AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kajol: ಪ್ರಚಾರಕ್ಕಾಗಿ ಗಿಮಿಕ್​ ಮಾಡಿದ ಕಾಜೋಲ್​; ಇದು ಪ್ರೀತಿ, ಕಾನೂನು ಮತ್ತು ಮೋಸದ ಕಥೆ

The Trial Web Series: ‘ಜೀವನದ ದೊಡ್ಡ ವಿಚಾರಣೆ ಎದುರಿಸುತ್ತಿದ್ದೇನೆ. ಹಾಗಾಗಿ ಸೋಶಿಯಲ್​ ಮೀಡಿಯಾದಿಂದ ಬ್ರೇಕ್​ ತೆಗೆದುಕೊಳ್ಳುತ್ತಿದ್ದೇನೆ’ ಎಂದು ಕಾಜೋಲ್​ ಅವರು ಪೋಸ್ಟ್​ ಮಾಡಿದಾಗ ಅಪ್ಪಟ ಅಭಿಮಾನಿಗಳಿಗೆ ಅಚ್ಚರಿ ಆಗಿದ್ದು ನಿಜ.

Kajol: ಪ್ರಚಾರಕ್ಕಾಗಿ ಗಿಮಿಕ್​ ಮಾಡಿದ ಕಾಜೋಲ್​; ಇದು ಪ್ರೀತಿ, ಕಾನೂನು ಮತ್ತು ಮೋಸದ ಕಥೆ
ಕಾಜೋಲ್​
ಮದನ್​ ಕುಮಾರ್​
|

Updated on: Jun 10, 2023 | 2:58 PM

Share

ಬಾಲಿವುಡ್​ನ ಖ್ಯಾತ ನಟಿ ಕಾಜೋಲ್​ (Kajol) ಅವರು ಸಿನಿಮಾಗಳ ಆಯ್ಕೆಯಲ್ಲಿ ಚ್ಯೂಸಿ ಆಗಿದ್ದಾರೆ. ಅಲ್ಲೊಂದು ಇಲ್ಲೊಂದು ಸಿನಿಮಾಗಳನ್ನು ಮಾತ್ರ ಅವರು ಒಪ್ಪಿಕೊಳ್ಳುತ್ತಾರೆ. ಈ ನಡುವೆ ಅವರಿಗೆ ವೆಬ್​ ಸಿರೀಸ್​ ಲೋಕದಲ್ಲೂ ಬೇಡಿಕೆ ಸೃಷ್ಟಿ ಆಗಿದೆ. ಅವರು ನಟಿಸಿರುವ ‘ದಿ ಟ್ರಯಲ್​’ ವೆಬ್​ ಸಿರೀಸ್​ (The Trial Web Series) ಬಿಡುಗಡೆಗೆ ಸಜ್ಜಾಗಿದೆ. ಶೀಘ್ರದಲ್ಲೇ ಇದರ ಟ್ರೇಲರ್​ ರಿಲೀಸ್​ ಆಗಲಿದೆ. ಅದರ ಪ್ರಚಾರಕ್ಕಾಗಿ ಕಾಜೋಲ್​ ಅವರು ಒಂದು ಗಿಮಿಕ್​ ಮಾಡಿದ್ದಾರೆ. ಅವರ ಈ ಕೆಲಸದ ಬಗ್ಗೆ ನೆಟ್ಟಿಗರಿಂದ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದೆ. ‘ಜೀವನದ ದೊಡ್ಡ ವಿಚಾರಣೆ ಎದುರಿಸುತ್ತಿದ್ದೇನೆ. ಹಾಗಾಗಿ ಸೋಶಿಯಲ್​ ಮೀಡಿಯಾದಿಂದ ಬ್ರೇಕ್​ ತೆಗೆದುಕೊಳ್ಳುತ್ತಿದ್ದೇನೆ’ ಎಂದು ಅವರು ಪೋಸ್ಟ್​ ಮಾಡಿದ್ದಾರೆ. ಅದು ಪ್ರಚಾರದ ಗಿಮಿಕ್​ (Gimmick) ಎಂಬುದು ಈಗ ಬಯಲಾಗಿದೆ.

ಅಮೆರಿಕದ ‘ದಿ ಗುಡ್​ ವೈಫ್​’ ಸರಣಿಯ ಇಂಡಿಯನ್​ ವರ್ಷನ್​ಗೆ ‘ದಿ ಟ್ರಯಲ್​’ ಎಂದು ಶೀರ್ಷಿಕೆ ಇಡಲಾಗಿದೆ. ಇದರಲ್ಲಿ ಕಾಜೋಲ್​ ಅವರು ಮುಖ್ಯಭೂಮಿಕೆ ನಿಭಾಯಿಸಿದ್ದಾರೆ. ಅದರ ಟ್ರೇಲರ್​ ಬಿಡುಗಡೆಗೆ ದಿನಾಂಕ ಫಿಕ್ಸ್​ ಆಗಿದೆ. ಜೂನ್ 12ರಂದು ‘ದಿ ಟ್ರಯಲ್​’ ಟ್ರೇಲರ್​ ಅನಾವರಣ ಆಗಲಿದೆ. ಈ ಶೀರ್ಷಿಕೆಯ ಜೊತೆ ‘ಪ್ರೀತಿ, ಕಾನೂನು ಮತ್ತು ಮೋಸ’ ಎಂಬ ಟ್ಯಾಗ್​ ಲೈನ್​ ಇದೆ. ಹಾಗಾಗಿ ಈ ವೆಬ್​ ಸರಣಿ ಬಗ್ಗೆ ಹೆಚ್ಚಿನ ಕುತೂಹಲ ನಿರ್ಮಾಣ ಆಗಿದೆ. ಇದು ಕೋರ್ಟ್​ ರೂಮ್​ ಡ್ರಾಮಾ ಶೈಲಿಯಲ್ಲಿ ಮೂಡಿಬಂದಿದ್ದು, ಟ್ರೇಲರ್​ ನೋಡಲು ಫ್ಯಾನ್ಸ್​ ಕಾದಿದ್ದಾರೆ.

View this post on Instagram

A post shared by Kajol Devgan (@kajol)

‘ಜೀವನದ ದೊಡ್ಡ ವಿಚಾರಣೆ ಎದುರಿಸುತ್ತಿದ್ದೇನೆ. ಹಾಗಾಗಿ ಸೋಶಿಯಲ್​ ಮೀಡಿಯಾದಿಂದ ಬ್ರೇಕ್​ ತೆಗೆದುಕೊಳ್ಳುತ್ತಿದ್ದೇನೆ’ ಎಂದು ಕಾಜೋಲ್​ ಅವರು ಪೋಸ್ಟ್​ ಮಾಡಿದಾಗ ಅಪ್ಪಟ ಅಭಿಮಾನಿಗಳಿಗೆ ಅಚ್ಚರಿ ಆಗಿದ್ದು ನಿಜ. ಇದು ಡಿವೋರ್ಸ್​ನ ಮುನ್ಸೂಚನೆ ಇರಬಹುದೇ? ಕಾಜೋಲ್​ ಅವರ ಸಂಸಾರದಲ್ಲಿ ಬಿರುಕು ಮೂಡಿರಬಹುದೇ ಎಂಬಿತ್ಯಾದಿ ಅನುಮಾನಗಳು ಕೂಡ ಮೂಡಿದವು. ಆದರೆ ಅದರ ಹಿಂದಿನ ಉದ್ದೇಶ ಕೇವಲ ಗಿಮಿಕ್​ ಎಂಬುದು ಗೊತ್ತಾದಾಗ ಕೆಲವರು ನೆಗೆಟಿವ್​ ಆಗಿ ಕಮೆಂಟ್​ ಮಾಡಿದರು. ಸೆಲೆಬ್ರಿಟಿಗಳು ಸೋಶಿಯಲ್​ ಮೀಡಿಯಾದಲ್ಲಿ ಈ ರೀತಿ ಮಾಡುವ ಟ್ರೆಂಡ್​ ಹೆಚ್ಚಾಗಿದೆ. ಇತ್ತೀಚೆಗೆ ತಮ್ಮ ಜಾಹೀರಾತಿನ ಪ್ರಚಾರಕ್ಕಾಗಿ ರಣಬೀರ್​ ಕಪೂರ್​, ರಶ್ಮಿಕಾ ಮಂದಣ್ಣ ಮುಂತಾದ ಸೆಲೆಬ್ರಿಟಿಗಳು ಇಂಥ ಗಿಮಿಕ್​ ಮಾಡಿದ್ದರು.

ಇದನ್ನೂ ಓದಿ: Kajol: ‘ಕಪ್ಪಗಿದ್ದಾಳೆ, ದಪ್ಪಗಿದ್ದಾಳೆ’ ಎಂದು ಬಾಡಿ ಶೇಮಿಂಗ್​​ ಮಾಡಿದ್ದ ಜನರ ಬಾಯಿ ಮುಚ್ಚಿಸಿದ್ದ ಕಾಜೋಲ್​

ಕಾಜೋಲ್​ ನಟನೆಯ ‘ಸಲಾಂ ವೆಂಕಿ’ ಸಿನಿಮಾ ಕಳೆದ ವರ್ಷ ತೆರೆಕಂಡಿತು. ಈಗ ಅವರು ‘ಲಸ್ಟ್​ ಸ್ಟೋರೀಸ್ 2​’ ಸಿನಿಮಾದಲ್ಲಿ ನಟಿಸಿದ್ದು, ಅದರ ಪ್ರಚಾರ ಕೂಡ ಆರಂಭ ಆಗಿದೆ. ಜೂನ್​ 29ರಂದು ನೆಟ್​ಫ್ಲಿಕ್ಸ್​ ಮೂಲಕ ‘ಲಸ್ಟ್​ ಸ್ಟೋರೀಸ್​ 2’ ರಿಲೀಸ್​ ಆಗಲಿದೆ. ಆ ಬಳಿಕ ‘ಡಿಸ್ನಿ ಪ್ಲಸ್​ ಹಾಟ್​ ಸ್ಟಾರ್​’ ಒಟಿಟಿ ಮೂಲಕ ‘ದಿ ಟ್ರಯಲ್​’ ಪ್ರಸಾರ ಆಗಲಿದೆ. ಇನ್ನು, ಕಾಜೋಲ್​ ಅವರ ಪುತ್ರಿ ನಿಸಾ ದೇವಗನ್​ ಅವರು ಆಗಾಗ ಸುದ್ದಿ ಆಗುತ್ತಿದ್ದಾರೆ. ಅವರು ಚಿತ್ರರಂಗಕ್ಕೆ ಎಂಟ್ರಿ ನೀಡಲಿ ಎಂದು ಫ್ಯಾನ್ಸ್​ ಬಯಸಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