AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Vivek Agnihotri: ಏಕಾಏಕಿ ದೀಪಿಕಾ ಪಡುಕೋಣೆಗೆ ಮೆಚ್ಚುಗೆ ಸೂಚಿಸಿದ ವಿವೇಕ್​ ಅಗ್ನಿಹೋತ್ರಿ; ಶುರುವಾಯ್ತು ಟ್ರೋಲ್​

Deepika Padukone | Oscar Awards: ಬಾಲಿವುಡ್​ನಲ್ಲಿ 2 ಬಣಗಳಿವೆ. ದೀಪಿಕಾ ಪಡುಕೋಣೆ, ಶಾರುಖ್​ ಖಾನ್​ ಮುಂತಾದವರನ್ನು ವಿವೇಕ್​ ಅಗ್ನಿಹೋತ್ರಿ, ಕಂಗನಾ ರಣಾವತ್​ ಮೊದಲಾದ ಸೆಲೆಬ್ರಿಟಿಗಳು ವಿರೋಧಿಸುತ್ತಲೇ ಬಂದಿದ್ದಾರೆ.

Vivek Agnihotri: ಏಕಾಏಕಿ ದೀಪಿಕಾ ಪಡುಕೋಣೆಗೆ ಮೆಚ್ಚುಗೆ ಸೂಚಿಸಿದ ವಿವೇಕ್​ ಅಗ್ನಿಹೋತ್ರಿ; ಶುರುವಾಯ್ತು ಟ್ರೋಲ್​
ವಿವೇಕ್ ಅಗ್ನಿಹೋತ್ರಿ, ದೀಪಿಕಾ ಪಡುಕೋಣೆ
ಮದನ್​ ಕುಮಾರ್​
|

Updated on:Mar 05, 2023 | 12:09 PM

Share

95ನೇ ಅಕಾಡೆಮಿ ಅವಾರ್ಡ್ಸ್​ ಕಾರ್ಯಕ್ರಮದಲ್ಲಿ ಆಸ್ಕರ್​ ಪ್ರಶಸ್ತಿ ಗೆದ್ದವರಿಗೆ ದೀಪಿಕಾ ಪಡುಕೋಣೆ (Deepika Padukone) ಅವರು ಟ್ರೋಫಿ ನೀಡಲಿದ್ದಾರೆ. ಮಾರ್ಚ್​​ 12ರಂದು ಲಾಸ್​ ಏಂಜಲಿಸ್​ನ ಡಾಲ್ಬಿ ಥಿಯೇಟರ್​ನಲ್ಲಿ ಆಸ್ಕರ್​ ಪ್ರಶಸ್ತಿ (Oscar Awards) ಪ್ರದಾನ ಸಮಾರಂಭ ನಡೆಯಲಿದೆ. ಹಲವು ವಿಭಾಗಗಳಲ್ಲಿ ಪ್ರಶಸ್ತಿ ನೀಡಲಾಗುತ್ತಿದೆ. ಆ ಪೈಕಿ ಒಂದು ವಿಭಾಗದಲ್ಲಿ ಪ್ರಶಸ್ತಿ ಗೆದ್ದವರಿಗೆ ದೀಪಿಕಾ ಪಡುಕೋಣೆ ಅವರು ಟ್ರೋಫಿ ಹಸ್ತಾಂತರಿಸಲಿದ್ದಾರೆ. ಹಾಗಾಗಿ ದೀಪಿಕಾ ಅವರನ್ನು ವಿವೇಕ್ ಅಗ್ನಿಹೋತ್ರಿ ಹೊಗಳಿದ್ದಾರೆ. ಆದರೆ ಇದೇ ಅಗ್ನಿಹೋತ್ರಿ ಅವರು ಈ ಹಿಂದೆ ‘ಬೇಷರಂ ರಂಗ್​​..’ ಹಾಡು ರಿಲೀಸ್​ ಆಗಿದ್ದಾಗ ವಿರೋಧ ವ್ಯಕ್ತಪಡಿಸಿದ್ದರು. ದೀಪಿಕಾ ಬಗ್ಗೆ ಈ ರೀತಿ ದ್ವಂದ್ವ ನಿಲುವು ತೋರುತ್ತಿರುವುದಕ್ಕೆ ವಿವೇಕ್​ ಅಗ್ನಿಹೋತ್ರಿ (Vivek Agnihotri) ಅವರನ್ನು ನೆಟ್ಟಿಗರು ಟೀಕೆ ಮಾಡಿದ್ದಾರೆ.

ಬಾಲಿವುಡ್​ನಲ್ಲಿ ಎರಡು ಬಣಗಳಿವೆ. ದೀಪಿಕಾ ಪಡುಕೋಣೆ, ಶಾರುಖ್​ ಖಾನ್​ ಮುಂತಾದವರನ್ನು ವಿವೇಕ್​ ಅಗ್ನಿಹೋತ್ರಿ, ಕಂಗನಾ ರಣಾವತ್​ ಮೊದಲಾದ ಸೆಲೆಬ್ರಿಟಿಗಳು ವಿರೋಧಿಸುತ್ತಲೇ ಬಂದಿದ್ದಾರೆ. ಆದರೆ ಏಕಾಏಕಿ ದೀಪಿಕಾ ಅವರನ್ನು ವಿವೇಕ್​ ಅಗ್ನಿಹೋತ್ರಿ ಹೊಗಳಿರುವುದು ಅನೇಕರಿಗೆ ಅಚ್ಚರಿ ಮೂಡಿಸಿದೆ. ಹಾಗಾಗಿ ಅವರನ್ನು ಟ್ರೋಲ್​ ಮಾಡಲಾಗಿದೆ. ಅದಕ್ಕೆ ವಿವೇಕ್​ ಅಗ್ನಿಹೋತ್ರಿ ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ
Image
Vivek Agnihotri: ವಿವೇಕ್​ ಅಗ್ನಿಹೋತ್ರಿಗೆ ಅಶ್ಲೀಲ ಸಂದೇಶ: ಸ್ಕ್ರೀನ್​ ಶಾಟ್​ ಸಮೇತ ಬಯಲಿಗೆ ಎಳೆದ ನಿರ್ದೇಶಕ
Image
Vivek Agnihotri: ಹೆಡ್​ಲೈನ್​ ಓದಿ ಯಾಮಾರಿದ ವಿವೇಕ್​ ಅಗ್ನಿಹೋತ್ರಿ; ‘ಕಾಂತಾರ’ ಬಗ್ಗೆ ಅನುರಾಗ್​ ಕಶ್ಯಪ್ ಹೇಳಿದ್ದೇ ಬೇರೆ
Image
Vivek Agnihotri: ಶಾರುಖ್​​ ನಟನೆಯ ‘ಬೇಷರಂ ರಂಗ್​’ ಹಾಡು ನೋಡಿ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ ವಿವೇಕ್​ ಅಗ್ನಿಹೋತ್ರಿ
Image
Vivek Agnihotri: ದೆಹಲಿ ಹೈಕೋರ್ಟ್​ನಲ್ಲಿ ಬೇಷರತ್​ ಕ್ಷಮೆ ಯಾಚಿಸಿದ ‘ದಿ ಕಾಶ್ಮೀರ್​ ಫೈಲ್ಸ್​’ ನಿರ್ದೇಶಕ ವಿವೇಕ್​ ಅಗ್ನಿಹೋತ್ರಿ

ಇದನ್ನೂ ಓದಿ: ‘ಅರ್ಬನ್ ನಕ್ಸಲ್ಸ್​ಗೆ ನಿದ್ದೆ ಬರುತ್ತಿಲ್ಲ’; ‘ಬೊಗಳುತ್ತಾರೆ, ಕಚ್ಚಲ್ಲ’ ಎಂಬ ಪ್ರಕಾಶ್​ ರಾಜ್ ಹೇಳಿಕೆಗೆ ತಿರುಗೇಟು ಕೊಟ್ಟ ವಿವೇಕ್ ಅಗ್ನಿಹೋತ್ರಿ

‘ನಿಮ್ಮ ಸಹಮತ ಇಲ್ಲದೇ ಇದ್ದಾಗ ಯಾರನ್ನಾದರೂ ಟೀಕಿಸುವುದು ಮತ್ತು ಅವರ ಕೆಲಸ ಇಷ್ಟ ಆದಾಗ ಮೆಚ್ಚುಗೆ ಸೂಚಿಸುವುದನ್ನು ಈ ಹೊಸ ಯುಗದಲ್ಲಿ ದ್ವಂದ್ವ ನೀತಿ ಎಂದು ಕರೆಯುತ್ತಾರೆ. ನಾನು ಅದನ್ನು ನ್ಯಾಯಸಮ್ಮತವಾದದ್ದು ಎಂದುಕೊಂಡಿದ್ದೇನೆ. ಭಾರತದ ಹೆಸರಿಗೆ ಗೌರವ ತರುವ ಎಲ್ಲರೂ ಮೆಚ್ಚುಗೆಗೆ ಅರ್ಹರು’ ಎಂದು ವಿವೇಕ್​ ಅಗ್ನಿಹೋತ್ರಿ ಟ್ವೀಟ್​ ಮಾಡಿದ್ದಾರೆ.

ಇದನ್ನೂ ಓದಿ: ಪಿಎಂ ಮೋದಿ ಸೂಚನೆಯನ್ನು ಟೀಕಿಸಿದ ಅನುರಾಗ್ ಕಶ್ಯಪ್​ಗೆ ತಿರುಗೇಟು ಕೊಟ್ಟ ವಿವೇಕ್ ಅಗ್ನಿಹೋತ್ರಿ

ಅನುಪಮ್​ ಖೇರ್​ ಕೂಡ ದೀಪಿಕಾ ಪಡುಕೋಣೆಗೆ ಮೆಚ್ಚುಗೆ ಸೂಚಿಸಿದ್ದಾರೆ. ‘ಪ್ರೀತಿಯ ದೀಪಿಕಾ ಪಡುಕೋಣೆ.. ಈ ವರ್ಷ ಆಸ್ಕರ್​ ಪ್ರೆಸೆಂಟರ್​ಗಳಲ್ಲಿ ನೀವೂ ಒಬ್ಬರಾಗಿರುವುದಕ್ಕೆ ಅಭಿನಂದನೆಗಳು. ನೀವು ಸಾಧನೆಯ ಪ್ರತಿ ಮೆಟ್ಟಿಲನ್ನು ಏರಿದಾಗ ನಿಮ್ಮ ಪಯಣದಲ್ಲಿ ನಾವೂ ಭಾಗಿ ಆಗಿದ್ದೇವೆ ಎಂಬ ಹೆಮ್ಮೆ ನಮಗಿದೆ’ ಎಂದು ಅನುಪಮ್​ ಖೇರ್​ ಟ್ವೀಟ್​ ಮಾಡಿದ್ದಾರೆ.

ಈ ಹಿಂದೆ ನಟಿ ಪ್ರಿಯಾಂಕಾ ಚೋಪ್ರಾ ಅವರು ಆಸ್ಕರ್ ಪ್ರಶಸ್ತಿ ಪ್ರದಾನ ಮಾಡಿದ್ದರು. ಈಗ ದೀಪಿಕಾ ಪಡುಕೋಣೆ ಅವರಿಗೆ ಆ ಅವಕಾಶ ಸಿಗುತ್ತಿದೆ. ತಮಗೆ ಈ ಚಾನ್ಸ್​ ಸಿಕ್ಕಿದೆ ಎಂಬುದನ್ನು ದೀಪಿಕಾ ಪಡುಕೋಣೆ ಅವರು ಸೋಶಿಯಲ್​ ಮೀಡಿಯಾ ಮೂಲಕ ತಿಳಿಸಿದ್ದಾರೆ. ಅದಕ್ಕೆ ಸೆಲೆಬ್ರಿಟಿಗಳು ಬಗೆಬಗೆಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ. ದೀಪಿಕಾ ಪತಿ ರಣವೀರ್​ ಸಿಂಗ್ ಅವರು ಸಂತಸ ವ್ಯಕ್ತಪಡಿಸಿದ್ದಾರೆ. ನಟಿ ನೇಹಾ ಧೂಪಿಯಾ ಅವರು, ‘ನಿಮ್ಮನ್ನು ನೋಡಲು ಕಾಯುತ್ತಿದ್ದೇನೆ ದೀಪು’ ಎಂದು ಕಮೆಂಟ್​ ಮಾಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 12:09 pm, Sun, 5 March 23

ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ
Pulse Polio Campaign: ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿದ ಡಿಕೆ ಶಿವಕುಮಾರ್
Pulse Polio Campaign: ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿದ ಡಿಕೆ ಶಿವಕುಮಾರ್
ಡಿಕೆ ಶಿವಕುಮಾರ್​​​ ಭೇಟಿ ಬಗ್ಗೆ ಕೆಎನ್​ ರಾಜಣ್ಣ ಸ್ಫೋಟಕ ಹೇಳಿಕೆ
ಡಿಕೆ ಶಿವಕುಮಾರ್​​​ ಭೇಟಿ ಬಗ್ಗೆ ಕೆಎನ್​ ರಾಜಣ್ಣ ಸ್ಫೋಟಕ ಹೇಳಿಕೆ