Kabzaa Trailer: ಕಬ್ಜ ಟ್ರೈಲರ್ ಬಿಡುಗಡೆ, ಕತ್ತರಿಸುವ ಕೈಗಳು ಬರೆದ ಇತಿಹಾಸವಿದು, ಎರಡು ಶೇಡ್​ನಲ್ಲಿ ಉಪ್ಪಿ

ಉಪೇಂದ್ರ ನಟಿಸಿ, ಆರ್ ಚಂದ್ರು ನಿರ್ದೇಶಿಸಿರುವ ಕಬ್ಜ ಸಿನಿಮಾದ ಹಿಂದಿ ಟ್ರೈಲರ್ ಬಿಡುಗಡೆ ಆಗಿದ್ದು, ಟ್ರೈಲರ್ ಅನ್ನು ಅಮಿತಾಬ್ ಬಚ್ಚನ್ ಬಿಡುಗಡೆ ಮಾಡಿದ್ದಾರೆ.

Kabzaa Trailer: ಕಬ್ಜ ಟ್ರೈಲರ್ ಬಿಡುಗಡೆ, ಕತ್ತರಿಸುವ ಕೈಗಳು ಬರೆದ ಇತಿಹಾಸವಿದು, ಎರಡು ಶೇಡ್​ನಲ್ಲಿ ಉಪ್ಪಿ
ಕಬ್ಜ ಟ್ರೈಲರ್​ನಲ್ಲಿ ಉಪ್ಪಿ
Follow us
ಮಂಜುನಾಥ ಸಿ.
|

Updated on:Mar 04, 2023 | 8:39 PM

ಉಪೇಂದ್ರ ನಟಿಸಿ, ಆರ್ ಚಂದ್ರು ನಿರ್ದೇಶನ ಮಾಡಿರುವ ‘ಕಬ್ಜ‘ (Kabzaa) ಸಿನಿಮಾದ ಹಿಂದಿ ಟ್ರೈಲರ್ (Trailer) ಬಿಡುಗಡೆ ಆಗಿದೆ. ಟ್ರೈಲರ್ ಅನ್ನು ಬಾಲಿವುಡ್ ದಿಗ್ಗಜ ಅಮಿತಾಬ್ ಬಚ್ಚನ್ (Amitabh Bachchan) ಬಿಡುಗಡೆ ಮಾಡಿರುವುದು ವಿಶೇಷ. ಕನ್ನಡ ಸೇರಿದಂತೆ ಇನ್ನಿತರೆ ಭಾಷೆಗಳಲ್ಲಿ ಸಿನಿಮಾದ ಟ್ರೈಲರ್ ಇನ್ನಷ್ಟೆ ಬಿಡುಗಡೆ ಆಗಬೇಕಿದೆ. ಪ್ರಸ್ತುತ ಬಿಡುಗಡೆ ಆಗಿರುವ ಹಿಂದಿ ಟ್ರೈಲರ್ ಆನಂದ್ ಪಂಡಿತ್ ಮೋಷನ್ ಪಿಕ್ಚರ್ಸ್ ಯೂಟ್ಯೂಬ್ ಚಾನೆಲ್​ನಲ್ಲಿ ವೀಕ್ಷಣೆಗೆ ಲಭ್ಯವಿದೆ.

ಮೂರು ನಿಮಿಷಕ್ಕೆ ಆರು ಸೆಕೆಂಡ್ ಕಡಿಮೆ ಇರುವ ಟ್ರೈಲರ್​ನಲ್ಲಿ ನಾಯಕ ನಟ ಉಪೇಂದ್ರ ಜೊತೆಗೆ ಹಲವು ಪಾತ್ರಗಳು ಗಮನ ಸೆಳೆಯುತ್ತವೆ. ಕತೆಯ ಬಗ್ಗೆ ಕುತೂಹಲವನ್ನು ಉಂಟು ಮಾಡುವಂತೆ ಟ್ರೈಲರ್ ಅನ್ನು ಪ್ರೆಸೆಂಟ್ ಮಾಡಿದ್ದಾರೆ ನಿರ್ದೇಶಕ ಆರ್.ಚಂದ್ರು.

ಸಿನಿಮಾದಲ್ಲಿ ಬ್ರಿಟೀಷ್ ಕಾಲದ ಕತೆ, ಸ್ವಾತಂತ್ರ್ಯ ಹೋರಾಟ, ಸ್ವಾತಂತ್ರ್ಯಾ ನಂತರದ ಕತೆ ಇರುವ ಸುಳಿವನ್ನು ಟ್ರೈಲರ್ ನೀಡಿದೆ. ದೇಶ ಪ್ರೇಮ, ವ್ಯವಸ್ಥೆಯ ವಿರುದ್ಧ ಹೋರಾಟ, ಪಾತಕ ಲೋಕ, ತಾಯಿ ಸೆಂಟಿಮೆಂಟ್, ಬ್ರದರ್ ಸೆಂಟಿಮೆಂಟ್ ಎಲ್ಲವನ್ನೂ ‘ಕಬ್ಜ’ನಲ್ಲಿ ಆರ್ ಚಂದ್ರು ಟಚ್ ಮಾಡಿದ್ದಾರೆಂಬುದು ಟ್ರೈಲರ್​ನಿಂದ ತಿಳಿದು ಬರುತ್ತಿದೆ.

ಟ್ರೈಲರ್​ನಲ್ಲಿ ಕುತೂಹಲ ಹುಟ್ಟಿಸಿರುವ ಸಂಗತಿಯೆಂದರೆ ಉಪೇಂದ್ರ ಪೊಲೀಸ್ ಧಿರಿಸಿನಲ್ಲಿ (ಏರ್​ಫೋರ್ಸ್ ಅಧಿಕಾರಿ) ಕಾಣಿಸಿಕೊಂಡಿರುವುದು. ಈ ವರೆಗೆ ಬಿಡುಗಡೆ ಆಗಿರುವ ಕಬ್ಜ ಸಿನಿಮಾದ ಪೋಸ್ಟರ್, ಟೀಸರ್​ಗಳಲ್ಲಿ ಗ್ಯಾಂಗ್​ಸ್ಟರ್ ಅವತಾರದಲ್ಲಿ ಉಪೇಂದ್ರ ಕಾಣಿಸಿಕೊಂಡಿದ್ದರು. ಆದರೆ ಟ್ರೈಲರ್​ನಲ್ಲಿ ಪೊಲೀಸ್ ಸಮವಸ್ತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಮಚ್ಚು ಹಿಡಿದು ವೈರಿಗಳ ರುಂಡವನ್ನೂ ಚೆಂಡಾಡುತ್ತಿದ್ದಾರೆ. ಈ ವೈರುಧ್ಯ ಕತೆಯ ಬಗ್ಗೆ ಕುತೂಹಲ ಹೆಚ್ಚುವಂತೆ ಮಾಡಿದೆ. ಇನ್ನು ನಟ ಸುದೀಪ್ ಸಹ ಪೊಲೀಸ್ ಸಮವಸ್ತ್ರದಲ್ಲಿ ಕಾಣಿಸಿಕೊಂಡು ಕುತೂಹಲ ಮೂಡಿಸಿದ್ದಾರೆ. ಟ್ರೈಲರ್​ನ ಆರಂಭದಲ್ಲಿಯೇ ವ್ಯಕ್ತಿಯೊಬ್ಬ ಗನ್ ಹಿಡಿದು ನಡೆಯುವ ದೃಶ್ಯವಿದೆ. ಆ ನಡಿಗೆಯೆಂದಲೇ ಗೊತ್ತಾಗುತ್ತದೆ ಅದು ಶಿವಣ್ಣನೆಂದು. ಆದರೆ ಟ್ರೈಲರ್​ನಲ್ಲಿ ಅವರ ಮುಖ ತೋರಿಸಿಲ್ಲ.

ಉಪೇಂದ್ರ, ಸುದೀಪ್ ಮಾತ್ರವೇ ಅಲ್ಲದೆ, ಇತರೆ ಪಾತ್ರಗಳಿಗಳಿಗೂ ಟ್ರೈಲರ್​ನಲ್ಲಿ ಸ್ಪೇಸ್ ನೀಡಲಾಗಿದೆ. ಜನಪ್ರಿಯ ನಟ ಮುರಳಿ ಶರ್ಮಾ, ತೆಲುಗಿನ ಹಿರಿಯ ನಟ ಕೋಟ ಶ್ರೀನಿವಾಸ ರಾವ್ ಇನ್ನೂ ಕೆಲವು ವಿಲನ್​ಗಳನ್ನು ಭಯಾನಕವಾಗಿ ತೋರಿಸಿದ್ದಾರೆ.  ರಕ್ತ ಹರಿಯುತ್ತಿರುವ, ಬಂದೂಕುಗಳು ಅಬ್ಬರಿಸುವ, ಬಾಂಬ್​ಗಳು ಸಿಡಿಯುವ ದೃಶ್ಯಗಳು ಸಾಕಷ್ಟಿವೆ. ನಾಯಕಿ ಶ್ರಿಯಾ ಶ್ರೀನಿವಾಸ್ ಮುದ್ದಾಗಿ ಕಾಣಿಸಿಕೊಂಡಿದ್ದಾರೆ.

ಹಿಂದಿ ಟ್ರೈಲರ್ ಅನ್ನು ಟ್ವಿಟ್ಟರ್ ಮೂಲಕ ಬಿಡುಗಡೆ ಮಾಡಿರುವ ನಟ ಅಮಿತಾಬ್ ಬಚ್ಚನ್, ‘ಕಬ್ಜ’ ಸಿನಿಮಾದ ಟ್ರೈಲರ್ ಬಿಡುಗಡೆ ಮಾಡುತ್ತಿರುವುದಕ್ಕೆ ಸಂತೋಶವಾಗಿದೆ. ಸಿನಿಮಾವನ್ನು ನನ್ನ ಮಿತ್ರ ಆನಂದ್ ಪಂಡಿತ್ ನಿರ್ಮಾಣ ಮಾಡಿದ್ದು, ಆರ್ ಚಂದ್ರು ನಿರ್ದೇಶಿಸಿದ್ದಾರೆ. ಉಪೇಂದ್ರ, ಶೀವರಾಜ್ ಕುಮಾರ್, ಸುದೀಪ್ ಅವರಿಗೆ ಶುಭ ಹಾರೈಕೆಗಳು ಎಂದಿದ್ದಾರೆ. ಸಿನಿಮಾವು ಮಾರ್ಚ್ 13 ರಂದು ಬಿಡುಗಡೆ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 8:19 pm, Sat, 4 March 23

ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್