ಬಿಗ್​ಬಾಸ್ ಒಟಿಟಿಗೆ ಬರಲಿದ್ದಾರೆ ವಿವಾದಿತ ವ್ಯಕ್ತಿಗಳು, ಪಟ್ಟಿಯಲ್ಲಿ ಕಮಿಡಿಯನ್, ಉದ್ಯಮಿಗಳೂ ಇದ್ದಾರೆ

Bigg Boss OTT: ಹಿಂದಿ ಬಿಗ್ ಬಾಸ್ ಒಟಿಟಿ ಎರಡನೇ ಸೀಸನ್ ಕೆಲವೇ ದಿನಗಳಲ್ಲಿ ಶುರುವಾಗಲಿದ್ದು, ವಿವಾದಿತ ವ್ಯಕ್ತಿಗಳನ್ನೇ ಶೋಗೆ ಕರೆತರುವ ಯೋಜನೆಯಲ್ಲಿದ್ದಂತಿದ್ದಾರೆ ಆಯೋಜಕರು.​

ಬಿಗ್​ಬಾಸ್ ಒಟಿಟಿಗೆ ಬರಲಿದ್ದಾರೆ ವಿವಾದಿತ ವ್ಯಕ್ತಿಗಳು, ಪಟ್ಟಿಯಲ್ಲಿ ಕಮಿಡಿಯನ್, ಉದ್ಯಮಿಗಳೂ ಇದ್ದಾರೆ
ಸಲ್ಮಾನ್ ಖಾನ್
Follow us
ಮಂಜುನಾಥ ಸಿ.
|

Updated on:Jun 09, 2023 | 9:19 PM

ಬಿಗ್ ಬಾಸ್ (Bigg Boss) ಒಟಿಟಿ (OTT) ಮತ್ತೆ ಬರುತ್ತಿದೆ. ಆದರೆ ಕನ್ನಡದಲ್ಲಿ ಅಲ್ಲ ಬದಲಿಗೆ ಹಿಂದಿಯಲ್ಲಿ. ಹಿಂದಿಯಲ್ಲಿ ಮೊದಲು ಪ್ರಸಾರವಾಗಿದ್ದ ಬಿಗ್ ಬಾಸ್ ಒಟಿಟಿಯನ್ನು (Bigg Boss OTT) ಕರಣ್ ಜೋಹರ್ (Karan Johar) ನಿರೂಪಣೆ ಮಾಡಿದ್ದರು. ಆದರೆ ಬಿಗ್ ಬಾಸ್ ಒಟಿಟಿ 2 ಅನ್ನು ಸಲ್ಮಾನ್ ಖಾನ್ ಅವರೇ ನಿರೂಪಣೆ ಮಾಡಲಿದ್ದಾರೆ. ಇದೇ ಕಾರಣಕ್ಕೆ ಮೊದಲ ಬಿಗ್ ಬಾಸ್ ಒಟಿಟಿಗಿಂತಲೂ ಅದ್ಧೂರಿಯಾಗಿ ಎರಡನೇ ಆವೃತ್ತಿಯನ್ನು ನಿರ್ಮಿಸಲು ಆಯೋಜಕರು ತೀರ್ಮಾನಿಸಿದ್ದು ದೊಡ್ಡ ಸೆಲೆಬ್ರಿಟಿಗಳನ್ನೇ ಸ್ಪರ್ಧಿಗಳನ್ನಾಗಿ ಕರೆತರಲು ಯೋಜಿಸಿ ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ.

