AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Sukesh Chandrasekhar: ‘ಸುಕೇಶ್​ ಜೀವನಾಧಾರಿತ ಚಿತ್ರವನ್ನು ಬಯೋಪಿಕ್​ ಅನ್ನೋಕೆ ಆಗಲ್ಲ’: ನಿರ್ದೇಶಕ ಆನಂದ್​ ಕುಮಾರ್​

Sukesh Chandrasekhar Biopic: ‘ಸುಕೇಶ್​ ಚಂದ್ರಶೇಖರ್​ 10ರಿಂದ 12 ಭಾಷೆ ಮಾತನಾಡುತ್ತಾನೆ. ಜನರನ್ನು ಅವನು ವಂಚಿಸುವ ರೀತಿಯೇ ಭಿನ್ನ’ ಎಂದು ನಿರ್ದೇಶಕ ಆನಂದ್​ ಕುಮಾರ್​ ಹೇಳಿದ್ದಾರೆ.

Sukesh Chandrasekhar: ‘ಸುಕೇಶ್​ ಜೀವನಾಧಾರಿತ ಚಿತ್ರವನ್ನು ಬಯೋಪಿಕ್​ ಅನ್ನೋಕೆ ಆಗಲ್ಲ’: ನಿರ್ದೇಶಕ ಆನಂದ್​ ಕುಮಾರ್​
ಸುಕೇಶ್ ಚಂದ್ರಶೇಖರ್, ಜಾಕ್ವೆಲಿನ್ ಫರ್ನಾಂಡಿಸ್
ಮದನ್​ ಕುಮಾರ್​
|

Updated on: Mar 18, 2023 | 7:30 AM

Share

ಉದ್ಯಮಿಗಳಿಗೆ ಬರೋಬ್ಬರಿ 200 ಕೋಟಿ ರೂಪಾಯಿ ವಂಚಿಸಿದ ಆರೋಪ ಸುಕೇಶ್​ ಚಂದ್ರಶೇಖರ್​ (Sukesh Chandrasekhar) ಮೇಲಿದೆ. ಆ ಪ್ರಕರಣದಲ್ಲಿ ಅವರು ಜೈಲಿನಲ್ಲಿದ್ದಾರೆ. ಪ್ರಕರಣದ ತನಿಖೆ ಇನ್ನೂ ಪೂರ್ಣಗೊಂಡಿಲ್ಲ. ಈ ಕೇಸ್​ನಲ್ಲಿ ಬಾಲಿವುಡ್​ ಸುಂದರಿಯರಾದ ಜಾಕ್ವೆಲಿನ್​ ಫರ್ನಾಂಡಿಸ್ (Jacqueline Fernandez)​ ಮತ್ತು ನೋರಾ ಫತೇಹಿ ಅವರ ಹೆಸರು ಕೂಡ ಆಗಾಗ ಸುದ್ದಿ ಆಗುತ್ತದೆ. ಸುಕೇಶ್​ ಮತ್ತು ಜಾಕ್ವೆಲಿನ್​ ನಡುವೆ ಪ್ರೀತಿ-ಪ್ರೇಮ ಇತ್ತು ಎಂಬುದಕ್ಕೆ ಕೆಲವು ಫೋಟೋಗಳು ಸಾಕ್ಷಿ ಒದಗಿಸಿವೆ. ಒಟ್ಟಾರೆ ಸುಕೇಶ್​ ಚಂದ್ರಶೇಖರ್​ ಜೀವನವೇ ಕೌತುಕಮಯವಾಗಿದೆ. ಅವರ ಜೀವನದ ಕುರಿತು ಸಿನಿಮಾ ಅಥವಾ ವೆಬ್​ ಸಿರೀಸ್​ ಮಾಡಲು ನಿರ್ದೇಶಕ ಆನಂದ್​ ಕುಮಾರ್ (Director Anand Kumar)​ ನಿರ್ಧರಿಸಿದ್ದಾರೆ. ಆದರೆ ಇದನ್ನು ಬಯೋಪಿಕ್​ ಎಂದು ಕರೆಯಲು ಅವರು ಸಿದ್ಧರಿಲ್ಲ. ತಮ್ಮ ಈ ಹೇಳಿಕೆಗೆ ಕಾರಣ ಏನು ಎಂಬುದನ್ನು ಅವರು ವಿವರಿಸಿದ್ದಾರೆ.

