Jacqueline Fernandez: ವಂಚನೆ ಆರೋಪಿ ಸುಕೇಶ್​ ತನ್ನ ಕನಸಿನ ಹುಡುಗ ಅಂತ ತಿಳಿದು ಮದುವೆ ಆಗಲು ನಿರ್ಧರಿಸಿದ್ದ ಜಾಕ್ವೆಲಿನ್​

Sukesh Chandrasekhar: ಬುಧವಾರ (ಸೆ.14) ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಜಾಕ್ವೆಲಿನ್​ ಫರ್ನಾಂಡಿಸ್​ ಅವರನ್ನು ಸತತ 9 ಗಂಟೆಗಳ ಕಾಲ ವಿಚಾರಣೆಗೆ ಒಳಪಡಿಸಿದ್ದರು. ಈ ವೇಳೆ ಅನೇಕ ವಿಷಯಗಳ ಹೊರಬಂದಿವೆ.

Jacqueline Fernandez: ವಂಚನೆ ಆರೋಪಿ ಸುಕೇಶ್​ ತನ್ನ ಕನಸಿನ ಹುಡುಗ ಅಂತ ತಿಳಿದು ಮದುವೆ ಆಗಲು ನಿರ್ಧರಿಸಿದ್ದ ಜಾಕ್ವೆಲಿನ್​
ಜಾಕ್ವೆಲಿನ್ ಫರ್ನಾಂಡಿಸ್, ಸುಕೇಶ್ ಚಂದ್ರಶೇಖರ್
Follow us
| Updated By: ಮದನ್​ ಕುಮಾರ್​

Updated on: Sep 17, 2022 | 2:45 PM

ಉದ್ಯಮಿಗಳಿಗೆ 200 ಕೋಟಿ ರೂಪಾಯಿ ವಂಚಿಸಿದ ಆರೋಪದಲ್ಲಿ ಸುಕೇಶ್​ ಚಂದ್ರಶೇಖರ್​ (Sukesh Chandrasekhar) ಅವರ ವಿರುದ್ಧ ತನಿಖೆ ನಡೆಯುತ್ತಿದೆ. ಅವರ ಜೊತೆ ಸಂಪರ್ಕದಲ್ಲಿ ಇದ್ದರು ಎಂಬ ಕಾರಣಕ್ಕೆ ಬಾಲಿವುಡ್​ ನಟಿಯರಾದ ಜಾಕ್ವೆಲಿನ್​ ಫರ್ನಾಂಡಿಸ್​ (Jacqueline Fernandez) ಮತ್ತು ನೋರಾ ಫತೇಹಿ ಅವರು ಕೂಡ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಜಾರಿ ನಿರ್ದೇಶನಾಲಯದ (Enforcement Directorate) ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ. ಅಕ್ರಮ ಹಣ ವರ್ಗಾವಣೆ ಕೇಸ್​ಗೆ ಸಂಬಂಧಿಸಿದಂತೆ ನಟಿಯರನ್ನು ಆಗಾಗ ವಿಚಾರಣೆಗೆ ಒಳಪಡಿಸಲಾಗಗುತ್ತಿದೆ. ಪ್ರತಿ ವಿಚಾರಣೆಯಲ್ಲೂ ಶಾಕಿಂಗ್​ ಸತ್ಯಗಳ ಬಯಲಾಗುತ್ತಿದೆ. ಅಚ್ಚರಿ ಏನೆಂದರೆ, ಸುಕೇಶ್​ ಚಂದ್ರಶೇಖರ್​ ಜೊತೆ ಜಾಕ್ವೆಲಿನ್​ ಫರ್ನಾಂಡಿಸ್​ ಅವರು ಮದುವೆ ಆಗಲು ನಿರ್ಧರಿಸಿದ್ದರು ಎಂಬ ವಿಚಾರ ಈಗ ತಿಳಿದುಬಂದಿದೆ.

ಜಾಕ್ವೆಲಿನ್​ ಫರ್ನಾಂಡಿಸ್​ ಅವರಿಗೆ ಸುಕೇಶ್​ ಚಂದ್ರಶೇಖರ್​ ಅನೇಕ ದುಬಾರಿ ಗಿಫ್ಟ್​ಗಳನ್ನು ನೀಡಿದ್ದರು. ಹಾಗಾಗಿ ಇಬ್ಬರ ನಡುವೆ ಆಪ್ತತೆ ಬೆಳೆದಿತ್ತು. ಇಬ್ಬರೂ ತುಂಬ ಕ್ಲೋಸ್​ ಆಗಿ ಕ್ಲಿಕ್ಕಿಸಿಕೊಂಡಿರುವ ಫೋಟೋಗಳು ವೈರಲ್​ ಆದವು. ‘ಸುಕೇಶ್​ ಚಂದ್ರಶೇಖರ್​ ತನ್ನ ಕನಸಿನ ಹುಡುಗ ಎಂದು ಜಾಕ್ವೆಲಿನ್​ ಅಂದುಕೊಂಡಿದ್ದರು. ಹಾಗಾಗಿ ಅವರನ್ನೇ ಮದುವೆ ಮಾಡಿಕೊಳ್ಳುವುದಾಗಿಯೂ ಅವರು ನಿರ್ಧರಿಸಿದ್ದರು’ ಎಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಎಎನ್​ಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ ಎಂದು ಪಿಂಕ್​ವಿಲ್ಲಾ ವರದಿ ಮಾಡಿದೆ.

ಒಂದಷ್ಟು ದಿನಗಳು ಕಳೆದಂತೆ ಸುಕೇಶ್​ ಚಂದ್ರಶೇಖರ್​ನ ನಿಜವಾದ ಬಣ್ಣ ಜಾಕ್ವೆಲಿನ್​ ಮತ್ತು ನೋರಾ ಫತೇಹಿ ಅವರಿಗೆ ತಿಳಿಯುತ್ತ ಬಂದಿತ್ತು. ಸುಕೇಶ್​ ನಡೆಸುತ್ತಿರುವ ವ್ಯವಹಾರ ಯಾಕೋ ಸರಿ ಇಲ್ಲ ಎಂಬುದು ಗೊತ್ತಾಗುತ್ತಿದ್ದಂತೆಯೇ ನೋರಾ ಫತೇಹಿ ಅವರು ಅಂತರ ಕಾಯ್ದುಕೊಳ್ಳಲು ಆರಂಭಿಸಿದರು. ಆದರೆ ಜಾಕ್ವೆಲಿನ್​ ಫರ್ನಾಂಡಿಸ್​ ಅವರು ಸುಕೇಶ್​ ಜೊತೆ ಒಡನಾಟ ಮುಂದುವರಿಸಿದ್ದರು. ಅದೇ ಈಗ ಅವರಿಗೆ ಕಂಟಕವಾಗಿ ಪರಿಣಮಿಸಿದೆ.

ಇದನ್ನೂ ಓದಿ
Image
ಸುಕೇಶ್ ಚಂದ್ರಶೇಖರ್ ಬಹು ಕೋಟಿ​ ವಂಚನೆ ಪ್ರಕರಣ: ಜಾಕ್ವೆಲಿನ್ ಬಳಿಕ ನೋರಾಗೆ ಹೆಚ್ಚಿತು ಸಂಕಷ್ಟ
Image
ಸುಕೇಶ್ ಕಳ್ಳಾಟ ಜಾಕ್ವೆಲಿನ್​ಗೆ ಗೊತ್ತಿತ್ತು, ಆದರೂ ರಿಲೇಶನ್​ಶಿಪ್​ನಲ್ಲಿದ್ದರು; ಚಾರ್ಜ್​ಶೀಟ್​​ನಲ್ಲಿ ಅಚ್ಚರಿಯ ಉಲ್ಲೇಖ
Image
‘ವಿಕ್ರಾಂತ್ ರೋಣ’ ಸಿನಿಮಾ ಪ್ರಚಾರದ ಮಧ್ಯೆ ಇಡಿ ವಿಚಾರಣೆ ಎದುರಿಸಿದ ನಟಿ ಜಾಕ್ವೆಲಿನ್ ಫರ್ನಾಂಡಿಸ್​
Image
‘ದುಬೈಗೆ ಹೋಗಿ ಬರುತ್ತೇನೆ, ಅವಕಾಶ ನೀಡಿ’; ಕೋರ್ಟ್ ಮುಂದೆ ಅಲವತ್ತುಕೊಂಡ ಜಾಕ್ವೆಲಿನ್ ಫರ್ನಾಂಡಿಸ್

ಬುಧವಾರ (ಸೆ.14) ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಜಾಕ್ವೆಲಿನ್​ ಫರ್ನಾಂಡಿಸ್​ ಅವರನ್ನು ಸತತ 9 ಗಂಟೆಗಳ ಕಾಲ ವಿಚಾರಣೆಗೆ ಒಳಪಡಿಸಿದ್ದರು. ಈ ವೇಳೆ ಅನೇಕ ವಿಷಯಗಳ ಹೊರಬಂದಿವೆ. ಜಾಕ್ವೆಲಿನ್​ ಮ್ಯಾನೇಜರ್​ಗೆ ಸುಕೇಶ್​ ನೀಡಿದ್ದ 8 ಲಕ್ಷ ರೂಪಾಯಿ ಬೆಲೆಯ ಬೈಕ್​ ವಶಪಡಿಸಿಕೊಳ್ಳಲಾಗಿದೆ. ನೋರಾ ಫತೇಹಿ ಅವರನ್ನು ಸುಕೇಶ್​ ಚಂದ್ರಶೇಖರ್​ ಎಂದಿಗೂ ನೇರವಾಗಿ ಭೇಟಿ ಆಗಿಲ್ಲ. ಬದಲಿಗೆ ಎರಡು ಬಾರಿ ವಾಟ್ಸಪ್​ ಮೂಲಕ ಸಂಪರ್ಕಿಸಿದ್ದರು. ಚೆನ್ನೈನ ಸ್ಟುಡಿಯೋಗೆ ಗೆಸ್ಟ್​ ಆಗಿ ಬರುವಂತೆ ನೋರಾಗೆ ಸುಕೇಶ್​ ಆಹ್ವಾನ ನೀಡಿದ್ದರು. ಜೊತೆಗೆ ಬಿಎಂಡಬ್ಲ್ಯು ಕಾರನ್ನು ಗಿಫ್ಟ್​ ಕೊಡುವುದಾಗಿಯೂ ಆಸೆ ತೋರಿಸಿದ್ದರು ಎನ್ನಲಾಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.