Bigg Boss Season 09) ವಿಜೇತ ರೂಪೇಶ್ ಶೆಟ್ಟಿ ಸರ್ಕಸ್ (Circus) ಹೆಸರಿನ ಹೊಸ ಸಿನಿಮಾ ಮಾಡಿದ್ದು, ಇತ್ತೀಚೆಗಷ್ಟೆ ಬಿಡುಗಡೆ ಆದ ಈ ಸಿನಿಮಾ ತುಳು ಚಿತ್ರರಂಗದಲ್ಲಿ ದಾಖಲೆ ಬರೆದಿದೆ. ಈ ಹಿಂದೆಯೂ ಕೆಲವು ತುಳು ಸಿನಿಮಾಗಳಲ್ಲಿ ರೂಪೇಶ್ ಶೆಟ್ಟಿ (Roopesh Shetty) ನಟಿಸಿದ್ದರು. ಬಿಗ್​ಬಾಸ್ ಗೆದ್ದು ಹೊರಬಂದ ಬಳಿಕ ತುಸು ದೊಡ್ಡ ಸಿನಿಮಾಕ್ಕೆ ಕೈಹಾಕಿ ವಿದೇಶಗಳಲ್ಲಿಯೂ ಸಿನಿಮಾವನ್ನು ಬಿಡುಗಡೆ ಮಾಡಿ ದೊಡ್ಡ ಜಯವನ್ನೇ ಸಾಧಿಸಿದ್ದಾರೆ ರೂಪೇಶ್.

ಇದೇ ಶುಕ್ರವಾರ ರೂಪೇಶ್ ಶೆಟ್ಟಿ ನಟನೆಯ ಸರ್ಕಸ್ ಸಿನಿಮಾ ಕರಾವಳಿ ಜಿಲ್ಲೆಯ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದೆ. ಅದರ ದುಬೈ, ಬಹ್ರೆಸ್ ಸೇರಿದಂತೆ ಕೆಲವು ಗಲ್ಫ್ ದೇಶಗಳಲ್ಲಿಯೂ ಸಿನಿಮಾ ಬಿಡುಗಡೆ ಆಗಿದೆ. ಕೆಲವೆಡೆ ಸಿನಿಮಾದ ವಿಶೇಷ ಪ್ರದರ್ಶನವನ್ನು ಸಹ ಏರ್ಪಡಿಸಲಾಗಿತ್ತು. ಸಿನಿಮಾ ನೋಡಿದ ತುಳು ಪ್ರೇಕ್ಷಕರು ಸಿನಿಮಾವನ್ನು ಬಹುವಾಗಿ ಮೆಚ್ಚಿಕೊಂಡು ಕೊಂಡಾಡಿದ್ದಾರೆ. ಜೂನ್ 23ರಂದು ಸಿನಿಮಾ ಬಿಡುಗಡೆ ಆಗುವ ಮುನ್ನ ಸಿನಿಮಾದ 51 ವಿಶೇಷ ಪ್ರದರ್ಶನಗಳನ್ನು ವಿಶ್ವದ ಬೇರೆ ಬೇರೆ ದೇಶಗಳಲ್ಲಿ ರೂಪೇಶ್ ಶೆಟ್ಟಿ ಆಯೋಜಿಸಿದ್ದರು. ವಿದೇಶಗಳಲ್ಲಿಯೂ ಸಿನಿಮಾಕ್ಕೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದೆಯಂತೆ.

ಇನ್ನು ಬಿಡುಗಡೆ ಆದ ದಿನವೇ ಸರ್ಕಸ್ ಸಿನಿಮಾ ತುಳು ಚಿತ್ರರಂಗದಲ್ಲಿ ಹೊಸ ದಾಖಲೆ ಬರೆದಿದೆ. ಈ ವರೆಗೆ ಮೊದಲ ದಿನ ಅತಿ ಹೆಚ್ಚು ಜನ ನೋಡಿದ, ಅತಿ ಹೆಚ್ಚು ಕಲೆಕ್ಷನ್ ಮಾಡಿದ ತುಳು ಸಿನಿಮಾ ಎಂಬ ಖ್ಯಾತಿಗೆ ಸರ್ಕಸ್ ಸಿನಿಮಾ ಪಾತ್ರವಾಗಿದೆ. ಬಿಡುಗಡೆ ಆದ ದಿನವೇ ಸರ್ಕಸ್ ಸಿನಿಮಾವನ್ನು 12500 ಮಂದಿ ನೋಡಿದ್ದಾರೆ. ಈವರೆಗೆ ಇನ್ಯಾವ ತುಳು ಸಿನಿಮಾವನ್ನೂ ಸಹ ಮೊದಲ ದಿನವೇ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಜನ ನೋಡಿರಲಿಲ್ಲ.

