AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜೈಲಿನಲ್ಲಿದ್ದರೂ ನಿಂತಿಲ್ಲ ಸುಕೇಶ್​-ಜಾಕ್ವೆಲಿನ್​ ಪ್ರೇಮಕಥೆ; ಕಾರಾಗೃಹದಿಂದಲೇ ಲವ್​ ಲೆಟರ್​ ರವಾನೆ

Jacqueline Fernandez | Sukesh Chandrashekhar: ಸುಕೇಶ್​ ಚಂದ್ರಶೇಖರ್​ನ ವಂಚನೆ ಪ್ರಕರಣದಿಂದ ದೂರ ಉಳಿದುಕೊಳ್ಳಲು ಜಾಕ್ವೆಲಿನ್​ ಫರ್ನಾಂಡಿಸ್​ ಪ್ರಯತ್ನಿಸುತ್ತಿದ್ದಾರೆ. ಆದರೆ ಅದು ಸಾಧ್ಯವಾಗುತ್ತಿಲ್ಲ.

ಜೈಲಿನಲ್ಲಿದ್ದರೂ ನಿಂತಿಲ್ಲ ಸುಕೇಶ್​-ಜಾಕ್ವೆಲಿನ್​ ಪ್ರೇಮಕಥೆ; ಕಾರಾಗೃಹದಿಂದಲೇ ಲವ್​ ಲೆಟರ್​ ರವಾನೆ
ಜಾಕ್ವೆಲಿನ್ ಫರ್ನಾಂಡಿಸ್, ಸುಕೇಶ್ ಚಂದ್ರಶೇಖರ್
ಮದನ್​ ಕುಮಾರ್​
|

Updated on: Mar 27, 2023 | 7:15 AM

Share

ಉದ್ಯಮಿಗಳಿಗೆ 200 ಕೋಟಿ ರೂಪಾಯಿ ವಂಚಿಸಿದ ಆರೋಪದಲ್ಲಿ ಸುಕೇಶ್​ ಚಂದ್ರಶೇಖರ್ (Sukesh Chandrashekhar)​ ವಿಚಾರಣೆ ಎದುರಿಸುತ್ತಿದ್ದಾನೆ. ಅವನ ಕುರಿತು ಸಿನಿಮಾ ಮಾಡಲು ಚಿತ್ರರಂಗದ ಮಂದಿ ಆಸಕ್ತಿ ತೋರಿಸುತ್ತಿದ್ದಾರೆ. ಅಷ್ಟರಮಟ್ಟಿಗೆ ಇಂಟರೆಸ್ಟಿಂಗ್​ ಆಗಿದೆ ಆತನ ಕೇಸ್​. ಸುಕೇಶ್​ ಚಂದ್ರಶೇಖರ್​ ಜೊತೆ ನಂಟು ಹೊಂದಿದ್ದರಿಂದ ಬಾಲಿವುಡ್​ನ ಖ್ಯಾತ ನಟಿ ಜಾಕ್ವೆಲಿನ್​ ಫರ್ನಾಂಡಿಸ್​ (Jacqueline Fernandez) ಅವರು ಜಾರಿ ನಿರ್ದೇಶನಾಯಲದಿಂದ ತನಿಖೆ ಎದುರಿಸುವಂತಾಯಿತು. ಸುಕೇಶ್​ ಮತ್ತು ಜಾಕ್ವೆಲಿನ್​ ನಡುವೆ ಪ್ರೀತಿ ಚಿಗುರಿತ್ತು ಎಂಬ ಮಾತು ಕೂಡ ಇದೆ. ಈಗ ಸುಕೇಶ್​ ಜೈಲು ಸೇರಿದ್ದರೂ ಕೂಡ ಮನದರಸಿಯನ್ನು ಲವ್​ ಮಾಡೋದು ನಿಲ್ಲಿಸಿಲ್ಲ. ಜೈಲಿನಲ್ಲಿ ಇದ್ದುಕೊಂಡೇ ಲವ್​ ಲೆಟರ್​ (Love Letter) ಬರೆದು ಸುಕೇಶ್​ ಚಂದ್ರಶೇಖರ್​ ಸುದ್ದಿ ಆಗಿದ್ದಾನೆ. ಈ ಬಗ್ಗೆ ಜಾಕ್ವೆಲಿನ್​ ಫರ್ನಾಂಡಿಸ್​ ಕಡೆಯಿಂದ ಯಾವ ರೀತಿಯ ಪ್ರತಿಕ್ರಿಯೆ ಬರಬಹುದು ಎಂಬ ಕೌತುಕ ಮೂಡಿದೆ.

