AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Sushmita Sen: ಜಿಮ್​ಗೆ ಹೋದ್ರೂ ಹೃದಯಾಘಾತ ತಪ್ಪಲಿಲ್ಲ; ಜನರಿಗೆ ಸುಶ್ಮಿತಾ ಸೇನ್​ ಹೇಳಿದ ಎಚ್ಚರಿಕೆ ಮಾತು ಏನು?

Sushmita Sen | Heart Attack: ಹೃದಯಾಘಾತ ಆದ ಬಳಿಕ ಮೊದಲ ಬಾರಿ ಇನ್​ಸ್ಟಾಗ್ರಾಮ್​ನಲ್ಲಿ ಲೈವ್​ ಬಂದಿದ್ದ ಸುಶ್ಮಿತಾ ಸೇನ್​ ಅವರು ಒಂದಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಸರ್ಜರಿ ನಂತರ ಅವರು ಚೇತರಿಸಿಕೊಂಡಿದ್ದಾರೆ.

Sushmita Sen: ಜಿಮ್​ಗೆ ಹೋದ್ರೂ ಹೃದಯಾಘಾತ ತಪ್ಪಲಿಲ್ಲ; ಜನರಿಗೆ ಸುಶ್ಮಿತಾ ಸೇನ್​ ಹೇಳಿದ ಎಚ್ಚರಿಕೆ ಮಾತು ಏನು?
ಸುಶ್ಮಿತಾ ಸೇನ್
ಮದನ್​ ಕುಮಾರ್​
|

Updated on: Mar 05, 2023 | 10:24 AM

Share

ಕೆಲವೇ ದಿನಗಳ ಹಿಂದೆ ನಟಿ ಸುಶ್ಮಿತಾ ಸೇನ್ (Sushmita Sen)​ ಅವರಿಗೆ ಹೃದಯಾಘಾತ ಆಗಿತ್ತು. ಆ ವಿಚಾರವನ್ನು ಅವರು ಕೊಂಚ ತಡವಾಗಿ ಬಹಿರಂಗಪಡಿಸಿದರು. ಅಚ್ಚರಿ ಏನೆಂದರೆ ಅವರ ಹೃದಯದಲ್ಲಿ ಶೇಕಡ 90ರಷ್ಟು ಬ್ಲಾಕೇಜ್​ ಇತ್ತು. ಹಾಗಿದ್ದರೂ ಅವರು ಅಚ್ಚರಿಯ ರೀತಿಯಲ್ಲಿ ಬದುಕುಳಿದರು. ಸುಶ್ಮಿತಾ ಸೇನ್​ ಅವರದ್ದು ಶಿಸ್ತಿನ ಜೀವನ ಶೈಲಿ. ಎಂದಿಗೂ ಅವರು ವರ್ಕೌಟ್​ ಮಾಡೋದು ತಪ್ಪಿಸೋದಿಲ್ಲ. ಹಾಗಿದ್ದರೂ ಕೂಡ ಅವರಿಗೆ ಹಾರ್ಟ್​ ಅಟ್ಯಾಕ್​ (Heart Attack) ಆಯಿತು. ಪುನೀತ್ ರಾಜ್​ಕುಮಾರ್​, ಸಿದ್ದಾರ್ಥ್​ ಶುಕ್ತಾ ಸೇರಿದಂತೆ ಅನೇಕರು ಫಿಟ್​ ಆಗಿದ್ದರೂ ಕೂಡ ಹೃದಯಾಘಾತದಿಂದ ನಿಧನರಾದರು. ‘ಜಿಮ್​ಗೆ (Gym) ಹೋದರೂ ಹಾರ್ಟ್​ ಅಟ್ಯಾಕ್​ ತಪ್ಪಿದ್ದಲ್ಲ’ ಎಂದು ಗೊಣಗುವವರಿಗೆ ಸುಶ್ಮಿತಾ ಸೇನ್​ ಕೆಲವು ಕಿವಿಮಾತು ಹೇಳಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ..

ಫಿಟ್​ ಆಗಿರುವ ಸೆಲೆಬ್ರಿಟಿಗಳು ಹೃದಯಾಘಾತಕ್ಕೆ ಒಳಗಾದಾಗ ಇಂತಹ ಮಾತುಗಳು ಕೇಳಿಬರುತ್ತವೆ. ‘ಎಷ್ಟೇ ಫಿಟ್ನೆಸ್​ ಕಾಪಾಡಿಕೊಂಡರೂ ಹೃದಯಾಘಾತ ತಪ್ಪಿಸೋಕೆ ಆಗಲ್ಲ. ಹಾಗಿದ್ದ ಮೇಲೆ ಯಾಕೆ ವರ್ಕೌಟ್​ ಮಾಡಬೇಕು? ಸುಮ್ಮನೇ ಇರೋದೇ ಒಳ್ಳೆಯದು’ ಅಂತ ಕೆಲವರು ಮಾತನಾಡಿಕೊಳ್ಳುತ್ತಾರೆ. ಆದರೆ ಅದು ಸರಿಯಲ್ಲ ಎಂದು ಸುಶ್ಮಿಕಾ ಸೇನ್​ ಹೇಳಿದ್ದಾರೆ.