ಇದನ್ನೂ ಓದಿ:BBK 9 Winner Prize: ಬಿಗ್ ಬಾಸ್ ವಿನ್ನರ್ ರೂಪೇಶ್ ಶೆಟ್ಟಿಗೆ ಸಿಕ್ಕ ಹಣ ಎಷ್ಟು ಗೊತ್ತಾ?

ಇನ್​ಸ್ಟಾಗ್ರಾಂನಲ್ಲಿ ವಿಡಿಯೋ ಮೂಲಕ ತಮ್ಮ ಖುಷಿ ಹಂಚಿಕೊಂಡಿರುವ ರೂಪೇಶ್ ಶೆಟ್ಟಿ, ”ಸರ್ಕಸ್ ಈ ರೇಂಜ್ಗೆ ಹಿಟ್ ಆಗತ್ತೆ ಎಂದು ಭಾವಿಸಿರಲಿಲ್ಲ. ತುಳು ಚಿತ್ರರಂಗದಲ್ಲಿ ಈ ಚಿತ್ರ ದಾಖಲೆ ಬರೆದಿದೆ. ಮೊದಲ ದಿನ 12,500 ಜನರು ಈ ಚಿತ್ರ ನೋಡಿದ್ದಾರೆ. ತುಳು ಚಿತ್ರರಂಗದ ದೊಡ್ಡ ಓಪನಿಂಗ್ ಪಡೆದ ಸಿನಿಮಾ. ಬುಕ್ ಮೈ ಶೋನಲ್ಲಿ 9.9 ರೇಟಿಂಗ್ ಸಿಕ್ಕಿದೆ. ಈ ಗೆಲುವಿಗೆ ಕಾರಣರಾದ ಎಲ್ಲರಿಗೂ ಧನ್ಯವಾದ” ಎಂದಿದ್ದಾರೆ ಜೊತೆಗೆ ಕೆಲವು ಮನವಿಗಳನ್ನೂ ಮಾಡಿದ್ದು, ”ಎಲ್ಲರೂ ಮೊದಲ ವಾರವೇ ಸಿನಿಮಾವನ್ನು ನೋಡಿ. ಎರಡನೇ ವಾರ ನಿರ್ಮಾಪಕರಿಗೆ ಬರುವ ಲಾಭಾಂಶ ಕಡಿಮೆ ಆಗುತ್ತದೆ. ಹಾಗೂ ಸಿನಿಮಾ ನೋಡುವ ವೇಳೆ ಯಾರೂ ಸಹ ಚಿತ್ರಮಂದಿರದಿಂದ ಲೈವ್ ಮಾಡಬೇಡಿ, ವಿಡಿಯೋ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಬೇಡಿ” ಎಂದು ಮನವಿ ಮಾಡಿದ್ದಾರೆ.

ರೂಪೇಶ್ ಶೆಟ್ಟಿ ಈ ಹಿಂದೆ ಗಿರ್​ಗಿಟ್ ಹೆಸರಿನ ತುಳು ಸಿನಿಮಾದಲ್ಲಿ ನಟಿಸಿದ್ದರು ಆ ಸಿನಿಮಾ ಸಹ ಭಾರಿ ದೊಡ್ಡ ಹಿಟ್ ಆಗಿತ್ತು. ಅದಾದ ಬಳಿಕವೂ ಕೆಲ ಸಿನಿಮಾಗಳಲ್ಲಿ ನಟಿಸಿದ್ದರು. ಆದರೆ ಈಗ ಬಿಡುಗಡೆ ಆಗಿರುವ ಸರ್ಕಸ್ ಸಿನಿಮಾ ಭಾರಿ ದೊಡ್ಡ ಜಯದತ್ತ ದಾಪುಗಾಲು ಹಾಕಿದೆ. ಈ ಸಿನಿಮಾವನ್ನು ಜೂನ್ 30ರಂದು ಬೆಂಗಳೂರಿನಲ್ಲಿ ಬಿಡುಗಡೆ ಮಾಡಲಿದ್ದಾರೆ ರೂಪೇಶ್ ಶೆಟ್ಟಿ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