ಜಾಕ್ವೆಲಿನ್​ ಫರ್ನಾಂಡಿಸ್​ ಮತ್ತು ಸುಕೇಶ್​ ಚಂದ್ರಶೇಖರ್​ ಬಹಳ ಆಪ್ತವಾಗಿರುವ ಸೆಲ್ಫಿ ಬಹಳ ದಿನಗಳ ಹಿಂದೆಯೇ ವೈರಲ್​ ಆಗಿತ್ತು. ಇಬ್ಬರ ನಡುವೆ ಒಡನಾಟ ಇತ್ತು ಎಂಬುದಕ್ಕೆ ಇನ್ನೂ ಒಂದಷ್ಟು ಸಾಕ್ಷಿಗಳಿವೆ. ಈ ಪ್ರಕರಣದಿಂದ ದೂರ ಉಳಿದುಕೊಳ್ಳಲು ಜಾಕ್ವೆಲಿನ್​ ಫರ್ನಾಂಡಿಸ್​ ಪ್ರಯತ್ನಿಸುತ್ತಿದ್ದಾರೆ. ಆದರೆ ಅದು ಸಾಧ್ಯವಾಗುತ್ತಿಲ್ಲ. ಮತ್ತೆ ಮತ್ತೆ ಜಾಕ್ವೆಲಿನ್​ ಹೆಸರು ಸುಕೇಶ್​ ಚಂದ್ರಶೇಖರ್​ ಜೊತೆ ತಳುಕು ಹಾಕಿಕೊಳ್ಳುತ್ತಿದೆ.

ಸುಕೇಶ್​ ಚಂದ್ರಶೇಖರ್​ ಬರೆದ ಪತ್ರದಲ್ಲಿ ಏನಿದೆ?

‘ನನ್ನ ಮುದ್ದಾದ ಗೊಂಬೆ.. ನನ್ನ ಹುಟ್ಟುಹಬ್ಬದ ದಿನ ನಿನ್ನನ್ನು ನಾನು ಸಖತ್​​ ಮಿಸ್​ ಮಾಡಿಕೊಳ್ಳುತ್ತಿದ್ದೇನೆ. ನನ್ನ ಸುತ್ತಮುತ್ತ ನಿನ್ನ ಎನರ್ಜಿಯನ್ನು ಮಿಸ್​ ಮಾಡಿಕೊಳ್ಳುತ್ತಿದ್ದೇನೆ. ಅದನ್ನೆಲ್ಲ ಹೇಳಲು ಪದಗಳೇ ಸಾಕಾಗುತ್ತಿಲ್ಲ. ಆದರೆ ನನ್ನ ಮೇಲೆ ನಿನಗೆ ಇರುವ ಪ್ರೀತಿ ಅಪರಿಮಿತ ಅಂತ ನನಗೆ ತಿಳಿದಿದೆ. ನಿನ್ನ ಸುಂದರವಾದ ಹೃದಯದಲ್ಲಿ ಏನಿದೆ ಎಂಬುದು ನನಗೆ ಗೊತ್ತು. ಅದಕ್ಕೆ ಸಾಕ್ಷಿ ಬೇಕಿಲ್ಲ. ಬೇಬಿ.. ಒಂದಂತೂ ನಾನು ಒಪ್ಪಿಕೊಳ್ಳಲೇಬೇಕು. ನಿನ್ನನ್ನು ನಾನು ಎಷ್ಟು ಮಿಸ್​ ಮಾಡಿಕೊಳ್ಳುತ್ತಿದ್ದೇನೆ ಎಂಬುದು ನಿನಗೂ ಗೊತ್ತು’ ಎಂದು ಸುಕೇಶ್​ ಚಂದ್ರಶೇಖರ್​ ಪತ್ರ ಬರೆದಿದ್ದಾನೆ.

