ಆಲಿಯಾ ಎಲ್ಲಿದ್ದಾಳೆ ಎಂದು ತಿಳಿಯದೆ ಊಟ ಮಾಡಲ್ಲ, ಬಾತ್​ರೂಮ್ ಹೋಗಲ್ಲ ಎಂದ ರಣಬೀರ್ ಕಪೂರ್

‘ಬಹ್ಮಾಸ್ತ್ರ’ ಸಿನಿಮಾ ತೆರೆಕಂಡ ನಂತರವೂ ರಣಬೀರ್ ಹಲವು ಮಾಧ್ಯಮಗಳಿಗೆ ಸಂದರ್ಶನ ನೀಡುತ್ತಿದ್ದಾರೆ. ಈ ಸಂದರ್ಭದಲ್ಲಿ ಪತ್ನಿ ಆಲಿಯಾ ಬಗ್ಗೆ ಮಾತನಾಡಿದ್ದಾರೆ. 

ಆಲಿಯಾ ಎಲ್ಲಿದ್ದಾಳೆ ಎಂದು ತಿಳಿಯದೆ ಊಟ ಮಾಡಲ್ಲ, ಬಾತ್​ರೂಮ್ ಹೋಗಲ್ಲ ಎಂದ ರಣಬೀರ್ ಕಪೂರ್
ರಣಬೀರ್-ಆಲಿಯಾ
TV9kannada Web Team

| Edited By: Rajesh Duggumane

Sep 18, 2022 | 11:19 AM

ನಟಿ ಆಲಿಯಾ ಭಟ್ (Alia Bhatt) ಹಾಗೂ ರಣಬೀರ್ ಕಪೂರ್ ಮಧ್ಯೆ ಪ್ರೀತಿ ಹುಟ್ಟಿ ಹಲವು ವರ್ಷಗಳೇ ಕಳೆದಿದ್ದವು. ಏಪ್ರಿಲ್ ತಿಂಗಳಲ್ಲಿ ಇಬ್ಬರೂ ಮದುವೆ ಆಗುವ ಮೂಲಕ ಪ್ರೀತಿಗೆ ಹೊಸ ಅರ್ಥ ನೀಡಿದರು. ಈಗ ಈ ದಂಪತಿಯ ಮನೆಗೆ ಹೊಸ ಸದಸ್ಯನ ಆಗಮನ ಆಗಲಿದೆ. ಆಲಿಯಾ ಭಟ್ ಪ್ರೆಗ್ನೆಂಟ್ ಆಗಿದ್ದು, ಮಗುವಿನ ನಿರೀಕ್ಷೆಯಲ್ಲಿ ಇದ್ದಾರೆ. ಈ ಸಂದರ್ಭದಲ್ಲಿ ರಣಬೀರ್ ಕಪೂರ್ ಅವರು ಅಚ್ಚರಿಯ ವಿಚಾರ ಬಿಚ್ಚಿಟ್ಟಿದ್ದಾರೆ. ಆಲಿಯಾ ಭಟ್ ಮೇಲೆ ರಣಬೀರ್ ಅವಲಂಬಿತರಾಗಿದ್ದಾರಂತೆ.

ರಣಬೀರ್ ಕಪೂರ್ ಹಾಗೂ ಆಲಿಯಾ ನಟನೆಯ ‘ಬಹ್ಮಾಸ್ತ್ರ’ ಸಿನಿಮಾ ಇತ್ತೀಚೆಗೆ ರಿಲೀಸ್ ಆಯಿತು. ಈ ಚಿತ್ರಕ್ಕೆ ಎಲ್ಲ ಕಡೆಗಳಿಂದ ಮೆಚ್ಚುಗೆ ಕೇಳಿ ಬರುತ್ತಿದೆ. ಸಿನಿಮಾ ನೂರಾರು ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. ಈ ಸಿನಿಮಾ ತೆರೆಕಂಡ ನಂತರವೂ ರಣಬೀರ್ ಹಲವು ಮಾಧ್ಯಮಗಳಿಗೆ ಸಂದರ್ಶನ ನೀಡುತ್ತಿದ್ದಾರೆ. ಈ ಸಂದರ್ಭದಲ್ಲಿ ಪತ್ನಿ ಆಲಿಯಾ ಬಗ್ಗೆ ಮಾತನಾಡಿದ್ದಾರೆ.

