68th Filmfare Awards: ‘ಫಿಲ್ಮ್​ಫೇರ್’​ ಪ್ರಶಸ್ತಿ ತಿರಸ್ಕರಿಸಿದ ವಿವೇಕ್​ ಅಗ್ನಿಹೋತ್ರಿ; ಈ ನಿರ್ಧಾರದ ಹಿಂದಿದೆ ಪ್ರಮುಖ ಕಾರಣ

Vivek Agnihotri: ಪ್ರಶಸ್ತಿ ಪ್ರದಾನ ಸಮಾರಂಭಗಳ ಹಿಂದಿರುವ ರಾಜಕೀಯದ ಬಗ್ಗೆ ಈಗಾಗಲೇ ಅನೇಕ ನಟ-ನಟಿಯರು ಮಾತನಾಡಿದ್ದುಂಟು. ಈಗಿನದ್ದು ವಿವೇಕ್​ ಅಗ್ನಿಹೋತ್ರಿ ಸರದಿ.

68th Filmfare Awards: ‘ಫಿಲ್ಮ್​ಫೇರ್’​ ಪ್ರಶಸ್ತಿ ತಿರಸ್ಕರಿಸಿದ ವಿವೇಕ್​ ಅಗ್ನಿಹೋತ್ರಿ; ಈ ನಿರ್ಧಾರದ ಹಿಂದಿದೆ ಪ್ರಮುಖ ಕಾರಣ
ವಿವೇಕ್ ಅಗ್ನಿಹೋತ್ರಿ
Follow us
|

Updated on:Apr 27, 2023 | 4:08 PM

ನಿರ್ದೇಶಕ ವಿವೇಕ್​ ಅಗ್ನಿಹೋತ್ರಿ (Vivek Agnihotri) ಅವರು ತಮ್ಮ ನೇರ ನಡೆ-ನುಡಿಯ ಕಾರಣದಿಂದ ಆಗಾಗ ಸುದ್ದಿ ಆಗುತ್ತಾರೆ. ಈ ಸ್ವಭಾವದಿಂದ ಅವರು ಅನೇಕರ ವಿರೋಧ ಕಟ್ಟಿಕೊಂಡಿದ್ದಾರೆ. ಈಗ ಪ್ರತಿಷ್ಠಿತ ‘ಫಿಲ್ಮ್​ಫೇರ್​’ ಪ್ರಶಸ್ತಿ (Filmfare Awards) ವಿರುದ್ಧ ಅವರು ಗುಡುಗಿದ್ದಾರೆ. ಚಿತ್ರರಂಗದಲ್ಲಿ ಇರುವ ಬಹುತೇಕರಿಗೆ ಪ್ರಶಸ್ತಿ ಬಗ್ಗೆ ಆಸೆ ಇರುತ್ತದೆ. ಅದರಲ್ಲೂ ‘ಫಿಲ್ಮ್​ಫೇರ್​’ ರೀತಿಯ ಅವಾರ್ಡ್​ ಸಿಗಬೇಕು ಎಂದು ಎಲ್ಲರೂ ಬಯಸುತ್ತಾರೆ. ಆದರೆ ನಿರ್ದೇಶಕ ವಿವೇಕ್​ ಅಗ್ನಿಹೋತ್ರಿ ಅವರು ಈ ಸಾಲಿಗೆ ಸೇರುವವರಲ್ಲ. ಅವರು ನಿರ್ದೇಶನ ಮಾಡಿರುವ ‘ದಿ ಕಾಶ್ಮೀರ್​ ಫೈಲ್ಸ್​’ (The Kashmir Files) ಸಿನಿಮಾ ಬರೋಬ್ಬರಿ 7 ವಿಭಾಗಗಳಲ್ಲಿ ನಾಮಿನೇಟ್​ ಆಗಿದೆ. ಹಾಗಿದ್ದರೂ ಕೂಡ ಈ ಪ್ರಶಸ್ತಿ ಪಡೆಯಬಾರದು ಎಂದು ವಿವೇಕ್​ ಅಗ್ನಿಹೋತ್ರಿ ನಿರ್ಧರಿಸಿದ್ದಾರೆ. ತಮ್ಮ ಈ ನಿರ್ಧಾರಕ್ಕೆ ಕಾರಣ ಏನು ಎಂಬುದನ್ನು ಅವರು ವಿವರಿಸಿದ್ದಾರೆ.

ಪ್ರಶಸ್ತಿ ಪ್ರದಾನ ಸಮಾರಂಭಗಳ ಹಿಂದಿರುವ ರಾಜಕೀಯದ ಬಗ್ಗೆ ಈಗಾಗಲೇ ಅನೇಕ ನಟ-ನಟಿಯರು ಮಾತನಾಡಿದ್ದುಂಟು. ಈಗಿನದ್ದು ವಿವೇಕ್​ ಅಗ್ನಿಹೋತ್ರಿ ಸರದಿ. ಈ ಬಗ್ಗೆ ಅವರು ಸೋಶಿಯಲ್​ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ‘68ನೇ ಫಿಲ್ಮ್​ಫೇರ್​ ಅವಾರ್ಡ್ಸ್​​ನಲ್ಲಿ ನನ್ನ ದಿ ಕಾಶ್ಮೀರ್​ ಫೈಲ್ಸ್​ ಸಿನಿಮಾ 7 ವಿಭಾಗಗಳಲ್ಲಿ ನಾಮಿನೇಟ್​ ಆಗಿದೆ ಎಂಬುದು ಮಾಧ್ಯಮಗಳಿಂದ ತಿಳಿಯಿತು. ಆದರೆ ನೈತಿಕತೆ ಇಲ್ಲದ, ಸಿನಿಮಾವಿರೋಧಿಯಾದ ಈ ಪ್ರಶಸ್ತಿತನ್ನು ನಯವಾಗಿ ತಿರಸ್ಕರಿಸುತ್ತೇನೆ’ ಎಂದು ವಿವೇಕ್​ ಅಗ್ನಿಹೋತ್ರಿ ಅವರು ಬರಹ ಆರಂಭಿಸಿದ್ದಾರೆ.

