AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾದಕ ಸಿನಿಮಾ ಮಾಡಿದ ನಿರ್ದೇಶಕ ಅಂತ ಟೀಕಿಸಿದ್ದಕ್ಕೆ ರಾಹುಲ್​ ಗಾಂಧಿ ರೀತಿ ಉತ್ತರಿಸಿದ ವಿವೇಕ್​ ಅಗ್ನಿಹೋತ್ರಿ

Vivek Agnihotri | Rahul Gandhi: ‘ರಾಹುಲ್​ ಗಾಂಧಿ ಯಾವಾಗಲೂ ಅನರ್ಹರೇ ಆಗಿದ್ದರು. ಈಗ ಆ ವಿಚಾರವನ್ನು ಅಧಿಕೃತಗೊಳಿಸಲಾಗಿದೆ’ ಎಂದು ವಿವೇಕ್​ ಅಗ್ನಿಹೋತ್ರಿ ವ್ಯಂಗ್ಯವಾಡಿ​ದ್ದಾರೆ. ಅದಕ್ಕೆ ನೆಟ್ಟಿಗರಿಂದ ವಿರೋಧ ವ್ಯಕ್ತವಾಗಿದೆ.

ಮಾದಕ ಸಿನಿಮಾ ಮಾಡಿದ ನಿರ್ದೇಶಕ ಅಂತ ಟೀಕಿಸಿದ್ದಕ್ಕೆ ರಾಹುಲ್​ ಗಾಂಧಿ ರೀತಿ ಉತ್ತರಿಸಿದ ವಿವೇಕ್​ ಅಗ್ನಿಹೋತ್ರಿ
ವಿವೇಕ್ ಅಗ್ನಿಹೋತ್ರಿ, ರಾಹುಲ್ ಗಾಂಧಿ
ಮದನ್​ ಕುಮಾರ್​
|

Updated on:Mar 27, 2023 | 4:59 PM

Share

ನಿರ್ದೇಶಕ ವಿವೇಕ್​ ಅಗ್ನಿಹೋತ್ರಿ (Vivek Agnihotri) ಅವರು ಒಂದಿಲ್ಲೊಂದು ಕಾರಣಕ್ಕೆ ಸುದ್ದಿ ಆಗುತ್ತಾರೆ. ಅವರು ನರೇಂದ್ರ ಮೋದಿ ಸರ್ಕಾರದ ಪರವಾಗಿ ಇದ್ದಾರೆ ಎಂಬುದನ್ನು ಹೊಸದಾಗಿ ಹೇಳಬೇಕಾದ್ದಿಲ್ಲ. ಅನೇಕ ಬಾರಿ ಅವರು ಮೋದಿ ಸರ್ಕಾರದ ಪರವಾಗಿ ಮಾತನಾಡಿದ್ದಿದೆ. ಅದೇ ರೀತಿ ರಾಹುಲ್​ ಗಾಂಧಿ ಅವರನ್ನು ಟೀಕಿಸಿದ್ದಾರೆ ಕೂಡ. ಈಗ ಮತ್ತೆ ವಿವೇಕ್​ ಅಗ್ನಿಹೋತ್ರಿ ಅವರು ರಾಜಕೀಯದ ಕುರಿತು ತಮ್ಮ ಅನಿಸಿಕೆ ಹಂಚಿಕೊಂಡು ಸುದ್ದಿ ಆಗಿದ್ದಾರೆ. ಆದರೆ ಅವರ ಮಾತುಗಳಿಗೆ ಕೆಲವರಿಂದ ವಿರೋಧ ವ್ಯಕ್ತವಾಗಿದೆ. ಅಲ್ಲದೇ, ಈ ಹಿಂದೆ ವಿವೇಕ್​ ಅಗ್ನಿಹೋತ್ರಿ ನಿರ್ದೇಶಿಸಿದ್ದ ‘ಹೇಟ್​ ಸ್ಟೋರಿ’ ಚಿತ್ರದ ವಿಚಾರವನ್ನೂ ಎಳೆದು ತರಲಾಗಿದೆ. ಅದಕ್ಕೆ ರಾಹುಲ್​ ಗಾಂಧಿ (Rahul Gandhi) ಶೈಲಿಯಲ್ಲೇ ವಿವೇಕ್​ ಅಗ್ನಿಹೋತ್ರಿ ಪ್ರತಿಕ್ರಿಯೆ ನೀಡಿದ್ದಾರೆ. ಅವರ ಟ್ವೀಟ್​ ವೈರಲ್​ ಆಗಿದೆ.

ರಾಹುಲ್​ ಗಾಂಧಿ ಬಗ್ಗೆ ವಿವೇಕ್​ ಅಗ್ನಿಹೋತ್ರಿ ಹೇಳಿದ್ದೇನು?

ಕಾಂಗ್ರೆಸ್​ ಮುಖಂಡ ರಾಹುಲ್​ ಗಾಂಧಿ ಅವರನ್ನು ಅನರ್ಹಗೊಳಿಸಿದ್ದರ ಕುರಿತು ಹಲವರು ತಮ್ಮ ಅನಿಸಿಕೆ ತಿಳಿಸಿದ್ದಾರೆ. ಅದೇ ರೀತಿ ವಿವೇಕ್​ ಅಗ್ನಿಹೋತ್ರಿ ಕೂಡ ಟ್ವೀಟ್​ ಮಾಡಿದ್ದಾರೆ. ‘ರಾಹುಲ್​ ಗಾಂಧಿ ಅವರು ಯಾವಾಗಲೂ ಅನರ್ಹರೇ ಆಗಿದ್ದರು. ಈಗ ಆ ವಿಚಾರವನ್ನು ಅಧಿಕೃತಗೊಳಿಸಲಾಗಿದೆ’ ಎಂದು ಅವರು ವ್ಯಂಗ್ಯವಾಗಿ ಪೋಸ್ಟ್​ ಮಾಡಿ​ದ್ದಾರೆ.

ಇದನ್ನೂ ಓದಿ
Image
Vivek Agnihotri: ವಿವೇಕ್​ ಅಗ್ನಿಹೋತ್ರಿಗೆ ಅಶ್ಲೀಲ ಸಂದೇಶ: ಸ್ಕ್ರೀನ್​ ಶಾಟ್​ ಸಮೇತ ಬಯಲಿಗೆ ಎಳೆದ ನಿರ್ದೇಶಕ
Image
Vivek Agnihotri: ಹೆಡ್​ಲೈನ್​ ಓದಿ ಯಾಮಾರಿದ ವಿವೇಕ್​ ಅಗ್ನಿಹೋತ್ರಿ; ‘ಕಾಂತಾರ’ ಬಗ್ಗೆ ಅನುರಾಗ್​ ಕಶ್ಯಪ್ ಹೇಳಿದ್ದೇ ಬೇರೆ
Image
Vivek Agnihotri: ಶಾರುಖ್​​ ನಟನೆಯ ‘ಬೇಷರಂ ರಂಗ್​’ ಹಾಡು ನೋಡಿ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ ವಿವೇಕ್​ ಅಗ್ನಿಹೋತ್ರಿ
Image
Vivek Agnihotri: ದೆಹಲಿ ಹೈಕೋರ್ಟ್​ನಲ್ಲಿ ಬೇಷರತ್​ ಕ್ಷಮೆ ಯಾಚಿಸಿದ ‘ದಿ ಕಾಶ್ಮೀರ್​ ಫೈಲ್ಸ್​’ ನಿರ್ದೇಶಕ ವಿವೇಕ್​ ಅಗ್ನಿಹೋತ್ರಿ

ವಿವೇಕ್​ ಅಗ್ನಿಹೋತ್ರಿಗೆ ಜೋಕರ್​ ಎಂದ ನೆಟ್ಟಿಗರು!

