AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಫಿಲ್ಮ್​​ಫೇರ್​ ತಿರಸ್ಕರಿಸಿದ ವಿಚಾರದಲ್ಲೂ ಪ್ರಚಾರ ಪಡೆದ ವಿವೇಕ್ ಅಗ್ನಿಹೋತ್ರಿ; ಛೀಮಾರಿ ಹಾಕಿದ ನೆಟ್ಟಿಗರು

Gulshan Devaiah: ವಿವೇಕ್ ಅಗ್ನಿಹೋತ್ರಿ ಬಗ್ಗೆ ಚರ್ಚೆ ನಡೆದಿದೆ. ಈ ವಿಚಾರದಲ್ಲಿ ವಿವೇಕ್ ಅಗ್ನಿಹೋತ್ರಿಯನ್ನು ಅನೇಕರು ಪ್ರಶ್ನೆ ಮಾಡಿದ್ದಾರೆ. ಅವರು ಪ್ರಚಾರಕ್ಕಾಗಿ ಈ ರೀತಿ ಮಾಡಿದ್ದಾರೆ ಎಂದು ಅನೇಕರು ಹೇಳಿದ್ದಾರೆ.

ಫಿಲ್ಮ್​​ಫೇರ್​ ತಿರಸ್ಕರಿಸಿದ ವಿಚಾರದಲ್ಲೂ ಪ್ರಚಾರ ಪಡೆದ ವಿವೇಕ್ ಅಗ್ನಿಹೋತ್ರಿ; ಛೀಮಾರಿ ಹಾಕಿದ ನೆಟ್ಟಿಗರು
ವಿವೇಕ್ ಅಗ್ನಿಹೋತ್ರಿ
ರಾಜೇಶ್ ದುಗ್ಗುಮನೆ
|

Updated on: Apr 28, 2023 | 12:40 PM

Share

‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ತೆರೆಗೆ ಬಂದ ಬಳಿಕ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ (Vivek Agnihotri) ಅವರು ಸಾಕಷ್ಟು ಚರ್ಚೆಗೆ ಒಳಗಾಗುತ್ತಿದ್ದಾರೆ. ಹಲವು ವಿಚಾರಗಳ ಬಗ್ಗೆ ಅವರು ಮಾತನಾಡುತ್ತಿದ್ದಾರೆ. ಈಗ ಅವರು ಎಡವಟ್ಟೊಂದನ್ನು ಮಾಡಿಕೊಂಡಿದ್ದಾರೆ. ಫಿಲ್ಮ್​ಫೇರ್ ಪ್ರಶಸ್ತಿಯನ್ನು ತಿರಸ್ಕರಿಸಿರುವುದು ಮಾತ್ರವಲ್ಲ ಆ ಬಗ್ಗೆ ಅವರು ಪ್ರಚಾರ ಪಡೆಯಲು ಮುಂದಾಗಿದ್ದಾರೆ. ಈ ವಿಚಾರವನ್ನು ಬಾಲಿವುಡ್ ಹೀರೋ ಗುಲ್ಶನ್ ದೇವಯ್ಯ (Gulshan Devaiah) ತೆರೆದಿಟ್ಟಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ.

ಏಪ್ರಿಲ್ 27ರಂದು ಮುಂಬೈನಲ್ಲಿ ಅದ್ದೂರಿಯಾಗಿ ಫಿಲ್ಮ್​ಫೆರ್ ಪ್ರಶಸ್ತಿ ಕಾರ್ಯಕ್ರಮ ನಡೆದಿದೆ. ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ 7 ವಿಭಾಗಗಳಲ್ಲಿ ನಾಮಿನೇಟ್ ಆಗಿತ್ತು. ಆದರೆ, ಈ ಅವಾರ್ಡ್​ನ ಅವರು ತಿರಸ್ಕರಿಸಿದ್ದರು. ‘ ನೈತಿಕತೆ ಇಲ್ಲದ, ಸಿನಿಮಾವಿರೋಧಿಯಾದ ಈ ಪ್ರಶಸ್ತಿತನ್ನು ನಯವಾಗಿ ತಿರಸ್ಕರಿಸುತ್ತೇನೆ. ಫಿಲ್ಮ್​ಫೇರ್​ನಿಂದ ನಿರ್ದೇಶಕರಿಗೆ ಘನತೆ ಬರೋದಿಲ್ಲ. ಅವಮಾನಿಸುವ ಈ ವ್ಯವಸ್ಥೆ ಅಂತ್ಯವಾಗಬೇಕು. ಹಾಗಾಗಿ ನಾನು ಇದನ್ನು ವಿರೋಧಿಸುತ್ತಿದ್ದೇನೆ’ ಎಂದು ವಿವೇಕ್​ ಅಗ್ನಿಹೋತ್ರಿ ಹೇಳಿದ್ದರು. ಅಷ್ಟೇ ಅಲ್ಲ ಈ ಬಗ್ಗೆ ಪ್ರಸಾರವಾದ ವರದಿಯನ್ನು ಅವರು ಟ್ವೀಟ್ ಮಾಡಿದ್ದರು.

ಇದನ್ನೂ ಓದಿ: ‘ಬೈಕಾಟ್ ಗ್ಯಾಂಗ್’ ಬಗ್ಗೆ ವಿವೇಕ್ ಅಗ್ನಿಹೋತ್ರಿಗೆ ಅನುಮಾನ; ‘ಪಠಾಣ್​’ ತಂಡದ ಗಿಮಿಕ್ ಬಿಚ್ಚಿಟ್ಟ ನಿರ್ದೇಶಕ

ವಿವೇಕ್ ಅಗ್ನಿಹೋತ್ರಿ ಟ್ವೀಟ್​ನ ಗುಲ್ಶನ್ ರೀಟ್ವೀಟ್ ಮಾಡಿಕೊಂಡಿದ್ದಾರೆ. ‘ಸರ್, ನನಗೆ ಸಣ್ಣ ಅನುಮಾನ ಇದೆ. ಪ್ರಶಸ್ತಿ ತಿರಸ್ಕಾರದ ಬಗ್ಗೆ ಟ್ವೀಟ್ ಮಾಡಿದ್ದೀರಿ ಮತ್ತು ಅದನ್ನು ವಾಟ್ಸಾಪ್‌ನ ಮೂಲಕ ಕಳುಹಿಸಿದ್ದೀರಿ.  ಅದೃಷ್ಟವಶಾತ್ ನಾನು ನಿಮ್ಮ ಕಾಂಟ್ಯಾಕ್ಟ್​ ಲಿಸ್ಟ್​ನಲ್ಲಿದ್ದೇನೆ. ಹೀಗಾಗಿ ನನಗೂ ಆ ಮೆಸೇಜ್ ಬಂತು. ನಿಮ್ಮ ಮೆಸೇಜ್​​ನ ಸ್ವೀಕರಿಸಲು ಯಾವಾಗಲೂ ಖುಷಿ ಆಗಿತ್ತದೆ. ಆದರೆ, ಇದು ಏಕೆ? ನಿಮಗೆ ಏನು ಅನ್ನಿಸಿತೋ ಅದನ್ನು ಟ್ವೀಟ್ ಮಾಡಿ. ಆದರೆ, ಅದನ್ನು ವಾಟ್ಸ್​​ಪ್ ಮೂಲಕ ಏಕೆ ಕಳುಹಿಸಬೇಕು’ ಎಂದು ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: 68th Filmfare Awards: ‘ಫಿಲ್ಮ್​ಫೇರ್’​ ಪ್ರಶಸ್ತಿ ತಿರಸ್ಕರಿಸಿದ ವಿವೇಕ್​ ಅಗ್ನಿಹೋತ್ರಿ; ಈ ನಿರ್ಧಾರದ ಹಿಂದಿದೆ ಪ್ರಮುಖ ಕಾರಣ

ಈ ಬಗ್ಗೆ ಚರ್ಚೆ ನಡೆದಿದೆ. ಈ ವಿಚಾರದಲ್ಲಿ ವಿವೇಕ್ ಅಗ್ನಿಹೋತ್ರಿಯನ್ನು ಅನೇಕರು ಪ್ರಶ್ನೆ ಮಾಡಿದ್ದಾರೆ. ಅವರು ಪ್ರಚಾರಕ್ಕಾಗಿ ಈ ರೀತಿ ಮಾಡಿದ್ದಾರೆ ಎಂದು ಅನೇಕರು ಹೇಳಿದ್ದಾರೆ. ಇನ್ನೂ ಕೆಲವರೂ ಗುಲ್ಶನ್ ಅವರನ್ನು ಪ್ರಶ್ನೆ ಮಾಡಿದ್ದಾರೆ. ‘ವಾಟ್ಸಾಪ್ ವಿಚಾರವನ್ನು ಅಲ್ಲಿಗೇ ಸೀಮಿತ ಮಾಡಬೇಕು. ಅದನ್ನು ಟ್ವಿಟರ್​ಗೆ ಏಕೆ ತಂದಿರಿ’ ಎಂದು ಕೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