Hemalatha Death: ಗುಬ್ಬಿ ವೀರಣ್ಣ ಪುತ್ರಿ, ಕನ್ನಡ ಚಿತ್ರರಂಗದ ಹಿರಿಯ ನಟಿ ಹೇಮಲತಾ ಹೃದಯಾಘಾತದಿಂದ ನಿಧನ

Gubbi Veeranna daughter Hemalatha: ಗುಬ್ಬಿ ವೀರಣ್ಣ ಅವರ ಮಗಳಾದ ಹಿರಿಯ ನಟಿ ಹೇಮಲತಾ ನಿಧನರಾಗಿದ್ದಾರೆ. ಕನ್ನಡ ಚಿತ್ರರಂಗದ ಅನೇಕರು ಅವರ ಆತ್ಮಕ್ಕೆ ಶಾಂತಿ ಕೋರಿದ್ದಾರೆ.

Hemalatha Death: ಗುಬ್ಬಿ ವೀರಣ್ಣ ಪುತ್ರಿ, ಕನ್ನಡ ಚಿತ್ರರಂಗದ ಹಿರಿಯ ನಟಿ ಹೇಮಲತಾ ಹೃದಯಾಘಾತದಿಂದ ನಿಧನ
ಹೇಮಲತಾ
TV9kannada Web Team

| Edited By: Madan Kumar

Jul 03, 2022 | 4:57 PM

ಡಾ. ರಾಜ್​ಕುಮಾರ್​, ಕಲ್ಯಾಣ್​ ಕುಮಾರ್​, ಉದಯ್​ ಕುಮಾರ್​ ಜೊತೆ ನಟಿಸಿದ್ದ ಹಿರಿಯ ಕಲಾವಿದೆ ಹೇಮಲತಾ (Actress Hemalatha) ಅವರು ಕೊನೆಯುಸಿರು ಎಳೆದಿದ್ದಾರೆ. ಅವರ ನಿಧನಕ್ಕೆ ಆಪ್ತರು ಮತ್ತು ಕನ್ನಡ ಚಿತ್ರರಂಗದ ಹಲವರು ಕಂಬನಿ ಮಿಡಿದಿದ್ದಾರೆ. ಗುಬ್ಬಿ ವೀರಣ್ಣ (Gubbi Veeranna) ಅವರ ಮಗಳಾದ ಹೇಮಲತಾ ಅವರು ಅನೇಕ ಸಿನಿಮಾಗಳಲ್ಲಿ ನಟಿಸಿ ಆ ಕಾಲದಲ್ಲಿ ಫೇಮಸ್​ ಆಗಿದ್ದರು. ದೊಡ್ಡಬಳ್ಳಾಪುರ ಸೋಮೇಶ್ವರ ಬಡಾವಣೆಯಲ್ಲಿ ಅವರು ವಾಸವಾಗಿದ್ದರು. ನಿಧನರಾಗುವುದಕ್ಕೂ ಮುನ್ನ ಹೇಮಲತಾ ಅವರಿಗೆ ಲಘು ಹೃದಯಾಘಾತ (Heart Attack) ಆಗಿತ್ತು. ಕೂಡಲೇ ಅವರನ್ನು ಬಾಶೆಟ್ಟಿಹಳ್ಳಿ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೂ ಕೂಡ ಚಿಕಿತ್ಸೆ ಫಲಕಾರಿ ಆಗದೇ ಶನಿವಾರ (ಜುಲೈ 2) ಮುಂಜಾನೆ ಹೇಮಲತಾ ಮೃತರಾದರು ಎಂದು ವರದಿ ಆಗಿದೆ. ಶಾಮ, ಜಯೇಶ್​ ಎಂಬ ಇಬ್ಬರು ಗಂಡುಮಕ್ಕಳು ಹಾಗೂ ಶಿಲ್ಪಾ ಎಂಬ ಓರ್ವ ಪುತ್ರಿಯನ್ನು ಅವರು ಅಗಲಿದ್ದಾರೆ.

ಹೇಮಲತಾ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಅನೇಕರು ಪ್ರಾರ್ಥಿಸಿದ್ದಾರೆ. ‘ಎಮ್ಮೆ ತಮ್ಮಣ್ಣ’, ‘ಕಲಾವತಿ’ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಅವರು ನಟಿಸಿದ್ದರು. ದೇಹದಾನ ಮಾಡಬೇಕು ಎಂಬುದು ಅವರ ಹಂಬಲ ಆಗಿತ್ತು. ಅದರ ಪ್ರಕಾರವಾಗಿಯೇ ಬೆಂಗಳೂರಿನ ಹೆಸರಘಟ್ಟ ರಸ್ತೆಯಲ್ಲಿನ ಸಪ್ತಗಿರಿ ಆಸ್ಪತ್ರೆಗೆ ದೇಹದಾನ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಹೇಮಲತಾ ಅವರ ನಿಧನದ ಕುರಿತು ಅವರ ಸಂಬಂಧಿ, ನಟಿ ಸುಷ್ಮಾ ವೀರ್​ ಅವರು ಸೋಶಿಯಲ್​ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಹೇಮಲತಾ ಅವರ ಜೊತೆ ತಮಗೆ ಎಂಥ ಬಾಂಧವ್ಯ ಇತ್ತು ಎಂಬುದನ್ನು ಅವರು ಸ್ಮರಿಸಿದ್ದಾರೆ. ‘ನಮ್ಮ ಕುಟುಂಬದಲ್ಲಿ ಅವರು ತುಂಬ ಪ್ರೀತಿಪಾತ್ರರಾಗಿದ್ದರು. ಹೃದಯವಂತಿಕೆಯ ವ್ಯಕ್ತಿ ಅವರಾಗಿದ್ದರು. ಆ ಕಾಲದ ಅತ್ಯುತ್ತಮ ನಟಿ ಮತ್ತು ಡ್ಯಾನ್ಸರ್​ ಕೂಡ ಆಗಿದ್ದರು’ ಎಂದು ಸುಷ್ಮಾ ವೀರ್​ ಬರೆದುಕೊಂಡಿದ್ದಾರೆ.

‘ಅವರನ್ನು ಆಪ್ತರೆಲ್ಲರೂ ಲತಾ ಅಕ್ಕ ಅಂತ ಕರೆಯುತ್ತಿದ್ದರು. ನನ್ನ ಕಷ್ಟದ ದಿನಗಳಲ್ಲಿ ಅವರು ತನ್ನ ಪರವಾಗಿ ಇದ್ದರು. ನಾನು ಮತ್ತೆ ನನ್ನ ಕಾಲ ಮೇಲೆ ನಿಂತುಕೊಳ್ಳಲು ಅವರು ನೆರವಾದರು. ಅವರು ಇಲ್ಲ ಎಂದಿದ್ದರೆ ನಾನು ಈಗಿರುವಂತೆ ಇರಲು ಸಾಧ್ಯವಾಗುತ್ತಿರಲಿಲ್ಲ. ಅವರನ್ನು ನಾನು ಸದಾ ನೆನಪಿನಲ್ಲಿ ಇಟ್ಟುಕೊಳ್ಳುತ್ತೇನೆ’ ಎಂದು ಬರೆದುಕೊಂಡಿರುವ ಸುಷ್ಮಾ ವೀರ್​ ಅವರು ಹೇಮಲತಾ ಆತ್ಮಕ್ಕೆ ಶಾಂತಿ ಕೋರಿದ್ದಾರೆ.

ಇದನ್ನೂ ಓದಿ: Meena: ಬಹುಭಾಷಾ ನಟಿ ಮೀನಾ ಪತಿ ವಿದ್ಯಾಸಾಗರ್​​ ಇನ್ನಿಲ್ಲ; ಶ್ವಾಸಕೋಶದ ಸೋಂಕಿನಿಂದ ನಿಧನ

ಇದನ್ನೂ ಓದಿ

ಖ್ಯಾತ ಹಾಸ್ಯ ನಟ ನರಸಿಂಹ ರಾಜು ಹಿರಿಯ ಪುತ್ರಿ ಧರ್ಮವತಿ ಇನ್ನಿಲ್ಲ; ಹೃದಯಾಘಾತದಿಂದ ನಿಧನ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada