‘ಬಾಲಿವುಡ್​ ತನ್ನದೇ ವಿನಾಶವನ್ನು ಸಂಭ್ರಮಿಸುತ್ತದೆ’; ವಿವೇಕ್ ಅಗ್ನೊಹೋತ್ರಿ ಟೀಕೆ

ಜಿಯೋ ಸಿನಿಮಾದಲ್ಲಿ ಉಚಿತವಾಗಿ ‘ಬ್ಲಡಿ ಡ್ಯಾಡಿ’ ನೋಡಲು ಅವಕಾಶ ಇದೆ. ಇಷ್ಟು ದೊಡ್ಡ ಚಿತ್ರವನ್ನು ಉಚಿತವಾಗಿ ಪ್ರದರ್ಶಿಸುತ್ತಿರುವುದು ಏಕೆ ಅನ್ನೋದು ಅವರ ಪ್ರಶ್ನೆ.

‘ಬಾಲಿವುಡ್​ ತನ್ನದೇ ವಿನಾಶವನ್ನು ಸಂಭ್ರಮಿಸುತ್ತದೆ’; ವಿವೇಕ್ ಅಗ್ನೊಹೋತ್ರಿ ಟೀಕೆ
ಶಾಹಿದ್​-ವಿವೇಕ್
Follow us
ರಾಜೇಶ್ ದುಗ್ಗುಮನೆ
|

Updated on: Jun 10, 2023 | 6:50 AM

‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ (The Kashmir Files Movie) ಹಿಟ್ ಆದ ಬಳಿಕ ವಿವೇಕ್ ಅಗ್ನಿಹೋತ್ರಿ ಅವರು ಸಾಕಷ್ಟು ವಿಚಾರಗಳ ಕುರಿತು ಮಾತನಾಡುತ್ತಾರೆ. ಅವರಿಗೆ ಬಾಲಿವುಡ್​ನಲ್ಲಿ ಒಂದು ವರ್ಗದವರನ್ನು ಕಂಡರೆ ಆಗುವುದಿಲ್ಲ. ಅದನ್ನು ಅವರು ಸದಾ ಟೀಕೆ ಮಾಡುತ್ತಾರೆ. ಹಿಂದಿ ಚಿತ್ರರಂಗದವರಲ್ಲಿ ಹೊರಗಿನವರಿಗೆ ಬೆಲೆ ಕೊಡುವುದಿಲ್ಲ ಅನ್ನೋದು ಅವರ ಆರೋಪ. ಈಗ ಅವರು ಶಾಹಿದ್ ಕಪೂರ್ (Shahid Kapoor) ಸಿನಿಮಾ ಬಗ್ಗೆ ಟೀಕೆ ಮಾಡಿದ್ದಾರೆ. ಇಷ್ಟು ದೊಡ್ಡ ಬಜೆಟ್ ಚಿತ್ರವನ್ನು ಉಚಿತವಾಗಿ ಪ್ರಸಾರ ಮಾಡಿದ್ದೇಕೆ ಎಂದು ಅವರು ಪ್ರಶ್ನೆ ಮಾಡಿದ್ದಾರೆ.

ಶಾಹಿದ್ ಕಪೂರ್ ನಟನೆಯ ‘ಬ್ಲಡಿ ಡ್ಯಾಡಿ’ ಚಿತ್ರ ಜಿಯೋ ಸಿನಿಮಾ ಒಟಿಟಿ ಮೂಲಕ ಪ್ರಸಾರ ಕಂಡಿದೆ. ಈ ಚಿತ್ರಕ್ಕೆ ಎಲ್ಲ ಕಡೆಗಳಿಂದ ಮಿಶ್ರ ಪ್ರತಿಕ್ರಿಯೆ ಸಿಕ್ಕಿದೆ. ಅಲಿ ಅಬ್ಬಾಸ್ ಜಫರ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಜಿಯೋ ಸಿನಿಮಾದಲ್ಲಿ ಉಚಿತವಾಗಿ ಸಿನಿಮಾ ನೋಡಲು ಅವಕಾಶ ಇದೆ. ಇಷ್ಟು ದೊಡ್ಡ ಚಿತ್ರವನ್ನು ಉಚಿತವಾಗಿ ಪ್ರದರ್ಶಿಸುತ್ತಿರುವುದು ಏಕೆ ಅನ್ನೋದು ಅವರ ಪ್ರಶ್ನೆ.