ಇದನ್ನೂ ಓದಿ
Image
ಜಿಮ್ ಮಾಡುತ್ತಿದ್ದ ವೇಳೆ ಹಾಸ್ಯ ನಟ ರಾಜು ಶ್ರೀವಾತ್ಸವಗೆ ಹೃದಯಾಘಾತ; ಆಸ್ಪತ್ರೆಗೆ ದಾಖಲು
Image
Pradeep Patwardhan: ಹೃದಯಾಘಾತದಿಂದ ನಟ ಪ್ರದೀಪ್​ ಪಟವರ್ಧನ್​ ನಿಧನ; ಸಂತಾಪ ಸೂಚಿಸಿದ ಮಹಾರಾಷ್ಟ್ರ ಸಿಎಂ
Image
Hemalatha Death: ಗುಬ್ಬಿ ವೀರಣ್ಣ ಪುತ್ರಿ, ಕನ್ನಡ ಚಿತ್ರರಂಗದ ಹಿರಿಯ ನಟಿ ಹೇಮಲತಾ ಹೃದಯಾಘಾತದಿಂದ ನಿಧನ
Image
Surekha Death: ಕನ್ನಡ ಚಿತ್ರರಂಗದ ಹಿರಿಯ ನಟಿ ಸುರೇಖಾ ಹೃದಯಾಘಾತದಿಂದ ನಿಧನ

ಇದನ್ನೂ ಓದಿ: ವಿಮಾನ ನಿಲ್ದಾಣದಲ್ಲಿ ಹೃದಯಾಘಾತಕ್ಕೆ ಒಳಗಾದ ವ್ಯಕ್ತಿ; ಅಲ್ಲೇ ಇದ್ದ ಸೋನು ಸೂದ್ ಮಾಡಿದ್ದೇನು?

‘ನಿಮ್ಮಲ್ಲಿ ಬಹುತೇಕ ಜನರು ಜಿಮ್​​ಗೆ ಹೋಗೋದನ್ನು ನಿಲ್ಲಿಸುತ್ತೀರಿ ಅಂತ ನನಗೆ ಗೊತ್ತು. ಜಿಮ್​ಗೆ ಹೋದರೂ ಆಕೆಗೆ ಏನೂ ಉಪಯೋಗ ಆಗಲಿಲ್ಲ ನೋಡು ಅಂತ ಮಾತಾಡಿಕೊಳ್ತೀರಿ. ಆದರೆ ಅದು ಸರಿಯಲ್ಲ. ವರ್ಕೌಟ್ ಮಾಡುವುದು ನನಗೆ ಉಪಯೋಗಕ್ಕೆ ಬಂದಿದೆ. ನಾನು ಬದುಕುಳಿದಿದ್ದು ಭೀಕರ ಹೃದಯಾಘಾತದಿಂದ. ನನ್ನ ಹೃದಯದಲ್ಲಿ ಶೇಕಡ 95ರಷ್ಟು ಬ್ಲಾಕೇಜ್​ ಇತ್ತು. ನನ್ನ ಜೀವನದಲ್ಲಿ ಕ್ರಿಯಾಶೀಲತೆ ಇದ್ದಿದ್ದರಿಂದಲೇ ನಾನು ಬದುಕಿದೆ’ ಎಂದಿದ್ದಾರೆ ಸುಶ್ಮಿತಾ ಸೇನ್​.

ಇನ್​ಸ್ಟಾಗ್ರಾಮ್​ನಲ್ಲಿ ಲೈವ್​ ಬಂದಿದ್ದ ಸುಶ್ಮಿತಾ ಸೇನ್​ ಅವರು ಈ ಎಲ್ಲ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಸರ್ಜರಿ ಬಳಿಕ ಅವರು ಸಾಕಷ್ಟು ಚೇತರಿಸಿಕೊಂಡಿದ್ದಾರೆ. ಸದ್ಯ ಅವರು ವಿಶ್ರಾಂತಿ ಪಡೆಯುತ್ತಿದ್ದಾರೆ. ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಎಂದು ಅಭಿಮಾನಿಗಳು ಕಮೆಂಟ್​ ಮಾಡಿದ್ದಾರೆ. ತಮಗೆ ಸಹಾಯ ಮಾಡಿದ ಎಲ್ಲರಿಗೂ ಸುಶ್ಮಿತಾ ಸೇನ್​ ಧನ್ಯವಾದ ಅರ್ಪಿಸಿದ್ದಾರೆ. ​

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಬಾರ್​​​ನಲ್ಲಿ ಸಿಗರೇಟ್ ವಿಚಾರಕ್ಕೆ ಜಗಳ:ಚಾಕು ಇರಿದು ಯುವಕನಿಗೆ ಹಲ್ಲೆ
ಬಾರ್​​​ನಲ್ಲಿ ಸಿಗರೇಟ್ ವಿಚಾರಕ್ಕೆ ಜಗಳ:ಚಾಕು ಇರಿದು ಯುವಕನಿಗೆ ಹಲ್ಲೆ
ಐದೇ ನಿಮಿಷ, ಪಕ್ಕಾ ಪ್ಲ್ಯಾನ್​​: ಕೆಜಿಗಟ್ಟಲೆ ಚಿನ್ನ ಕದ್ದು ಎಸ್ಕೇಪ್​
ಐದೇ ನಿಮಿಷ, ಪಕ್ಕಾ ಪ್ಲ್ಯಾನ್​​: ಕೆಜಿಗಟ್ಟಲೆ ಚಿನ್ನ ಕದ್ದು ಎಸ್ಕೇಪ್​
‘ಉತ್ತರ ಕರ್ನಾಟಕ ಅಳ್ತಿದೆ, ಯಾರನ್ನೂ ವಿನ್ನರ್ ಅಂತ ಒಪ್ಪಿಕೊಳ್ಳಲ್ಲ’; ಮಾಳು
‘ಉತ್ತರ ಕರ್ನಾಟಕ ಅಳ್ತಿದೆ, ಯಾರನ್ನೂ ವಿನ್ನರ್ ಅಂತ ಒಪ್ಪಿಕೊಳ್ಳಲ್ಲ’; ಮಾಳು
ಮೆಕ್ಸಿಕೋದಲ್ಲಿ ಹಳಿ ತಪ್ಪಿದ ರೈಲು, 13 ಮಂದಿ ಸಾವು, ಹಲವರಿಗೆ ಗಾಯ
ಮೆಕ್ಸಿಕೋದಲ್ಲಿ ಹಳಿ ತಪ್ಪಿದ ರೈಲು, 13 ಮಂದಿ ಸಾವು, ಹಲವರಿಗೆ ಗಾಯ
ಭೀಕರ ಅವಘಡದಿಂದ ಆಟಗಾರರು ಕೂದಲೆಳೆಯ ಅಂತರದಲ್ಲಿ ಪಾರು..!
ಭೀಕರ ಅವಘಡದಿಂದ ಆಟಗಾರರು ಕೂದಲೆಳೆಯ ಅಂತರದಲ್ಲಿ ಪಾರು..!
ವಿಭಜಕಕ್ಕೆ ಡಿಕ್ಕಿ ಹೊಡೆದು ಕಾರಿನ ಮೇಲೆ ಉರುಳಿದ ಲಾರಿ
ವಿಭಜಕಕ್ಕೆ ಡಿಕ್ಕಿ ಹೊಡೆದು ಕಾರಿನ ಮೇಲೆ ಉರುಳಿದ ಲಾರಿ
ಕತ್ರಿಗುಪ್ಪೆಯಲ್ಲಿ ಗ್ಯಾಂಗ್​ ವಾರ್, ಲಾಂಗು ಮಚ್ಚಿನ ಹೊಡೆತಕ್ಕೆ ಕಾರು ಪೀಸ್!
ಕತ್ರಿಗುಪ್ಪೆಯಲ್ಲಿ ಗ್ಯಾಂಗ್​ ವಾರ್, ಲಾಂಗು ಮಚ್ಚಿನ ಹೊಡೆತಕ್ಕೆ ಕಾರು ಪೀಸ್!
ಬಿಜೆಪಿ ಶಾಸಕ ಶರಣು ಸಲಗರ ವಿರುದ್ಧ ಎಫ್ಐಆರ್ ದಾಖಲು
ಬಿಜೆಪಿ ಶಾಸಕ ಶರಣು ಸಲಗರ ವಿರುದ್ಧ ಎಫ್ಐಆರ್ ದಾಖಲು
ಪೊಲೀಸರ ಕಣ್ಣಿಗೆ ಬಿದ್ದ ಚಿರತೆ, ಗ್ರಾಮಸ್ಥರಲ್ಲಿ ಆತಂಕ
ಪೊಲೀಸರ ಕಣ್ಣಿಗೆ ಬಿದ್ದ ಚಿರತೆ, ಗ್ರಾಮಸ್ಥರಲ್ಲಿ ಆತಂಕ
ಕರ್ನಾಟಕವನ್ನೇ ಬೆಚ್ಚಿ ಬೀಳಿಸಿದ ದರೋಡೆ ಪ್ರಕರಣಗಳ ಲಿಸ್ಟ್ ಇಲ್ಲಿದೆ ನೋಡಿ!
ಕರ್ನಾಟಕವನ್ನೇ ಬೆಚ್ಚಿ ಬೀಳಿಸಿದ ದರೋಡೆ ಪ್ರಕರಣಗಳ ಲಿಸ್ಟ್ ಇಲ್ಲಿದೆ ನೋಡಿ!