ಚಿತ್ರರಂಗದಲ್ಲಿ ನಟಿಯರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಾರೆ. ಅದರಲ್ಲಿ ಬಾಡಿ ಶೇಮಿಂಗ್ ಕೂಡ ಒಂದು. ದೇಹದ ಆಕಾರ, ಎತ್ತರ, ಚರ್ಮದ ಬಣ್ಣ ಇತ್ಯಾದಿ ಅಂಶಗಳನ್ನು ಇಟ್ಟುಕೊಂಡು ಅಪಹಾಸ್ಯ ಮಾಡುವವರು ಸಾಕಷ್ಟು ಮಂದಿ ಇದ್ದಾರೆ. ನಟಿ ಕಾಜೋಲ್ ಅವರಿಗೆ ಇಂಥ ಸಮಸ್ಯೆ ಎದುರಾಗಿತ್ತು.
1 / 5
ಬೇರೆ ನಟಿಯರಿಗೆ ಹೋಲಿಸಿದರೆ ಕಾಜೋಲ್ ಅವರ ಮೈ ಬಣ್ಣ ಸ್ವಲ್ಪ ಕಪ್ಪಗಿದೆ. ಅದನ್ನೇ ಗುರಿಯಾಗಿಟ್ಟುಕೊಂಡು ಕೆಲವರು ಬಾಡಿ ಶೇಮಿಂಗ್ ಮಾಡಿದ್ದರು. ದಪ್ಪಗಿದ್ದಾಳೆ ಎಂದು ಕೂಡ ಹೀಯಾಳಿಸಿದ್ದರು. ಆ ಘಟನೆಗಳನ್ನು ಈಗ ಕಾಜೋಲ್ ನೆನಪಿಸಿಕೊಂಡಿದ್ದಾರೆ.
2 / 5
‘ಹ್ಯೂಮನ್ಸ್ ಆಫ್ ಬಾಂಬೆ’ಗೆ ನೀಡಿದ ಸಂದರ್ಶನದಲ್ಲಿ ಕಾಜೋಲ್ ಅವರು ಬಾಡಿ ಶೇಮಿಂಗ್ ಕುರಿತು ಮಾತನಾಡಿದ್ದಾರೆ. ಕಪ್ಪು, ದಪ್ಪ ಎಂದು ಹೀಯಾಳಿಸಿದ್ದು ಮಾತ್ರವಲ್ಲದೇ ಕನ್ನಡಕ ಹಾಕುತ್ತಾರೆ ಎಂಬ ಕಾರಣಕ್ಕೂ ಕಾಜೋಲ್ಗೆ ಅಪಹಾಸ್ಯ ಮಾಡಲಾಗಿತ್ತು.
3 / 5
ಈ ಮಾತುಗಳಿಂದ ಕಾಜೋಲ್ ಅವರಿಗೆ ನೋವಾಗುತ್ತಿತ್ತು. ಆದರೂ ಕೂಡ ಅವರು ಆ ಬಗ್ಗೆ ಜಾಸ್ತಿ ತಲೆ ಕೆಡಿಸಿಕೊಳ್ಳಲಿಲ್ಲ. ತಮ್ಮತನವನ್ನು ಅವರು ಕಾಪಾಡಿಕೊಂಡರು. ನಂತರ ಅವರು ಹೇಗಿದ್ದಾರೋ ಹಾಗೆಯೇ ಜಗತ್ತು ಅವರನ್ನು ಒಪ್ಪಿಕೊಂಡಿತು. ಆ ದಿನಗಳನ್ನು ಕಾಜೋಲ್ ಈಗ ನೆನಪು ಮಾಡಿಕೊಂಡಿದ್ದಾರೆ.
4 / 5
ಇಂದಿಗೂ ಕಾಜೋಲ್ ಅವರು ಚಿತ್ರರಂಗದಲ್ಲಿ ಬ್ಯುಸಿ ಆಗಿದ್ದಾರೆ. ಆದರೆ ಸಿನಿಮಾಗಳ ಆಯ್ಕೆಯಲ್ಲಿ ಅವರು ಚ್ಯೂಸಿ. ಕಾಜೋಲ್ ನಟಿಸಿದ್ದ ‘ಸಲಾಂ ವೆಂಕಿ’ ಸಿನಿಮಾ 2022ರ ಡಿಸೆಂಬರ್ನಲ್ಲಿ ತೆರೆಕಂಡಿತು. ಆ ಸಿನಿಮಾದಲ್ಲಿ ಆಮಿರ್ ಖಾನ್ ಅತಿಥಿ ಪಾತ್ರ ಮಾಡಿದ್ದರು.