ಶಿಲ್ಪಾ ಶೆಟ್ಟಿಯ ಪತಿ, ಅಶ್ಲೀಲ ವಿಡಿಯೋ ನಿರ್ಮಾಣ ಹಾಗೂ ವಿತರಣೆ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ರಾಜ್ ಕುಂದ್ರಾ ಅನ್ನು ಶೋಗೆ ಕರೆತರಲು ಪ್ರಯತ್ನ ನಡೆದಿದೆ‌. ಬಿಗ್ ಬಾಸ್ ಒಟಿಟಿ ಮೊದಲ ಆವೃತ್ತಿಯಲ್ಲಿ ಶಿಲ್ಪಾ ಶೆಟ್ಟಿಯ ಸಹೋದರಿ ಶಮಿತಾ ಶೆಟ್ಟಿ ಭಾಗವಹಿಸಿದ್ದರು. ಈಗ ಶಿಲ್ಪಾ ಶೆಟ್ಟಿಯ ಪತಿ ಭಾಗವಹಿಸುವ ಸಾಧ್ಯತೆ ಇದೆ. ರಾಜ್ ಕುಂದ್ರಾ ಜನಪ್ರಿಯ ಉದ್ಯಮಿ. 2021ರ ಜುಲೈನಲ್ಲಿ ಅಶ್ಲೀಲ ವಿಡಿಯೋ ನಿರ್ಮಾಣ ಹಾಗೂ ವಿತರಣೆ ಆರೋಪದಲ್ಲಿ ಮುಂಬೈ ಪೊಲೀಸರು ರಾಜ್ ಕುಂದ್ರಾ ಅನ್ನು ಬಂಧಿಸಿದ್ದರು. ರಾಜ್ ಕುಂದ್ರಾ, ಭಾರತದಲ್ಲಿ ಅಶ್ಲೀಲ ವಿಡಿಯೋ ನಿರ್ಮಾಣ ಮಾಡಿ ವಿದೇಶದ ತಮ್ಮದೇ ಒಡೆತನದ ಸಂಸ್ಥೆಯ ಮೂಲಕ ಅಪ್​ಲೋಡ್ ಮಾಡಿಸುತ್ತಿದ್ದರಂತೆ.

ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಬಂಧನವಾದ ಬಳಿಕ ರಾಜ್ ಕುಂದ್ರಾ ಮಾಧ್ಯಮಗಳಿಂದ ದೂರ ಉಳಿದಿದ್ದಾರೆ. ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಸಹ ಮುಖ ಮುಚ್ಚಿಕೊಂಡು ಓಡಾಡುತ್ತಿದ್ದಾರೆ. ಆ ಪ್ರಕರಣದ ಬಗ್ಗೆಯಾಗಲಿ ತಮ್ಮ ಬಂಧನದ ಬಗ್ಗೆಯಾಗಲಿ ಕುಂದ್ರಾ ಬಹಿರಂಗವಾಗಿ ಮಾತನಾಡಿಲ್ಲ. ಇದೀಗ ಕುಂದ್ರಾ ಅನ್ನು ಬಿಗ್​ಬಾಸ್​ ಮನೆಗೆ ಕರೆತಂದರೆ ಆಸಕ್ತಿಕರ ವಿಷಯಗಳು ಬಹಿರಂಗವಾಗುವ ಸಾಧ್ಯತೆ ಇದೆ.

ರಾಜ್ ಕುಂದ್ರಾ ಮಾತ್ರವೇ ಅಲ್ಲದೆ ಇನ್ನೂ ಕೆಲವು ಪ್ರಮುಖ ಆದರೆ ವಿವಾದಿತ ವ್ಯಕ್ತಿಗಳನ್ನು ಶೋಗೆ ಕರೆತರಲು ಆಯೋಜಕರು ಯತ್ನಿಸುತ್ತಿದ್ದಾರೆ. ವಿಶೇಷವಾಗಿ ಯೂಟ್ಯೂಬ್​ ಮೂಲಕ, ಒಟಿಟಿ ಕಂಟೆಂಟ್ ಮೂಲಕ ಜನಪ್ರಿಯತೆ ಗಳಿಸಿಕೊಂಡವರನ್ನು ಕರೆತರಲು ಯತ್ನಿಸಲಾಗುತ್ತಿದೆ. ತಮ್ಮ ಬಿಜೆಪಿ ಸ್ಟ್ಯಾಂಡ್​ಅಪ್ ಕಾಮಿಡಿಯಿಂದ ಜನಪ್ರಿಯತೆ ಗಳಿಸಿರುವ ಕಮಿಡಿಯನ್ ಕುನಾಲ್ ಕಾಮ್ರಾ ಅನ್ನು ಬಿಗ್​ಬಾಸ್​ಗೆ ಕರೆತರುವ ಯತ್ನ ನಡೆಯುತ್ತಿದೆ. ಪತ್ರಕರ್ತ ಅರ್ನಬ್ ಗೋಸ್ವಾಮಿಯೊಟ್ಟಿಗೆ ವಿಮಾನದಲ್ಲಿ ವಾಗ್ವಾದ ನಡೆಸಿದ್ದ ಕಾರಣಕ್ಕೆ ಕುನಾಲ್ ಕಾಮ್ರಾ ಸುದ್ದಿಯಾಗಿದ್ದರು. ಆ ಘಟನೆ ನಂತರ ಕೆಲವು ವಿಮಾನ ಸಂಸ್ಥೆಗಳಿಂದ ನಿಷೇಧಕ್ಕೂ ಒಳಗಾಗಿದ್ದರು.

ಮತ್ತೊಬ್ಬ ವಿವಾದಿತ ಸ್ಟ್ಯಾಂಡಪ್ ಕಮಿಡಿಯನ್ ಮುನಾವರ್ ಫಾರುಖಿಯನ್ನು ಸಹ ಬಿಗ್​ಬಾಸ್​ ಒಟಿಟಿ 2 ಗೆ ಕರೆತರುವ ಪ್ರಯತ್ನ ನಡೆಯುತ್ತಿದೆ. ಅಮಿತ್ ಶಾ ಹಾಗೂ ಹಿಂದೂ ಧರ್ಮದ ಬಗ್ಗೆ ಮಾಡಿದ್ದಾರೆ ಎನ್ನಲಾಗುತ್ತಿರುವ ಜೋಕ್ ಕುರಿತಂತೆ ಮುನಾವರ್ ಫಾರುಖಿ ಬಂಧನಕ್ಕೆ ಒಳಗಾಗಿದ್ದರು. ಆ ಬಳಿಕ ಕಂಗನಾ ರನೌತ್ ನಿರೂಪಣೆ ಮಾಡಿದ್ದ ಲಾಕ್ ಅಪ್ ಶೋನಲ್ಲಿ ಸ್ಪರ್ಧಿಯಾಗಿ ಭಾಗವಹಿಸಿ ಗೆದ್ದಿದ್ದರು. ಖತರೋಂಕೆ ಖಿಲಾಡಿ ರಿಯಾಲಿಟಿ ಶೋನಲ್ಲಿ ಸಹ ಮುನಾವರ್ ಇರಲಿದ್ದಾರೆ ಎನ್ನಲಾಗಿತ್ತು, ಅದಕ್ಕಾಗಿ ಆಡಿಷನ್ ಸಹ ನೀಡಿದ್ದರು ಮುನಾವರ್ ಆದರೆ ಅವರು ಆಯ್ಕೆ ಆಗಿರಲಿಲ್ಲ. ಈಗ ಬಿಗ್​ಬಾಸ್ ಒಟಿಟಿಗೆ ಮುನಾವರ್ ಬರುವ ದಟ್ಟ ಸಾಧ್ಯತೆ ಇದೆ.

ಈ ಬಾರಿಯ ವಿಶೇಷವೆಂದರೆ ಬಿಗ್​ಬಾಸ್ ಒಟಿಟಿ ಎರಡನೇ ಆವೃತ್ತಿಯನ್ನು ಸಲ್ಮಾನ್ ಖಾನ್ ಅವರೇ ನಿರೂಪಣೆ ಮಾಡಲಿದ್ದಾರೆ. ಈ ಹಿಂದಿನ ಸೀಸನ್ ಅನ್ನು ಕರಣ್ ಜೋಹರ್ ನಿರೂಪಿಸಿದ್ದರು. ಆ ಶೋಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತಾದ್ದರಿಂದ ಈಗ ಹೊಸ ಶೋ ಅನ್ನು ಸಲ್ಮಾನ್ ಖಾನ್ ನಿರೂಪಣೆ ಮಾಡಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:46 pm, Fri, 9 June 23

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು