Bigg Boss Kannada Season 9: ‘ಬಿಗ್ ಬಾಸ್ ಒಟಿಟಿ’ ಸ್ಪರ್ಧಿಗಳಿಗೆ ಸಿಹಿ ಸುದ್ದಿ ಕೊಟ್ಟ ಕಿಚ್ಚ ಸುದೀಪ್​

‘ಬಿಗ್ ಬಾಸ್’ ಮನೆಯಲ್ಲಿ ಸದ್ಯ 8 ಸ್ಪರ್ಧಿಗಳು ಬಂಧಿಯಾಗಿದ್ದಾರೆ. ಒಟಿಟಿ ಸೀಸನ್ ಮುಗಿಯುತ್ತಿದ್ದ ತಕ್ಷಣ ಟಿವಿ ಸೀಸನ್ ಆರಂಭ ಆಗಲಿದೆ ಎಂದು ಈ ಮೊದಲು ಘೋಷಣೆ ಆಗಿತ್ತು. ಆದರೆ, ಈಗ ಆ ರೀತಿ ಮಾಡುತ್ತಿಲ್ಲ.

Bigg Boss Kannada Season 9: ‘ಬಿಗ್ ಬಾಸ್ ಒಟಿಟಿ’ ಸ್ಪರ್ಧಿಗಳಿಗೆ ಸಿಹಿ ಸುದ್ದಿ ಕೊಟ್ಟ ಕಿಚ್ಚ ಸುದೀಪ್​
ಸುದೀಪ್​
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Sep 15, 2022 | 4:58 PM

‘ಬಿಗ್ ಬಾಸ್ ಒಟಿಟಿ​’ (Bigg Boss OTT) ಸೀಸನ್​ ಕನ್ನಡಿಗರ ಪಾಲಿಗೆ ಹೊಸತು. ಈ ಸೀಸನ್​ ಸಾಕಷ್ಟು ಗಮನ ಸೆಳೆದಿದೆ. ಟಿವಿಯಲ್ಲಿ ಪ್ರಸಾರ ಕಾಣದೆ ಕೇವಲ ವೂಟ್ ಒಟಿಟಿ ಮೂಲಕ ‘ಬಿಗ್ ಬಾಸ್’ ಪ್ರಸಾರ ಕಂಡಿದ್ದು, ವೀಕ್ಷಕರಿಗೆ ಹೊಸ ಅನುಭವ ನೀಡಿದೆ. ದಿನದ 24 ಗಂಟೆ ಈ ಶೋ ವೀಕ್ಷಿಸುವ ಅವಕಾಶವನ್ನು ಪ್ರೇಕ್ಷಕರಿಗೆ ನೀಡಲಾಗಿತ್ತು. ಈಗ ಬಿಗ್​ ಬಾಸ್ ಟಿವಿ ಸೀಸನ್ ಆರಂಭ ಆಗುತ್ತಿದೆ. ‘ಬಿಗ್ ಬಾಸ್ ಕನ್ನಡ ಸೀಸನ್ 9’ ಯಾವಾಗ ಎಂಬ ಬಗ್ಗೆ ಘೋಷಣೆ ಆಗಿದೆ. ಇದರ ಜತೆಗೆ ಒಟಿಟಿ ಮಂದಿಗೆ ಸರ್​ಪ್ರೈಸ್ ಒಂದು ಸಿಕ್ಕಿದೆ. ಪ್ರೋಮೋದಲ್ಲಿ ಈ ವಿಚಾರ ಸ್ಪಷ್ಟವಾಗಿದೆ.

‘ಬಿಗ್ ಬಾಸ್’ ಮನೆಯಲ್ಲಿ ಸದ್ಯ 8 ಸ್ಪರ್ಧಿಗಳು ಬಂಧಿಯಾಗಿದ್ದಾರೆ. ಒಟಿಟಿ ಸೀಸನ್ ಮುಗಿಯುತ್ತಿದ್ದ ತಕ್ಷಣ ಟಿವಿ ಸೀಸನ್ ಆರಂಭ ಆಗಲಿದೆ ಎಂದು ಈ ಮೊದಲು ಘೋಷಣೆ ಆಗಿತ್ತು. ಆದರೆ, ಈಗ ಆ ರೀತಿ ಮಾಡುತ್ತಿಲ್ಲ. ಒಂದು ವಾರ ಗ್ಯಾಪ್​​ನ ನಂತರದಲ್ಲಿ ಟಿವಿ ಸೀಸನ್ ಆರಂಭ ಆಗಲಿದೆ. ಒಟಿಟಿಯಿಂದ ನಾಲ್ಕು ಸ್ಪರ್ಧಿಗಳು ಟಿವಿ ಸೀಸನ್​ಗೆ ತೆರಳುತ್ತಾರೆ. ಒಟಿಟಿಯಿಂದ ಟೀವಿ ಸೀಸನ್​ ಹೋಗುವ ಮುನ್ನ ನಾಲ್ಕು ಸ್ಪರ್ಧಿಗಳಿಗೆ ಒಂದು ವಾರ ಗ್ಯಾಪ್ ಸಿಗಲಿದೆ.