ವಿವೇಕ್​ ಅಗ್ನಿಹೋತ್ರಿ ಅವರ ಈ ಟ್ವೀಟ್​ ನೋಡಿ ನೆಟ್ಟಿಗರು ಬಗೆಬಗೆಯಲ್ಲಿ ಪ್ರತಿಕ್ರಿಯಿಸಿದ್ದಾರೆ. ‘ದಿ ಕಾಶ್ಮೀರ್​ ಫೈಲ್ಸ್​’ ಸಿನಿಮಾದಿಂದ ವಿವೇಕ್​ ಅಗ್ನಿಹೋತ್ರಿ ಅವರಿಗೆ ದೇಶಾದ್ಯಂತ ಜನಮನ್ನಣೆ ಸಿಕ್ಕಿದೆ ಎಂಬುದು ನಿಜ. ಆದರೆ 2012ರಲ್ಲಿ ಅವರು ಮಾದಕ ಕಥಾಹಂದರ ಇರುವ ‘ಹೇಟ್​ ಸ್ಟೋರಿ’ ಸಿನಿಮಾ ಮಾಡಿದ್ದಕ್ಕೆ ಈಗಲೂ ಅವರನ್ನು ಅನೇಕರು ಹೀಯಾಳಿಸುತ್ತಿದ್ದಾರೆ. ರಾಹುಲ್​ ಗಾಂಧಿ ಬಗ್ಗೆ ವಿವೇಕ್​ ಅಗ್ನಿಹೋತ್ರಿ ವ್ಯಂಗ್ಯವಾಡಿದ ಬೆನ್ನಲ್ಲೇ ಕೆಲವು ನೆಟ್ಟಿಗರು ‘ಹೇಟ್​ ಸ್ಟೋರಿ’ ಚಿತ್ರವನ್ನು ನೆನಪಿಸಿದ್ದಾರೆ. ‘ಅರ್ಹತೆಯ ಬಗ್ಗೆ ಹೇಟ್​ ಸ್ಟೋರಿ ನಿರ್ದೇಶಕರು ಮಾತಾಡ್ತಾರೆ.. ಜೋಕರ್​’ ಎಂದು ಟ್ವಿಟರ್​ ಬಳಕೆದಾರರೊಬ್ಬರು ಟೀಕೆ ಮಾಡಿದ್ದಾರೆ.

ಇದನ್ನೂ ಓದಿ: Vivek Agnihotri: ಏಕಾಏಕಿ ದೀಪಿಕಾ ಪಡುಕೋಣೆಗೆ ಮೆಚ್ಚುಗೆ ಸೂಚಿಸಿದ ವಿವೇಕ್​ ಅಗ್ನಿಹೋತ್ರಿ; ಶುರುವಾಯ್ತು ಟ್ರೋಲ್​

ಈ ಟೀಕೆಗೆ ರಾಹುಲ್​ ಗಾಂಧಿ ಶೈಲಿಯಲ್ಲಿ ವಿವೇಕ್​ ಅಗ್ನಿಹೋತ್ರಿ ಉತ್ತರ ನೀಡಿದ್ದಾರೆ. ‘ನಿಮ್ಮ ಮನಸ್ಸಿನಲ್ಲಿ ಇರುವ ಆ ನಿರ್ದೇಶಕನನ್ನು ನಾನು ಕೊಂದುಬಿಟ್ಟೆ. ಆತ ಈಗ ಇಲ್ಲ. ಈಗ ನಿಮಗೆ ಕಾಣಿಸುತ್ತಿರುವುದು ಆ ವ್ಯಕ್ತಿ ಅಲ್ಲ. ನೀವು ನೋಡುತ್ತಾ ಇದ್ದೀರಿ. ಆದ್ರೆ ಅದು ನಾನಲ್ಲ. ಇದು ನಿಮಗೆ ಅರ್ಥವಾಗಿಲ್ಲ ಎಂದರೆ ಹಿಂದೂ ಗ್ರಂಥಗಳನ್ನು ಓದಿರಿ. ಅವನು ನಿಮ್ಮ ಮನಸ್ಸಿನಲ್ಲಿ ಇದ್ದಾನೆ. ಆದರೆ ಅದು ನಾನಲ್ಲ’ ಎಂದು ವಿವೇಕ್​ ಅಗ್ನಿಹೋತ್ರಿ ಟ್ವೀಟ್​ ಮಾಡಿದ್ದಾರೆ.

‘ನಿಮ್ಮ ಮನಸ್ಸಿನಲ್ಲಿ ಇರುವ ರಾಹುಲ್​ ಗಾಂಧಿಯನ್ನು ನಾನು ಕೊಂದಿದ್ದೇನೆ. ಈಗ ನೀವು ನೋಡುತ್ತಿರುವ ವ್ಯಕ್ತಿ ರಾಹುಲ್​ ಗಾಂಧಿ ಅಲ್ಲ’ ಎಂದು ಜನವರಿ ತಿಂಗಳಲ್ಲಿ ರಾಹುಲ್​ ಗಾಂಧಿ ಅವರು ಮಾತಾಡಿದ ವಿಡಿಯೋ ವೈರಲ್​ ಆಗಿತ್ತು. ಅದನ್ನೇ ಈಗ ವಿವೇಕ್​ ಅಗ್ನಿಹೋತ್ರಿ ಅನುಕರಣೆ ಮಾಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 4:59 pm, Mon, 27 March 23

ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮನ್‌ ಕಿ ಬಾತ್‌ನಲ್ಲಿ ಕನ್ನಡ ಭಾಷೆ ಬಗ್ಗೆ ಪ್ರಧಾನಿ ಮೋದಿ ಶ್ಲಾಘನೆ
ಮನ್‌ ಕಿ ಬಾತ್‌ನಲ್ಲಿ ಕನ್ನಡ ಭಾಷೆ ಬಗ್ಗೆ ಪ್ರಧಾನಿ ಮೋದಿ ಶ್ಲಾಘನೆ
ಒಲಿಂಪಿಕ್ಸ್ ಹೀರೋ ನೀರಜ್ ಚೋಪ್ರಾ ಆರತಕ್ಷತೆಯಲ್ಲಿ ಪ್ರಧಾನಿ ಮೋದಿ ಭಾಗಿ
ಒಲಿಂಪಿಕ್ಸ್ ಹೀರೋ ನೀರಜ್ ಚೋಪ್ರಾ ಆರತಕ್ಷತೆಯಲ್ಲಿ ಪ್ರಧಾನಿ ಮೋದಿ ಭಾಗಿ
ಮನೆಗಳ ತೆರವು: ಹೈಕಮಾಂಡ್​​ ಲೀಡರ್ ಮಧ್ಯಪ್ರವೇಶಕ್ಕೆ ಡಿಕೆಶಿ ಹೇಳಿದ್ದಿಷ್ಟು
ಮನೆಗಳ ತೆರವು: ಹೈಕಮಾಂಡ್​​ ಲೀಡರ್ ಮಧ್ಯಪ್ರವೇಶಕ್ಕೆ ಡಿಕೆಶಿ ಹೇಳಿದ್ದಿಷ್ಟು
ಪತ್ನಿ ಕುಟುಂಬಸ್ಥರ ಸುಳ್ಳು ಆರೋಪಕ್ಕೆ ಹೋಯ್ತು ಜೀವ: ಕಣ್ಣೀರಿಟ್ಟ ಕೆಲಸಗಾರ
ಪತ್ನಿ ಕುಟುಂಬಸ್ಥರ ಸುಳ್ಳು ಆರೋಪಕ್ಕೆ ಹೋಯ್ತು ಜೀವ: ಕಣ್ಣೀರಿಟ್ಟ ಕೆಲಸಗಾರ
ಹೊಸ ವರ್ಷಕ್ಕೆ ಬೆಂಗಳೂರು ಸಜ್ಜು; ನಗರಾದ್ಯಂತ ಪೊಲೀಸ್ ಕಣ್ಗಾವಲು
ಹೊಸ ವರ್ಷಕ್ಕೆ ಬೆಂಗಳೂರು ಸಜ್ಜು; ನಗರಾದ್ಯಂತ ಪೊಲೀಸ್ ಕಣ್ಗಾವಲು