ಇದನ್ನೂ ಓದಿ
Image
ಜಾಕ್ವೆಲಿನ್ ಫರ್ನಾಂಡಿಸ್​​​ನ ಈಗಲೂ ಪ್ರೀತಿಸುತ್ತಿದ್ದಾನೆ ಸುಕೇಶ್​? ನಟಿಗೆ ವ್ಯಾಲೆಂಟೈನ್ಸ್​ ವಿಶ್ ಮಾಡಿದ ಆರೋಪಿ
Image
Jacqueline Fernandez: ವಂಚನೆ ಆರೋಪಿ ಸುಕೇಶ್​ ತನ್ನ ಕನಸಿನ ಹುಡುಗ ಅಂತ ತಿಳಿದು ಮದುವೆ ಆಗಲು ನಿರ್ಧರಿಸಿದ್ದ ಜಾಕ್ವೆಲಿನ್​
Image
ಸುಕೇಶ್​ ಚಂದ್ರಶೇಖರ್ ಜತೆಗಿನ ಜಾಕ್ವೆಲಿನ್ ಹೊಸ ಫೋಟೋ ವೈರಲ್​; ಕತ್ತಿನ ಮೇಲಿರುವ ಅಚ್ಚೇನು?
Image
‘ಜಾಕ್ವೆಲಿನ್​ ಜತೆ ಸಂಬಂಧ ಇದ್ದಿದ್ದು ನಿಜ; ಆದರೆ ನಾನು ವಂಚಕ ಅಲ್ಲ’: ಸುಕೇಶ್​ ಚಂದ್ರಶೇಖರ್​ ಹೊಸ ಪುರಾಣ

ಇದನ್ನೂ ಓದಿ: Sukesh Chandrasekhar: ‘ಸುಕೇಶ್​ ಜೀವನಾಧಾರಿತ ಚಿತ್ರವನ್ನು ಬಯೋಪಿಕ್​ ಅನ್ನೋಕೆ ಆಗಲ್ಲ’: ನಿರ್ದೇಶಕ ಆನಂದ್​ ಕುಮಾರ್​

‘ನೀನು ಮತ್ತು ನಿನ್ನ ಪ್ರೀತಿಯು ನನ್ನ ಜೀವನಕ್ಕೆ ಸಿಕ್ಕ ಅತ್ಯುತ್ತಮ ಉಡುಗೊರೆ. ಏನೇ ಬಂದರೂ ನಿನ್ನ ಜೊತೆ ನಾನು ಇರುತ್ತೇನೆ. ಲವ್​ ಯೂ ಬೇಬಿ. ನಿನ್ನ ಹೃದಯ ನೀಡಿದ್ದಕ್ಕೆ ಧನ್ಯವಾದಗಳು. ನನ್ನ ಜನ್ಮದಿನಕ್ಕೆ ಶುಭಕೋರಿದ ಎಲ್ಲ ಸ್ನೇಹಿತರು ಮತ್ತು ಬೆಂಬಲಿಗರಿಗೆ ಧನ್ಯವಾದಗಳು. ನನಗೆ ನೂರಾರು ಲೆಟರ್​ ಮತ್ತು ಗ್ರೀಟಿಂಗ್ಸ್​ ಬಂದಿವೆ’ ಎಂದು ಸುಕೇಶ್​ ಚಂದ್ರಶೇಖರ್​ ಪತ್ರ ಪೂರ್ಣಗೊಳಿಸಿದ್ದಾನೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.