ಸುಕೇಶ್​ ಚಂದ್ರಶೇಖರ್​ ಬದುಕಿನ ವಿವರಗಳನ್ನು ತೆರೆಗೆ ತರುವ ಪ್ರಯತ್ನದಲ್ಲಿ ಆನಂದ್​ ಕುಮಾರ್​ ಈಗಾಗಲೇ ಕಾರ್ಯಪ್ರವೃತ್ತರಾಗಿದ್ದಾರೆ. ಈ ಕುರಿತಾಗಿ ಅವರು ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ‘ಬಯೋಪಿಕ್​ ಮಾಡೋದು ಮಹಾನ್​ ವ್ಯಕ್ತಿಗಳ ಜೀವನದ ಕುರಿತು. ಆದರೆ ಈತ ವಂಚಕ. ಇವನನ್ನು ಅಮರವಾಗಿಸುವ ಉದ್ದೇಶ ನನಗಿಲ್ಲ’ ಎಂದು ಆನಂದ್​ ಕುಮಾರ್​ ಹೇಳಿದ್ದಾರೆ.

ಇದನ್ನೂ ಓದಿ: ಸುಕೇಶ್​ ಚಂದ್ರಶೇಖರ್ ಜತೆಗಿನ ಜಾಕ್ವೆಲಿನ್ ಹೊಸ ಫೋಟೋ ವೈರಲ್​; ಕತ್ತಿನ ಮೇಲಿರುವ ಅಚ್ಚೇನು?

ಇದನ್ನೂ ಓದಿ
Image
ಜಾಕ್ವೆಲಿನ್ ಫರ್ನಾಂಡಿಸ್​​​ನ ಈಗಲೂ ಪ್ರೀತಿಸುತ್ತಿದ್ದಾನೆ ಸುಕೇಶ್​? ನಟಿಗೆ ವ್ಯಾಲೆಂಟೈನ್ಸ್​ ವಿಶ್ ಮಾಡಿದ ಆರೋಪಿ
Image
Jacqueline Fernandez: ವಂಚನೆ ಆರೋಪಿ ಸುಕೇಶ್​ ತನ್ನ ಕನಸಿನ ಹುಡುಗ ಅಂತ ತಿಳಿದು ಮದುವೆ ಆಗಲು ನಿರ್ಧರಿಸಿದ್ದ ಜಾಕ್ವೆಲಿನ್​
Image
ಸುಕೇಶ್​ ಚಂದ್ರಶೇಖರ್ ಜತೆಗಿನ ಜಾಕ್ವೆಲಿನ್ ಹೊಸ ಫೋಟೋ ವೈರಲ್​; ಕತ್ತಿನ ಮೇಲಿರುವ ಅಚ್ಚೇನು?
Image
‘ಜಾಕ್ವೆಲಿನ್​ ಜತೆ ಸಂಬಂಧ ಇದ್ದಿದ್ದು ನಿಜ; ಆದರೆ ನಾನು ವಂಚಕ ಅಲ್ಲ’: ಸುಕೇಶ್​ ಚಂದ್ರಶೇಖರ್​ ಹೊಸ ಪುರಾಣ

ಸುಕೇಶ್​ ಚಂದ್ರಶೇಖರ್​ ಬಗ್ಗೆ ಮಾಹಿತಿ ಕಲೆ ಹಾಕಲು ತಿಹಾರ್​ ಜೈಲಿನ ಹಿರಿಯ ಪೊಲೀಸ್​ ಆಧಿಕಾರಿಗಳನ್ನು ಆನಂದ್​ ಕುಮಾರ್​ ಭೇಟಿ ಆಗಿದ್ದಾರೆ. ಅಲ್ಲಿ ಸೂಕ್ತ ರೀತಿಯಲ್ಲಿ ಅಧ್ಯಯನ ಮಾಡಲಾಗುತ್ತಿದೆ. ಸಿಗುವ ಮಾಹಿತಿಯ ಆಧಾರದಲ್ಲಿ ಅದನ್ನು ಸಿನಿಮಾ ಮಾಡಬೇಕೋ ಅಥವಾ ವೆಬ್​ ಸಿರೀಸ್​ ಮಾಡಬೇಕೋ ಎಂಬುದನ್ನು ಅವರು ನಂತರದಲ್ಲಿ ನಿರ್ಧರಿಸಲಿದ್ದಾರೆ.

ಇದನ್ನೂ ಓದಿ: ‘ಜಾಕ್ವೆಲಿನ್​ ಜತೆ ಸಂಬಂಧ ಇದ್ದಿದ್ದು ನಿಜ; ಆದರೆ ನಾನು ವಂಚಕ ಅಲ್ಲ’: ಸುಕೇಶ್​ ಚಂದ್ರಶೇಖರ್​ ಹೊಸ ಪುರಾಣ

‘ಆತ 10ರಿಂದ 12 ಭಾಷೆ ಮಾತನಾಡುತ್ತಾನೆ. ಅದಕ್ಕೂ ಹೆಚ್ಚಿನ ಭಾಷೆ ತಿಳಿದಿರಬಹುದು. ಜನರನ್ನು ಅವನು ವಂಚಿಸುವ ರೀತಿಯೇ ಭಿನ್ನ. ಈ ಹಗರಣ ಆಗುವುದಕ್ಕೂ ಮುನ್ನ ಅವನು ಹಲವು ವರ್ಷಗಳ ಕಾಲ ಪ್ಲ್ಯಾನ್​ ಮಾಡಿದ್ದ. ಇಂಥ ದೊಡ್ಡ ವಂಚನೆ ಹೇಗೆ ನಡೆಯಿತು? ಅವನ ಮಾಸ್ಟರ್​ ಮೈಂಡ್​ ಹೇಗಿತ್ತು ಎಂಬುದನ್ನು ನಾನು ಜನರಿಗೆ ತೋರಿಸಬೇಕು’ ಎಂದಿದ್ದಾರೆ ಆನಂದ್​ ಕುಮಾರ್.

ಇದನ್ನೂ ಓದಿ: ಜಾಕ್ವೆಲಿನ್​ಗೆ ನೀಡಿದ ಉಡುಗೊರೆ ಲಿಸ್ಟ್​ ತೆಗೆದಿಟ್ಟ ಸುಕೇಶ್​ ಚಂದ್ರಶೇಖರ್; ಅಬ್ಬಬ್ಬಾ ಇಷ್ಟೊಂದಾ?

ಸುಕೇಶ್​ ಕುರಿತು ನಿರ್ಮಾಣ ಆಗಲಿರುವ ಸಿನಿಮಾ ಅಥವಾ ವೆಬ್​ ಸಿರೀಸ್​ನಲ್ಲಿ ಬೇರೆ ಸೆಲೆಬ್ರಿಟಿಗಳ ಹೆಸರು ಪ್ರಸ್ತಾಪ ಆಗುತ್ತೋ ಅಥವಾ ಇಲ್ಲವೋ ಎಂಬ ಕೌತುಕ ಮೂಡಿದೆ. ಸದ್ಯ ಇದಿನ್ನೂ ಪ್ಲ್ಯಾನಿಂಗ್​ ಹಂತದಲ್ಲಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ಮಾಹಿತಿ ಸಿಗಬೇಕಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು