ಜಾಕ್ವೆಲಿನ್ ಫರ್ನಾಂಡಿಸ್ನ ಈಗಲೂ ಪ್ರೀತಿಸುತ್ತಿದ್ದಾನೆ ಸುಕೇಶ್? ನಟಿಗೆ ವ್ಯಾಲೆಂಟೈನ್ಸ್ ವಿಶ್ ಮಾಡಿದ ಆರೋಪಿ
ಜಾಕ್ವೆಲಿನ್ ಹಾಗೂ ಸುಕೇಶ್ ಪರಸ್ಪರ ಪ್ರೀತಿಸುತ್ತಿದ್ದರು. ಇದಕ್ಕೆ ಸಂಬಂಧಿಸಿದಂತೆ ಕೆಲವು ಫೋಟೋಗಳನ್ನು ಸುಕೇಶ್ ಲೀಕ್ ಮಾಡಿದ್ದ. ಇದರಿಂದ ಜಾಕ್ವೆಲಿನ್ಗೆ ಮುಜುಗರ ಆಗಿತ್ತು.
ಜಾಕ್ವೆಲಿನ್ ಫರ್ನಾಂಡಿಸ್ (Jacqueline Fernandez) ಅವರು ಸದ್ಯ ಸುದ್ದಿಯಲ್ಲಿದ್ದಾರೆ. 200 ಕೋಟಿ ರೂಪಾಯಿ ವಂಚನೆ ಪ್ರಕರಣದ ಆರೋಪಿ ಸುಕೇಶ್ ಚಂದ್ರಶೇಖರ್ ಜತೆ ಸಬಂಧ ಇಟ್ಟುಕೊಂಡ ವಿಚಾರಕ್ಕೆ ಅವರು ತನಿಖೆ ಎದುರಿಸುತ್ತಿದ್ದಾರೆ. ಈಗ ಜಾಕ್ವೆಲಿನ್ಗೆ ಆರೋಪಿ ಸುಕೇಶ್ ಚಂದ್ರಶೇಖರ್ (Sukesh Chandrashekhar) ಪ್ರೇಮಿಗಳ ದಿನದ ವಿಶ್ ತಿಳಿಸಿದ್ದಾನೆ. ಈ ವಿಡಿಯೋ ಸಾಕಷ್ಟು ವೈರಲ್ ಆಗಿದೆ.
ಜಾಕ್ವೆಲಿನ್ ಹಾಗೂ ಸುಕೇಶ್ ಪರಸ್ಪರ ಪ್ರೀತಿಸುತ್ತಿದ್ದರು. ಇದಕ್ಕೆ ಸಂಬಂಧಿಸಿದಂತೆ ಕೆಲವು ಫೋಟೋಗಳನ್ನು ಸುಕೇಶ್ ಲೀಕ್ ಮಾಡಿದ್ದ. ಇದರಿಂದ ಜಾಕ್ವೆಲಿನ್ಗೆ ಮುಜುಗರ ಆಗಿತ್ತು. ಈ ಫೋಟೋದಿಂದ ನಟಿಗೆ ಸಂಕಷ್ಟಕೂಡ ಹೆಚ್ಚಿತ್ತು. ಅವರು ವಿವಿಧ ರೀತಿಯಲ್ಲಿ ತನಿಖೆ ಎದುರಿಸುತ್ತಿದ್ದಾರೆ. ಸುಕೇಶ್ನಿಂದ ಹಲವು ದುಬಾರಿ ಗಿಫ್ಟ್ ಪಡೆದಿರುವುದರಿಂದ ಜಾಕ್ವೆಲಿನ್ ಅವರು ಜಾರಿ ನಿರ್ದೇಶನಾಲಯದಿಂದ ಎದುರಾಗುತ್ತಿರುವ ಪ್ರಶ್ನೆಗೆ ಉತ್ತರ ನೀಡುತ್ತಿದ್ದಾರೆ. ಈಗ ಜಾಕ್ವೆಲಿನ್ಗೆ ಸುಕೇಶ್ ಪ್ರೇಮ ಸಂದೇಶ ಕಳುಹಿಸಿದ್ದಾನೆ.