ಸುದ್ದಿ ಪತ್ರಿಕೆಯಲ್ಲಿ ಬಂದ ‘ಬ್ಲಡಿ ಡ್ಯಾಡಿ’ ಸಿನಿಮಾದ ಜಾಹೀರಾತಿನ ಫೋಟೋನ ವಿವೇಕ್ ಅಗ್ನಿಹೋತ್ರಿ ಶೇರ್ ಮಾಡಿಕೊಂಡಿದ್ದಾರೆ. ‘ಯಾರಾದರೂ 200 ಕೋಟಿ ರೂಪಾಯಿ ಚಿತ್ರವನ್ನು ಏಕೆ ಉಚಿತವಾಗಿ ತೋರಿಸುತ್ತಾರೆ? ಈ ಹುಚ್ಚು ಬಿಸ್ನೆಸ್​ನ ಮಾಡ್ಯೂಲ್ ಏನು? ದುಃಖದ ಸುದ್ದಿ ಎಂದರೆ ಬಾಲಿವುಡ್ ತನ್ನ ವಿನಾಶವನ್ನು ಆಚರಿಸಿಕೊಳ್ಳುತ್ತಿದೆ’ ಎಂದು ಕ್ಯಾಪ್ಶನ್ ನೀಡಿದ್ದಾರೆ.

ವಿವೇಕ್ ಅಗ್ನಿಹೋತ್ರಿ ಅವರನ್ನು ಅನೇಕರು ಟೀಕೆ ಮಾಡಿದ್ದಾರೆ. ‘ಇದು ಜಿಯೋ ಸಿನಿಮಾ ಬಿಸ್ನೆಸ್ ಮಾಡ್ಯೂಲ್​. ಜಿಯೋ ಸಿನಿಮಾದವರು ಹಲವು ತಿಂಗಳು ಎಲ್ಲವನ್ನೂ ಉಚಿತವಾಗಿ ವೀಕ್ಷಿಸಲು ಅವಕಾಶ ನೀಡುತ್ತಾರೆ. ಈ ಮೂಲಕ ಒಂದಷ್ಟು ಗ್ರಾಹಕರನ್ನು ಹೊಂದುತ್ತಾರೆ. ನಂತರ ನಿಧಾನವಾಗಿ ಚಾರ್ಜ್ ಮಾಡಲು ಆರಂಭಿಸುತ್ತಾರೆ’ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ‘ಬ್ಲಡಿ ಡ್ಯಾಡಿ ತಂಡದವರಿಗೆ ಜಿಯೋ ಸಿನಿಮಾದವರಿಂದ ಹಣ ಸಿಕ್ಕಿರುತ್ತದೆ. ನಿಮಗೇಕೆ ಈ ಬಗ್ಗೆ ಚಿಂತೆ’ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: ಫಿಲ್ಮ್​​ಫೇರ್​ ತಿರಸ್ಕರಿಸಿದ ವಿಚಾರದಲ್ಲೂ ಪ್ರಚಾರ ಪಡೆದ ವಿವೇಕ್ ಅಗ್ನಿಹೋತ್ರಿ; ಛೀಮಾರಿ ಹಾಕಿದ ನೆಟ್ಟಿಗರು

ವಿವೇಕ್ ಅಗ್ನಿಹೋತ್ರಿ ಅವರು ‘ದಿ ವ್ಯಾಕ್ಸಿನ್ ವಾರ್’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರಕ್ಕೆ ಈಗ ಕೊನೇ ಹಂತದ ಕೆಲಸಗಳು ನಡೆಯುತ್ತಿವೆ. ಕೆಲವು ದಿನಗಳ ಶೂಟಿಂಗ್​ ಬಾಕಿ ಇದೆ. ಭಾರತದಲ್ಲಿ ಈ ಸಿನಿಮಾವನ್ನು ಬಿಡುಗಡೆ ಮಾಡುವುದಕ್ಕೂ ಮುನ್ನ ಅಮೆರಿಕದಲ್ಲಿ ಪ್ರೀಮಿಯರ್​ ಮಾಡಲು ನಿರ್ದೇಶಕ ವಿವೇಕ್​ ಅಗ್ನಿಹೋತ್ರಿ ಅವರು ತೀರ್ಮಾನಿಸಿದ್ದಾರೆ ಎನ್ನಲಾಗಿದೆ. ಈ ಪ್ಲ್ಯಾನ್​ ಪ್ರಕಾರವೇ ಹೋಗುವುದಾದರೆ ‘ದಿ ವ್ಯಾಕ್ಸಿನ್​ ವಾರ್​’ ಬಿಡುಗಡೆ ಆಗಲು ಕೊಂಚ ಕಾಯಬೇಕಾಗುತ್ತದೆ. ಹಾಗಾಗಿ ಈ ವರ್ಷ ದಸರಾ ಹಬ್ಬದ ಸಂದರ್ಭದಲ್ಲಿ ಈ ಸಿನಿಮಾ ರಿಲೀಸ್​ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