Prajwal Devaraj: ಮಾಸ್​ ಪೋಸ್ಟರ್​ ಮೂಲಕ ಪ್ರಜ್ವಲ್​ ದೇವರಾಜ್​ ಜನ್ಮದಿನಕ್ಕೆ ‘ವೀರಂ’, ‘ಮಾಫಿಯಾ’ ತಂಡದ ವಿಶ್​

ಪ್ರಜ್ವಲ್​ ದೇವರಾಜ್​ ಅವರು ಈಗ ಪಕ್ಕಾ ಮಾಸ್​ ಅವತಾರದಲ್ಲಿ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ‘ವೀರಂ’ ಮತ್ತು ‘ಮಾಫಿಯಾ’ ಸಿನಿಮಾಗಳಲ್ಲಿ ಅವರಿಗೆ ಖಡಕ್​ ಪಾತ್ರ ಇದೆ.

Prajwal Devaraj: ಮಾಸ್​ ಪೋಸ್ಟರ್​ ಮೂಲಕ ಪ್ರಜ್ವಲ್​ ದೇವರಾಜ್​ ಜನ್ಮದಿನಕ್ಕೆ ‘ವೀರಂ’, ‘ಮಾಫಿಯಾ’ ತಂಡದ ವಿಶ್​
ಪ್ರಜ್ವಲ್ ದೇವರಾಜ್
Follow us
TV9 Web
| Updated By: ಮದನ್​ ಕುಮಾರ್​

Updated on:Jul 03, 2022 | 12:51 PM

ನಟ ಪ್ರಜ್ವಲ್​ ದೇವರಾಜ್​ (Prajwal Devaraj) ಅವರು ಹಲವು ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಆ ಪೈಕಿ ‘ವೀರಂ’ (Veeram) ಮತ್ತು ‘ಮಾಫಿಯಾ’ ಸಿನಿಮಾಗಳ ಮೇಲೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಖದರ್​ ಕುಮಾರ್​ ನಿರ್ದೇಶನ, ಶಶಿಧರ್​ ಕೆ.ಎಂ. ಅವರ ನಿರ್ಮಾಣದಲ್ಲಿ ‘ವೀರಂ’ ಸಿನಿಮಾ ಮೂಡಿಬರುತ್ತಿದೆ. ಇನ್ನು, ‘ಮಾಫಿಯಾ’ (Mafia Movie) ಚಿತ್ರಕ್ಕೆ ಕುಮಾರ್​ ಬಿ. ಬಂಡವಾಳ ಹೂಡಿದ್ದು, ಲೋಹಿತ್​ ಎಚ್. ಅವರು ನಿರ್ದೇಶನ ಮಾಡುತ್ತಿದ್ದಾರೆ. ಜೂನ್​ 4ರಂದು ಪ್ರಜ್ವಲ್​ ದೇವರಾಜ್​ ಹುಟ್ಟುಹಬ್ಬ. ಆ ಪ್ರಯುಕ್ತ ಈ ಎರಡೂ ಸಿನಿಮಾ ತಂಡಗಳಿಂದ ಒಂದು ದಿನ ಮೊದಲೇ ಮಾಸ್​ ಆದಂತಹ ಪೋಸ್ಟರ್​ಗಳನ್ನು ಬಿಡುಗಡೆ ಮಾಡಲಾಗಿದೆ. ಆ ಮೂಲಕ ‘ಡೈನಾಮಿಕ್​ ಪ್ರಿನ್ಸ್​’ ಹುಟ್ಟುಹಬ್ಬಕ್ಕೆ ಶುಭ ಕೋರಲಾಗಿದೆ. ಅಭಿಮಾನಿಗಳ ವಲಯದಲ್ಲಿ ಈ ಪೋಸ್ಟರ್​ಗಳು ವೈರಲ್​ ಆಗಿವೆ.

ಕನ್ನಡ ಚಿತ್ರರಂಗದಲ್ಲಿ ಪ್ರಜ್ವಲ್​ ದೇವರಾಜ್​ ಅವರು ಹಲವು ವರ್ಷಗಳಿಂದ ಸಕ್ರಿಯರಾಗಿದ್ದಾರೆ. ಅನೇಕ ಬಗೆಯ ಪಾತ್ರಗಳ ಮೂಲಕ ಅವರ ಜನರನ್ನು ರಂಜಿಸಿದ್ದಾರೆ. ಮೊದಲೆಲ್ಲ ಲವರ್​ ಬಾಯ್​ ಆಗಿ ಮಿಂಚಿದ ಪ್ರಜ್ವಲ್​ ದೇವರಾಜ್​ ಅವರು ಈಗ ಪಕ್ಕಾ ಮಾಸ್​ ಅವತಾರ ತಾಳಿದ್ದಾರೆ. ‘ವೀರಂ’ ಮತ್ತು ‘ಮಾಫಿಯಾ’ ಸಿನಿಮಾಗಳಲ್ಲಿ ಅವರಿಗೆ ಖಡಕ್​ ಆದಂತಹ ಪಾತ್ರ ಇದೆ. ಅವುಗಳ ತೀವ್ರತೆಯನ್ನು ತೋರಿಸುವ ತೀರಿಯಲ್ಲಿ ಈ ಪೋಸ್ಟರ್​ಗಳು ಮೂಡಿಬಂದಿವೆ.