ಇದನ್ನೂ ಓದಿ
Image
Vivek Agnihotri: ವಿವೇಕ್​ ಅಗ್ನಿಹೋತ್ರಿಗೆ ಅಶ್ಲೀಲ ಸಂದೇಶ: ಸ್ಕ್ರೀನ್​ ಶಾಟ್​ ಸಮೇತ ಬಯಲಿಗೆ ಎಳೆದ ನಿರ್ದೇಶಕ
Image
Vivek Agnihotri: ಹೆಡ್​ಲೈನ್​ ಓದಿ ಯಾಮಾರಿದ ವಿವೇಕ್​ ಅಗ್ನಿಹೋತ್ರಿ; ‘ಕಾಂತಾರ’ ಬಗ್ಗೆ ಅನುರಾಗ್​ ಕಶ್ಯಪ್ ಹೇಳಿದ್ದೇ ಬೇರೆ
Image
Vivek Agnihotri: ಶಾರುಖ್​​ ನಟನೆಯ ‘ಬೇಷರಂ ರಂಗ್​’ ಹಾಡು ನೋಡಿ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ ವಿವೇಕ್​ ಅಗ್ನಿಹೋತ್ರಿ
Image
Vivek Agnihotri: ದೆಹಲಿ ಹೈಕೋರ್ಟ್​ನಲ್ಲಿ ಬೇಷರತ್​ ಕ್ಷಮೆ ಯಾಚಿಸಿದ ‘ದಿ ಕಾಶ್ಮೀರ್​ ಫೈಲ್ಸ್​’ ನಿರ್ದೇಶಕ ವಿವೇಕ್​ ಅಗ್ನಿಹೋತ್ರಿ

‘ಫಿಲ್ಮ್​ಫೇರ್​ ಆಯೋಜಕರ ಪ್ರಕಾರ ಸ್ಟಾರ್​ ಕಲಾವಿದರನ್ನು ಹೊರತುಪಡಿಸಿ ಇನ್ನುಳಿದವರ ಮುಖಕ್ಕೆ ಬೆಲೆ ಇಲ್ಲ. ಬೇರೆ ಯಾರೂ ಮುಖ್ಯರಲ್ಲ. ಫಿಲ್ಮ್​ಫೇರ್​ನಿಂದ ನಿರ್ದೇಶಕರಿಗೆ ಘನತೆ ಬರೋದಿಲ್ಲ. ಬದಲಿಗೆ, ಅವಮಾನಿಸುವ ಈ ವ್ಯವಸ್ಥೆ ಅಂತ್ಯವಾಗಬೇಕು. ಹಾಗಾಗಿ ನಾನು ಇದನ್ನು ವಿರೋಧಿಸುತ್ತಿದ್ದೇನೆ. ಬರಹಗಾರರು, ನಿರ್ದೇಶಕರು ಮತ್ತು ಇತರೆ ವಿಭಾಗಗಳ ಮುಖ್ಯಸ್ಥರನ್ನು ಕೀಳಾಗಿ ಕಾಣುವ ವ್ಯವಸ್ಥೆಯ ಭಾಗವಾಗಲು ನಾನು ನಿರಾಕರಿಸುತ್ತೇನೆ’ ಎಂದು ವಿವೇಕ್​ ಅಗ್ನಿಹೋತ್ರಿ ಹೇಳಿದ್ದಾರೆ.

ಮಾದಕ ಸಿನಿಮಾ ಮಾಡಿದ ನಿರ್ದೇಶಕ ಅಂತ ಟೀಕಿಸಿದ್ದಕ್ಕೆ ರಾಹುಲ್​ ಗಾಂಧಿ ರೀತಿ ಉತ್ತರಿಸಿದ ವಿವೇಕ್​ ಅಗ್ನಿಹೋತ್ರಿ

2022ರಲ್ಲಿ ತೆರೆಕಂಡ ‘ದಿ ಕಾಶ್ಮೀರ್​ ಫೈಲ್ಸ್​’ ಸಿನಿಮಾ ಹೊಸ ಸಂಚಲನವನ್ನೇ ಸೃಷ್ಟಿ ಮಾಡಿತ್ತು. ಅನುಪಮ್​ ಖೇರ್​, ದರ್ಶನ್​ ಕುಮಾರ್​, ಪಲ್ಲವಿ ಜೋಶಿ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರದಿಂದ ವಿವೇಕ್​ ಅಗ್ನಿಹೋತ್ರಿ ಅವರಿಗೆ ಖ್ಯಾತಿ ಸಿಕ್ಕಿದೆ. 68ನೇ ‘ಫಿಲ್ಮ್​ಫೇರ್​’ ಅವಾರ್ಡ್ಸ್​ನ ಅತ್ಯುತ್ತಮ ಸಿನಿಮಾ, ಅತ್ಯುತ್ತಮ ನಿರ್ದೇಶನ, ಅತ್ಯುತ್ತಮ ಪೋಷಕ ನಟ, ಅತ್ಯುತ್ತಮ ನಟ, ಅತ್ಯುತ್ತಮ ಚಿತ್ರಕಥೆ ಮುಂತಾದ ವಿಭಾಗಗಳಲ್ಲಿ ಈ ಸಿನಿಮಾ ನಾಮಿನೇಟ್​ ಆಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 4:08 pm, Thu, 27 April 23

ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್
ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