ನಟ ಪ್ರಜ್ವಲ್​ ದೇವರಾಜ್​ ಹೊಸ ಸಿನಿಮಾಗೆ ಪನ್ನಗ ಭರಣ ನಿರ್ದೇಶನ

ನಟ ಪ್ರಜ್ವಲ್​ ದೇವರಾಜ್​ ಹೊಸ ಸಿನಿಮಾಗೆ ಪನ್ನಗ ಭರಣ ನಿರ್ದೇಶನ
ಪನ್ನಗ ಭರಣ- ಪ್ರಜ್ವಲ್​ ದೇವರಾಜ್​

ಇದೇ ಮೊದಲ ಬಾರಿಗೆ ಪ್ರಜ್ವಲ್​ ಹಾಗೂ ಪನ್ನಗ ಭರಣ ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ. ವಾಸುಕಿ ವೈಭವ್ ಸಂಗೀತ, ವಿರಾಜ್‌ ಸಿಂಗ್ ಛಾಯಾಗ್ರಹಣ ಈ ಚಿತ್ರಕ್ಕಿದೆ.

TV9kannada Web Team

| Edited By: Rajesh Duggumane

Jan 18, 2022 | 4:30 PM

ಪ್ರಜ್ವಲ್​ ದೇವರಾಜ್​ (Prajwal Devaraj) ಅವರು ಸ್ಯಾಂಡಲ್​ವುಡ್​ನಲ್ಲಿ ಸಖತ್​ ಬ್ಯುಸಿ ಆಗಿದ್ದಾರೆ. ಒಂದರಮೇಲೆ ಒಂದರಂತೆ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಈ ಮೂಲಕ ಅವರು ಚಿತ್ರರಂಗದಲ್ಲಿ ಹೆಚ್ಚು ತೊಡಗಿಕೊಂಡಿದ್ದಾರೆ. ಈಗ ಹೊಸ ಸಿನಿಮಾಗೆ ಪ್ರಜ್ವಲ್​ ಸಹಿ ಹಾಕಿದ್ದಾರೆ. ಪನ್ನಗ ಭರಣ (Pannaga Bharana) ಅವರ ನಿರ್ದೇಶನದ ಮುಂದಿನ ಚಿತ್ರಕ್ಕೆ ಪ್ರಜ್ವಲ್​ ಹೀರೋ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ವಿಚಾರ ಕೇಳಿ ಅಭಿಮಾನಿಗಳು ಸಖತ್​ ಖುಷಿಪಟ್ಟಿದ್ದಾರೆ. ಶೀಘ್ರದಲ್ಲೇ ಸಿನಿಮಾದ ಶೂಟಿಂಗ್​ ಶುರುವಾಗುವ ನಿರೀಕ್ಷೆ ಇದೆ.

ಮಂಗಳವಾರ (ಜನವರಿ 18) ಬಂಡಿ ಮಹಾಕಾಳಮ್ಮ ದೇವಸ್ಥಾನದಲ್ಲಿ ಸ್ಕ್ರಿಪ್ಟ್ ಪೂಜೆ ಸಮಾರಂಭವು ಸರಳವಾಗಿ ನಡೆದಿದೆ. ಈ ಚಿತ್ರವನ್ನು ‘ಫಿಲ್ಮಿ ಫೆಲೋ ಸ್ಟುಡಿಯೋಸ್’ ಅರ್ಪಿಸುತ್ತಿದ್ದು, ಆಲ್ ಓಶನ್ ಮೀಡಿಯಾ ಪ್ರೈ.ಲಿಮಿಟೆಡ್ ಮತ್ತು ಮಾತ ಭಗವತಿ ಪಿಕ್ಚರ‍್ಸ್ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. ಪನ್ನಗ ಅವರ ನಿರ್ದೇಶನದಲ್ಲಿ ಸಿನಿಮಾ ಮೂಡಿಬರಲಿದೆ. ಚಿತ್ರಕ್ಕೆ ಇನ್ನೂ ಶೀರ್ಷಿಕೆ ಇನ್ನೂ ಫೈನಲ್​ ಆಗಿಲ್ಲ.