ಸುಕೇಶ್ ಅವರನ್ನು ಕೋರ್ಟ್ಗೆ ಕರೆದುಕೊಂಡು ಹೋಗಲಾಗುತ್ತಿತ್ತು. ಈ ವೇಳೆ ಆತನನ್ನು ಸಿಎನ್ಎನ್ನ್ಯೂಸ್18 ವರದಿಗಾರ ಪ್ರಶ್ನೆ ಮಾಡಿದ್ದಾರೆ. ‘ನನ್ನನ್ನು ಸುಕೇಶ್ ಬಳಸಿಕೊಂಡ ಎಂಬುದು ಜಾಕ್ವೆಲಿನ್ ಆರೋಪ. ಇದಕ್ಕೆ ಏನು ಹೇಳ್ತೀರಾ?’ ಎಂಬುದಾಗಿ ಸುಕೇಶ್ಗೆ ಕೇಳಲಾಯಿತು. ‘ನಾನು ಈ ಬಗ್ಗೆ ಏನನ್ನೂ ಹೇಳಲ್ಲ. ಹೀಗೆ ಹೇಳಲು ಜಾಕ್ವೆಲಿನ್ಗೆ ಅವರದ್ದೇ ಆದ ಕಾರಣಗಳಿವೆ’ ಎಂದಿದ್ದಾರೆ ಸುಕೇಶ್.
‘ನೀವು ಅವರನ್ನು ಈಗಲೂ ಪ್ರೀತಿ ಮಾಡುತ್ತೀರಾ’ ಎಂದೂ ಕೇಳಲಾಯಿತು. ಇದಕ್ಕೆ ಉತ್ತರಿಸಿದ ಅವರು, ‘ನನ್ನ ಕಡೆಯಿಂದ ಅವರಿಗೆ ವ್ಯಾಲೆಂಟೈನ್ಸ್ ದಿನದ ಶುಭಾಶಯ ತಿಳಿಸಿ’ ಎಂದಿದ್ದಾರೆ. ನೋರಾ ಫತೇಹಿ ಬಗ್ಗೆಯೂ ಸುಕೇಶ್ಗೆ ಪ್ರಶ್ನೆ ಮಾಡಲಾಯಿತು. ‘ಹಣಕ್ಕಾಗಿ ಸಂಬಂಧ ಬೆಳೆಸುವವರ ಬಗ್ಗೆ ಮಾತನಾಡಲ್ಲ’ ಎಂದಿದ್ದಾರೆ ಸುಕೇಶ್.
#CNNnews18 confronts Sukesh Chandrashekhar, on question about @Asli_Jacqueline says, “Wish her #happyvalentinesday from my end.”
On #NoraFatehi, he says, “She’s a Gold Digger.”@CNNnews18 #SukeshChandrashekhar pic.twitter.com/zoeCBcK7Po
— Ananya Bhatnagar (@anany_b) February 14, 2023
ಇತ್ತೀಚೆಗೆ ಕೋರ್ಟ್ಗೆ ಮಾಹಿತಿ ನೀಡಿದ್ದ ಜಾಕ್ವೆಲಿನ್, ‘ನಾನು ನಿಮ್ಮ ದೊಡ್ಡ ಫ್ಯಾನ್ ಎಂದು ಚಂದ್ರಶೇಖರ್ ಹೇಳಿದ್ದ. ನನ್ನ ಬಳಿ ದಕ್ಷಿಣ ಭಾರತದಲ್ಲಿ ಸಿನಿಮಾ ಮಾಡುವಂತೆ ಹೇಳಿದ್ದ. ಸನ್ ಟಿವಿ ಮಾಲೀಕ ಆಗಿರುವುದರಿಂದ ಹಲವು ಪ್ರಾಜೆಕ್ಟ್ಗಳು ಲೈನಪ್ ಆಗಿವೆ. ನಾವಿಬ್ಬರೂ ಒಟ್ಟಾಗಿ ಕೆಲಸ ಮಾಡಬೇಕು ಎಂದು ಆತ ಹೇಳಿದ್ದ. ಸುಕೇಶ್ ನನ್ನ ದಾರಿ ತಪ್ಪಿಸಿದ. ನನ್ನ ಜೀವನ ಹಾಗೂ ವೃತ್ತಿಜೀವನವನ್ನು ಆತ ಹಾಳು ಮಾಡಿದ’ ಎಂದು ಜಾಕ್ವೆಲಿನ್ ಹೇಳಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:01 pm, Wed, 15 February 23