ಇದನ್ನೂ ಓದಿ
Image
ದೊಡ್ಮನೆಯಲ್ಲಿ ಎದೆ ಬಡಿದುಕೊಂಡು ಅತ್ತ ಜಯಶ್ರೀ; ಬಿಗ್​ ಬಾಸ್​ ಶೋನಲ್ಲಿ ಅಂಥದ್ದೇನಾಯ್ತು?
Image
BBK: ಬಿಗ್​ ಬಾಸ್​ಗೆ ಅವಮಾನ ಮಾಡಿದ ಸೋನು ಗೌಡ; ಮುಲಾಜಿಲ್ಲದೇ ಕ್ಲಾಸ್​ ತೆಗೆದುಕೊಂಡ ಕಿಚ್ಚ ಸುದೀಪ್​
Image
ಬಿಗ್​ ಬಾಸ್​ನಲ್ಲಿ ಹುಡುಗರಿಗೆ ಹೊರಗಿನಿಂದ ಸಿಗುತ್ತಿದೆ ಆ ಒಂದು ವಸ್ತು; ಸೋನು ಹೇಳಿಯೇ ಬಿಟ್ರು
Image
‘ಬಿಗ್​ ಬಾಸ್​ ಒಟಿಟಿ’ ಮನೆಯೊಳಗೆ ನಿಜವಾಗಿ ಏನೆಲ್ಲ ನಡೆಯಿತು? ಎಲ್ಲವನ್ನೂ ವಿವರಿಸಿದ ಸ್ಫೂರ್ತಿ ಗೌಡ

ಬಿಗ್ ಬಾಸ್ ಮನೆಯಲ್ಲಿ ಇರೋದು ಸಣ್ಣ ಟಾಸ್ಕ್​ ಅಲ್ಲವೇ ಅಲ್ಲ. ಹೊರ ಜಗತ್ತಿನ ಪ್ರಪಂಚದಿಂದ ದೂರ ಇರಬೇಕು. ಮನೆಯಲ್ಲಿ ತಮ್ಮದೇ ಪ್ರಪಂಚ ಕಟ್ಟಿಕೊಳ್ಳಬೇಕು. ಮೊಬೈಲ್ ಬಳಕೆ ಮಾಡುವಂತಿಲ್ಲ. ಈ ಎಲ್ಲಾ ಕಾರಣದಿಂದ ಈ ಮನೆಯಲ್ಲಿ ಇರೋದು ಒಂದು ದೊಡ್ಡ ಟಾಸ್ಕ್​. ಈಗ ಮನೆಯ ಸ್ಪರ್ಧಿಗಳಿಗೆ ಒಂದು ವಾರ ಗ್ಯಾಪ್ ಸಿಗುತ್ತಿರುವುದು ನಿಜಕ್ಕೂ ಖುಷಿಯ ವಿಚಾರ.

ಇದನ್ನೂ ಓದಿ: ‘ನನಗೆ ತುಂಬಾ ಕೆಲಸಗಳಿವೆ, ಬಿಗ್ ಬಾಸ್​ಗೆ ಹೋಗಲ್ಲ: TV9ಗೆ ಅನಿರುದ್ಧ ಜತ್ಕರ್ ಸ್ಪಷ್ಟನೆ

ಈ ಬಾರಿ ಟಿವಿ ಬಿಗ್ ಬಾಸ್ ಹೊಸ ರೀತಿಯಲ್ಲಿ ಮೂಡಿ ಬರಲಿದೆ. ಈ ಮೊದಲು ಬಿಗ್ ಬಾಸ್​​ನಲ್ಲಿ ಆಡಿದಂತಹ ದೀಪಿಕಾ ದಾಸ್​, ಪ್ರಶಾಂತ್ ಸಂಬರ್ಗಿ ಮೊದಲಾದ ಸ್ಪರ್ಧಿಗಳು ದೊಡ್ಮನೆಗೆ ಮತ್ತೆ ಎಂಟ್ರಿ ಕೊಡುತ್ತಿದ್ದಾರೆ. ಅಷ್ಟೇ ಅಲ್ಲದೆ ಹೊಸ ಸ್ಪರ್ಧಿಗಳು ಕೂಡ ಬಿಗ್​ ಬಾಸ್​ಗೆ ಬರುತ್ತಿದ್ದಾರೆ. ಸೆಪ್ಟೆಂಬರ್ 24ರಂದು ಸಂಜೆ 6 ಗಂಟೆಗೆ ಬಿಗ್ ಬಾಸ್ ಆರಂಭ ಆಗಲಿದೆ.

Published On - 2:46 pm, Thu, 15 September 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