ಬಾಲಿವುಡ್‌ನ ಅಧಿರ್‌ ಭಟ್ ಅವರು ಸಿನಿಮಾಗೆ ಕಥೆ ಬರೆದಿದ್ದಾರೆ. ಈ ಸಿನಿಮಾದಲ್ಲಿ ಕಮರ್ಷಿಯಲ್​ ಅಂಶಗಳು ಹೆಚ್ಚಿರಲಿವೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಇದೇ ಮೊದಲ ಬಾರಿಗೆ ಪ್ರಜ್ವಲ್​ ಹಾಗೂ ಪನ್ನಗ ಭರಣ ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ. ವಾಸುಕಿ ವೈಭವ್ ಸಂಗೀತ, ವಿರಾಜ್‌ ಸಿಂಗ್ ಛಾಯಾಗ್ರಹಣ ಈ ಚಿತ್ರಕ್ಕಿದೆ. ಪ್ರವೀಣ್‌ ಯಾದವ್ ಕಾರ್ಯಕಾರಿ ನಿರ್ಮಾಪಕರಾಗಿ ಕೆಲಸ ಮಾಡುತ್ತಿದ್ದಾರೆ. ತಾರಾ ಬಳಗದ ಆಯ್ಕೆ ಪ್ರಗತಿಯಲ್ಲಿದ್ದು, ಈ ಬಗ್ಗೆ ಮುಂದಿನ ದಿನಗಳಲ್ಲಿ ಘೋಷಣೆ ಆಗಲಿದೆ.

ಪ್ರಜ್ವಲ್ ದೇವರಾಜ್​ ಸದ್ಯ ಕೆಲ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ‘ಮಾಫಿಯಾ’, ‘ಗಣ’ ಚಿತ್ರದ ಶೂಟಿಂಗ್​ನಲ್ಲಿ ಅವರು ತೊಡಗಿಕೊಂಡಿದ್ದಾರೆ. ಇವುಗಳ ಕೆಲಸ ಮುಗಿದ ನಂತರ ಅವರು ಈ ತಂಡವನ್ನು ಸೇರಿಕೊಳ್ಳಲಿದ್ದಾರೆ. ಪನ್ನಗ ಅವರು ನಿರ್ಮಾಣದಲ್ಲಿ ಬ್ಯುಸಿ ಆಗಿದ್ದಾರೆ. ಮೇಘನಾ ಹೊಸ ಸಿನಿಮಾವನ್ನು ಪನ್ನಗ ನಿರ್ಮಾಣ ಮಾಡುತ್ತಿದ್ದಾರೆ. ಮೇಘನಾ ರಾಜ್​ ಅವರು ಸ್ಯಾಂಡಲ್​ವುಡ್​ ಹಾಗೂ ಮಾಲಿವುಡ್​ನಲ್ಲಿ ಸಾಕಷ್ಟು ಹೆಸರು ಮಾಡಿದ ನಟಿ. ಅವರಿಗೆ ಎರಡೂ ಕಡೆಗಳಲ್ಲಿ ಬೇಡಿಕೆ ಇದೆ. ಆದರೆ ಕಾರಣಾಂತರಗಳಿಂದ ನಟನೆಯಿಂದ ದೂರ ಉಳಿಯುವ ಪರಿಸ್ಥಿತಿ ಬಂದೊದಗಿತ್ತು. ಈಗ ಅವರು ಮತ್ತೆ ಕಂಬ್ಯಾಕ್ ಮಾಡುತ್ತಿದ್ದಾರೆ. ಪನ್ನಗ ಭರಣ ನಿರ್ಮಾಣದ ಸಿನಿಮಾದಲ್ಲಿ ಅವರು ಮುಖ್ಯ ಪಾತ್ರ ಮಾಡುತ್ತಿದ್ದಾರೆ.

ಇದನ್ನೂ ಓದಿ: ಡಾನ್ಸಿಂಗ್​ ಚಾಂಪಿಯನ್​ ಶೋನಲ್ಲಿ ಚಿರು-ರಾಯನ್​ ಬಗ್ಗೆ ಮೇಘನಾ ರಾಜ್​ ಸರ್ಜಾ ಹೃದಯಸ್ಪರ್ಶಿ ಮಾತು

 ಚಿರಂಜೀವಿ ಸರ್ಜಾ ಜತೆಗಿನ ಅಪರೂಪದ ಫೋಟೋ ಹಂಚಿಕೊಂಡ ಗೆಳೆಯ ಪನ್ನಗ ಭರಣ

Follow us on

Related Stories

Most Read Stories

Click on your DTH Provider to Add TV9 Kannada