‘ನಾನು ಯಾರ ಮೇಲೂ ಅವಲಂಬಿತನಾಗಿಲ್ಲ ಎಂದು ಎಲ್ಲರಿಗೂ ಅನಿಸುತ್ತದೆ. ಆದರೆ, ನಿಜ ಹೇಳಬೇಕೆಂದರೆ ನಾನು ಆಲಿಯಾ ಭಟ್​ಗೆ ತುಂಬಾನೇ ಅವಲಂಬಿತನಾಗಿದ್ದೇನೆ. ಆಲಿಯಾ ಭಟ್ ಎಲ್ಲಿದ್ದಾರೆ, ಏನು ಮಾಡುತ್ತಿದ್ದಾರೆ ಎಂದು ತಿಳಿಯದೆ ಇದ್ದರೆ ನಾನು ಬಾತ್​ರೂಮ್​ಗೂ ಹೋಗುವುದಿಲ್ಲ, ಊಟವನ್ನೂ ಮಾಡುವುದಿಲ್ಲ. ಅವಳು ನನ್ನ ಜತೆ ಇರಬೇಕು. ನಾವು ಮಾತನಾಡದೇ ಇದ್ದರೂ ಆಲಿಯಾ ಸದಾ ನನ್ನ ಹತ್ತಿರವೇ ಇರಬೇಕು’ ಎಂದಿದ್ದಾರೆ ರಣಬೀರ್ ಕಪೂರ್.

ಆಲಿಯಾ ಹಾಗೂ ರಣಬೀರ್ ಕಪೂರ್ ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಕೋಟ್ಯಾಂತರ ಮಂದಿ ಈ ದಂಪತಿಯನ್ನು ಇಷ್ಟಪಡುತ್ತಾರೆ. ಮದುವೆ ಆದ ಕೇವಲ ಎರಡೂವರೆ ತಿಂಗಳಿಗೆ ಆಲಿಯಾ ಪ್ರೆಗ್ನೆಂಟ್ ಎಂದು ಘೋಷಿಸಿದರು. ಈ ವಿಚಾರ ಸಾಕಷ್ಟು ಅಚ್ಚರಿ ಮೂಡಿಸಿತ್ತು. ಇತ್ತೀಚೆಗೆ ಆಲಿಯಾ ಸಿನಿಮಾ ಶೂಟಿಂಗ್​ಗಾಗಿ ಲಂಡನ್​ಗೆ ತೆರಳಿದ್ದರು. ಮರಳಿ ಬಂದ ನಂತರ ಆಲಿಯಾರನ್ನು ಸ್ವಾಗತಿಸಲು ರಣಬೀರ್ ಮುಂಬೈ ವಿಮಾನ ನಿಲ್ದಾಣಕ್ಕೆ ತೆರಳಿದ್ದರು. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು.

ಇದನ್ನೂ ಓದಿ: ತಗ್ಗುತ್ತಿದೆ ‘ಬ್ರಹ್ಮಾಸ್ತ್ರ’ ಸಿನಿಮಾ ಕಲೆಕ್ಷನ್; ರಣಬೀರ್​-ಆಲಿಯಾ ಚಿತ್ರ ಬಾಚಿದ ಹಣ ಎಷ್ಟು?

ಇದನ್ನೂ ಓದಿ

ರಣಬೀರ್​-ಆಲಿಯಾ ನಟನೆಯ ‘ಬ್ರಹ್ಮಾಸ್ತ್ರ’ ಸಿನಿಮಾ ಭಾರತದ ಬಾಕ್ಸ್ ಆಫೀಸ್​ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡಿದೆ. ಈ ಚಿತ್ರದಿಂದ ಬಾಲಿವುಡ್​ಗೆ ಚೇತರಿಕೆ ಸಿಕ್ಕಿದೆ. ಈ ಸಿನಿಮಾ ಭಾರತದ ಬಾಕ್ಸ್ ಆಫೀಸ್​ನಲ್ಲಿ ಶೀಘ್ರವೇ 200 ಕೋಟಿ ರೂಪಾಯಿ ಕ್ಲಬ್ ಸೇರಲಿದೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada