AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Rashmika Mandanna: ರಶ್ಮಿಕಾ ಮಂದಣ್ಣ ಮೇಲಿನ ಪ್ರೀತಿ ಬಹಿರಂಗಪಡಿಸಿದ ಸ್ಟಾರ್ ಕ್ರಿಕೆಟಿಗ

ರಶ್ಮಿಕಾ ಮಂದಣ್ಣ ಮೇಲಿನ ಪ್ರೀತಿ ಬಹಿರಂಗಪಡಿಸಿದ ಸ್ಟಾರ್ ಕ್ರಿಕೆಟಿಗ. ಈ ಯುವ ಕ್ರಿಕೆಟಿಗನಿಗೆ ರಶ್ಮಿಕಾ ಮಂದಣ್ಣ ಮೇಲೆ ಕ್ರಶ್ ಅಂತೆ!

Rashmika Mandanna: ರಶ್ಮಿಕಾ ಮಂದಣ್ಣ ಮೇಲಿನ ಪ್ರೀತಿ ಬಹಿರಂಗಪಡಿಸಿದ ಸ್ಟಾರ್ ಕ್ರಿಕೆಟಿಗ
ರಶ್ಮಿಕಾ ಮಂದಣ್ಣ
ಮಂಜುನಾಥ ಸಿ.
|

Updated on: Mar 05, 2023 | 10:07 PM

Share

ಕ್ರಿಕೆಟ್ ಹಾಗೂ ಬಾಲಿವುಡ್​ಗೆ ತೀರದ ನಂಟು. ಕ್ರಿಕೆಟಗರು ಸಿನಿಮಾ ಮಾಡುವುದು, ಸಿನಿಮಾ ನಟಿಯರೊಟ್ಟಿಗೆ ಸುತ್ತಾಡುವುದು, ವಿವಾಹವಾಗುವುದು ದಶಕಗಳಿಂದಲೂ ನಡೆಯುತ್ತಲೇ ಬಂದಿದೆ. ಈಗಿನ ಯುವ ಕ್ರಿಕೆಟ್ ಪೀಳಿಗೆಯೂ ಇದಕ್ಕೆ ಹೊರತಲ್ಲ. ಇತ್ತೀಚೆಗೆ ಸ್ಟಾರ್ ಕ್ರಿಕೆಟಿಗನೊಬ್ಬ ತಮಗೆ ನಟಿ ರಶ್ಮಿಕಾ ಕಂಡರೆ ಇಷ್ಟ ಎಂದು ಹೇಳಿಕೊಂಡಿದ್ದಾರೆ.

ಬಾಲಿವುಡ್ ನಟಿ ಸಾರಾ ಅಲಿ ಖಾನ್ (Sara Ali Khan) ಜೊತೆಗೆ ಹೆಚ್ಚಾಗಿ ಹೆಸರು ಕೇಳಿ ಬರುತ್ತಿರುವ ಭಾರತದ ಭರವಸೆಯ ಯುವ ಕ್ರಿಕೆಟರ್ ಶುಭ್ಮನ್ ಗಿಲ್ (Shubman Gill), ಇತ್ತೀಚೆಗೆ ಮಾಧ್ಯಮದವರ ಮುಂದೆ ತಮಗೆ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಎಂದರೆ ಬಹಳ ಇಷ್ಟವೆಂದು ಹೇಳಿಕೊಂಡಿದ್ದಾರೆ.

ಶುಭ್​ಮನ್ ಗಿಲ್​ ಇತ್ತೀಚಿನ ನೀಡಿದ ಮಾಧ್ಯಮ ಸಂವಾದದಲ್ಲಿ ಅವರಿಗೆ ನಿಮಗೆ ಯಾವ ನಟಿಯೆಂದರೆ ಇಷ್ಟ? ಯಾರ ಮೇಲೆ ಕ್ರಶ್ ಇದೆ ಎಂಬ ಪ್ರಶ್ನೆ ಎದುರಾಗಿದೆ. ಪ್ರಶ್ನೆಗೆ ಮೊದಲು ನಕ್ಕು ಸುಮ್ಮನಾಗಿದ್ದಾರೆ ಗಿಲ್. ಆ ನಂತರ ಮಾಧ್ಯಮದವರು ಉತ್ತರ ಹೇಳುವಂತೆ ಒತ್ತಾಯಿಸಿದಾಗ, ನನಗೆ ನಟಿ ರಶ್ಮಿಕಾ ಮಂದಣ್ಣ ಎಂದರೆ ಬಹಳ ಇಷ್ಟ ಎಂದಿದ್ದಾರೆ.

ಅಸಲಿಗೆ ಶುಭ್​ಮನ್ ಗಿಲ್ ಹೆಸರು ಬಾಲಿವುಡ್ ನಟಿ ಸಾರಾ ಅಲಿ ಖಾನ್ ಜೊತೆಗೆ ಹೆಚ್ಚು ಕೇಳಿ ಬರುತ್ತಿದೆ. ಇವರಿಬ್ಬರೂ ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ಗಾಸಿಪ್ ಸಹ ಹರಿದಾಡುತ್ತಿದೆ. ಅದಕ್ಕೆ ತಕ್ಕಂತೆ ಇಬ್ಬರೂ ಒಟ್ಟಿಗೆ ಹೋಟೆಲ್​ನಲ್ಲಿ ಊಟ ಮಾಡುತ್ತಿರುವ ಚಿತ್ರಗಳು ಹರಿದಾಡಿದ್ದವು. ಆದರೆ ಈ ಬಗ್ಗೆ ಇಬ್ಬರೂ ಬಹಿರಂಗವಾಗಿ ಮಾತನಾಡಿಲ್ಲ. ಆದರೆ ಈ ನಡುವೆ ಶುಭ್​ಮನ್ ಗಿಲ್ ತಮಗೆ ರಶ್ಮಿಕಾ ಮೇಲೆ ಕ್ರಶ್ ಇದೆ ಎಂದಿರುವುದು ಗೊಂದಲಕ್ಕೆ ಕಾರಣವಾಗಿದೆ.

ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಟಿ ರಶ್ಮಿಕಾ ಮಂದಣ್ಣ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಹ್ಯಾಂಡ್​ಸಮ್ ಯುವ ಕ್ರಿಕೆಟಿಗ ಶುಭ್​ಮನ್ ಗಿಲ್ ಜೊತೆ ರಶ್ಮಿಕಾ ಡೇಟ್​ಗೆ ಹೋಗುತ್ತಾರಾ? ಕಾದು ನೋಡಬೇಕಿದೆ.

ಕನ್ನಡದ ಕಿರಿಕ್ ಪಾರ್ಟಿ ಸಿನಿಮಾದಿಂದ ಕರಿಯರ್ ಆರಂಭಿಸಿದ ನಟಿ ರಶ್ಮಿಕಾ ಮಂದಣ್ಣ ಪ್ರಸ್ತುತ ಬಾಲಿವುಡ್​ನಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ ಎರಡು ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದು ಇನ್ನೂ ಕೆಲವು ಹಿಂದಿ ಸಿನಿಮಾಗಳಲ್ಲಿ ನಟಿಸಲಿದ್ದಾರೆ. ರಶ್ಮಿಕಾ ಪ್ರಸ್ತುತ ರಣ್ಬೀರ್ ಕಪೂರ್ ಜೊತೆಗೆ ಅನಿಮಲ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ಟೈಗರ್ ಶ್ರಾಫ್​ ಜೊತೆ ಹೊಸದೊಂದು ಸಿನಿಮಾಕ್ಕೂ ಒಪ್ಪಿಗೆ ಸೂಚಿಸಿದ್ದಾರೆ. ತೆಲುಗಿನಲ್ಲಿ ಪುಷ್ಪ 2 ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ತಮಿಳಿನ ಒಂದು ಸಿನಿಮಾಕ್ಕೂ ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