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ‘ವೀರಂ’ ಸಿನಿಮಾ ಈಗಾಗಲೇ ಬಿಡುಗಡೆ ಆಗಿರಬೇಕಿತ್ತು. ಆದರೆ ಕಾರಣಾಂತರಗಳಿಂದ ರಿಲೀಸ್​ ದಿನಾಂಕ ಮುಂದಕ್ಕೆ ಹೋಗಿದೆ. ಆ ಸಿನಿಮಾ ನಿರ್ಮಾಪಕ ಶಶಿಧರ್​ ಕೆ.ಎಂ. ಅವರು ‘ಶುಗರ್​ಲೆಸ್​’ ಚಿತ್ರಕ್ಕೆ ನಿರ್ದೇಶನ ಮಾಡಿದ್ದು, ಅದು ಜುಲೈ 8ಕ್ಕೆ ಬಿಡುಗಡೆ ಆಗುತ್ತಿದೆ. ಅದರ ಕೆಲಸಗಳಲ್ಲಿ ಅವರು ಬ್ಯುಸಿ ಆಗಿದ್ದಾರೆ. ಆ ಬಳಿಕ ಅವರ ‘ವೀರಂ’ ಬಿಡುಗಡೆ ಬಗ್ಗೆ ಗಮನ ಹರಿಸಲಿದ್ದಾರೆ.

ಇದನ್ನೂ ಓದಿ
Image
ಪ್ರಜ್ವಲ್​ ದೇವರಾಜ್​-ಪ್ರಿಯಾಂಕಾ ತಿಮ್ಮೇಶ್​ ಅಭಿನಯದ ‘ಅರ್ಜುನ್​ ಗೌಡ’ ಸಿನಿಮಾ ಹೇಗಿದೆ?
Image
‘ಮಾಫಿಯಾ’ ಚಿತ್ರಕ್ಕಾಗಿ ಗೆಟಪ್​ ಬದಲಿಸಿ ಕ್ಯಾನ್ಸರ್​ ಪೀಡಿತರಿಗೆ ಕೂದಲು ದಾನ ಮಾಡಿದ ಪ್ರಜ್ವಲ್​ ದೇವರಾಜ್​
Image
ಪ್ರಜ್ವಲ್​ ದೇವರಾಜ್ ​- ರಾಗಿಣಿ ಚಂದ್ರನ್​ ವಿವಾಹ ವಾರ್ಷಿಕೋತ್ಸವ ಸಂಭ್ರಮ; ಮದುವೆ ವಿಡಿಯೋ ವೈರಲ್​
Image
ಪ್ರಜ್ವಲ್​ ಹುಟ್ಟುಹಬ್ಬದಂದೇ ಹೊರಬಿತ್ತು ‘ಮಾಫಿಯಾ’ ವಿಷಯ; ಡೈನಾಮಿಕ್​ ಪ್ರಿನ್ಸ್​ ಕೈಗೆ ಬೇಡಿ

ಇನ್ನು, ‘ಮಾಫಿಯಾ’ ಚಿತ್ರದ ಕೆಲಸಗಳು ಭರದಿಂದ ಸಾಗುತ್ತಿವೆ. ನಿರ್ದೇಶಕ ಲೋಹಿತ್​ ಅವರು ಈ ಹಿಂದೆ ‘ದೇವಕಿ’, ‘ಮಮ್ಮಿ’ ರೀತಿಯ ನಾಯಕಿ ಪ್ರಧಾನ ಸಿನಿಮಾ ಮಾಡಿ ಗಮನ ಸೆಳೆದಿದ್ದರು. ಈಗ ಇದೇ ಮೊದಲ ಬಾರಿಗೆ ಅವರು ಪ್ರಜ್ವಲ್​ ದೇವರಾಜ್​ ಜೊತೆ ಕೈ ಜೋಡಿಸಿ ಪಕ್ಕಾ ಮಾಸ್​ ಕಥಾಹಂದರವನ್ನು ಜನರ ಮುಂದಿಡುತ್ತಿದ್ದಾರೆ. ಈ ಎಲ್ಲ ಕಾರಣಗಳಿಂದಾಗಿ ‘ಮಾಫಿಯಾ’ ಚಿತ್ರ ನಿರೀಕ್ಷೆ ಮೂಡಿಸುವಲ್ಲಿ ಯಶಸ್ವಿ ಆಗಿದೆ.

ಇದನ್ನೂ ಓದಿ: ರಾಗಿಣಿ-ಪ್ರಜ್ವಲ್​ ದಂಪತಿಯ ಕ್ಯೂಟ್​ ಫೋಟೋಗಳು

ನಟ ಪ್ರಜ್ವಲ್​ ದೇವರಾಜ್​ ಹೊಸ ಸಿನಿಮಾಗೆ ಪನ್ನಗ ಭರಣ ನಿರ್ದೇಶನ

Published On - 12:51 pm, Sun, 3 July 22

ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು
ಗಾಂಧಿ ಭಾರತ ಒಂದು ಸರ್ಕಾರೀ ಕಾರ್ಯಕ್ರಮ, ಎಲ್ಲರೂ ಭಾಗವಹಿಸಬಹುದು: ಶಿವಕುಮಾರ್
ಗಾಂಧಿ ಭಾರತ ಒಂದು ಸರ್ಕಾರೀ ಕಾರ್ಯಕ್ರಮ, ಎಲ್ಲರೂ ಭಾಗವಹಿಸಬಹುದು: ಶಿವಕುಮಾರ್