Sara Ali Khan: ಸ್ಟಾರ್ ನಟನ ಜೊತೆಗಿನ ಬ್ರೇಕಪ್ ಬಳಿಕ ಸಾರಾ ಅಲಿ ಖಾನ್ಗೆ ಶುರುವಾಯ್ತು ಕೆಟ್ಟ ಕಾಲ; ಒಪ್ಪಿಕೊಂಡ ನಟಿ
Kartik Aaryan | Breakup: ‘2020ರ ವರ್ಷ ಬಹಳ ಕೆಟ್ಟದಾಗಿತ್ತು. ಬ್ರೇಕಪ್ನೊಂದಿಗೆ ಅದು ಶುರುವಾಯಿತು’ ಎಂದು ಸಾರಾ ಅಲಿ ಖಾನ್ ಹೇಳಿದ್ದಾರೆ. ಅವರ ಈ ಹೇಳಿಕೆಯಿಂದ ಚರ್ಚೆ ಶುರುವಾಗಿದೆ.
ನಟಿ ಸಾರಾ ಅಲಿ ಖಾನ್ (Sara Ali Khan) ಅವರು ಹಿಂದಿ ಚಿತ್ರರಂಗದಲ್ಲಿ ಗಟ್ಟಿಯಾದ ನೆಲೆ ಕಂಡುಕೊಂಡಿಲ್ಲ. ಒಂದು ದೊಡ್ಡ ಯಶಸ್ಸಿಗಾಗಿ ಅವರು ಕಷ್ಟಪಡುತ್ತಿದ್ದಾರೆ. ಇತ್ತೀಚೆಗೆ ಅವರು ನಟಿಸಿದ ಸಿನಿಮಾಗಳು ಕೈ ಹಿಡಿದಿಲ್ಲ. ಸೈಫ್ ಅಲಿ ಖಾನ್ (Saif Ali Khan) ಪುತ್ರಿ ಎಂಬ ಕಾರಣಕ್ಕೆ ಆರಂಭದಲ್ಲಿ ಅವರಿಗೆ ಸುಲಭವಾಗಿ ಅವಕಾಶ ಸಿಕ್ಕಿತು. ಆದರೆ ಅವುಗಳಿಂದ ಗೆಲುವು ಸಿಗಲಿಲ್ಲ. 2020ರ ವರ್ಷ ಸಾರಾ ಅಲಿ ಖಾನ್ ಪಾಲಿಗೆ ತುಂಬ ಕೆಟ್ಟದಾಗಿತ್ತು. ಅದೇ ವರ್ಷ ಅವರು ಬ್ರೇಕಪ್ ಕೂಡ ಮಾಡಿಕೊಂಡರು. ಆ ವಿಚಾರದ ಕುರಿತು ಈಗ ಅವರು ಬಾಯಿ ಬಿಟ್ಟಿದ್ದಾರೆ. ಹೆಸರು ಹೇಳದೇ ಇದ್ದರೂ ಕೂಡ ಅವರು ಪ್ರಸ್ತಾಪಿಸಿರುವುದು ಕಾರ್ತಿಕ್ ಆರ್ಯನ್ (Kartik Aaryan) ಬಗ್ಗೆ ಎಂದು ನೆಟ್ಟಿಗರು ಊಹಿಸುತ್ತಿದ್ದಾರೆ.
ಬಾಲಿವುಡ್ನಲ್ಲಿ ಕಾರ್ತಿಕ್ ಆರ್ಯನ್ ಅವರು ಸ್ಟಾರ್ ಹೀರೋ ಆಗಿ ಬೆಳೆದಿದ್ದಾರೆ. ಅವರ ಜೊತೆ ಸಾರಾ ಅಲಿ ಖಾನ್ ತೆರೆಹಂಚಿಕೊಂಡಿದ್ದು 2020ರಲ್ಲಿ ತೆರೆಕಂಡ ‘ಲವ್ ಆಜ್ ಕಲ್’ ಸಿನಿಮಾದಲ್ಲಿ. ಆ ಚಿತ್ರ ರಿಲೀಸ್ ಆಗುವುದಕ್ಕೂ ಮುನ್ನವೇ ಇಬ್ಬರ ನಡುವೆ ಬ್ರೇಕಪ್ ಆಯಿತು ಎಂಬ ಸುದ್ದಿ ಕೇಳಿಬಂದಿತ್ತು. ಆದರೆ ತಮ್ಮಿಬ್ಬರ ನಡುವಿನ ಆಪ್ತತೆ ಬಗ್ಗೆಯಾಗಲೀ ಅಥವಾ ದೂರ ಆಗಿದ್ದರ ಬಗ್ಗೆಯಾಗಲೀ ಅವರು ಏನನ್ನೂ ಹೇಳಿಕೊಂಡಿರಲಿಲ್ಲ. ಆದರೆ ಈಗ ಆ ದಿನಗಳನ್ನು ಸಾರಾ ಅಲಿ ಖಾನ್ ಮೆಲುಕು ಹಾಕಿದ್ದಾರೆ.
ಇದನ್ನೂ ಓದಿ: ಗ್ಲಾಮರಸ್ ಬಟ್ಟೆ ಧರಿಸಿ ಪಡ್ಡೆಗಳ ಕಣ್ಣು ಕುಕ್ಕಿದ ಸಾರಾ ಅಲಿ ಖಾನ್
ಮಾಧ್ಯಮವೊಂದಕ್ಕೆ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಸಾರಾ ಅಲಿ ಖಾನ್ ಅವರು ಈ ಬಗ್ಗೆ ಮಾತನಾಡಿದ್ದಾರೆ. ‘2020ರ ವರ್ಷ ಬಹಳ ಕೆಟ್ಟದಾಗಿತ್ತು. ಬ್ರೇಕಪ್ನೊಂದಿಗೆ ಅದು ಶುರುವಾಯಿತು. ಬಳಿಕ ಕೆಟ್ಟ ದಿನಗಳು ಮುಂದುವರಿದವು’ ಎಂದು ಸಾರಾ ಅಲಿ ಖಾನ್ ಹೇಳಿದ್ದಾರೆ. 2020ರ ಫೆಬ್ರವರಿಯಲ್ಲಿ ‘ಲವ್ ಆಜ್ ಕಲ್’ ಸಿನಿಮಾ ತೆರೆಕಂಡಿತ್ತು. ಆದರೆ ಜನರಿಗೆ ಅದು ಇಷ್ಟ ಆಗಲಿಲ್ಲ. ಅದರಲ್ಲಿ ಸಾರಾ ನಟನೆಯನ್ನು ನೋಡಿ ಜನರು ಸಿಕ್ಕಾಪಟ್ಟೆ ಟ್ರೋಲ್ ಮಾಡಿದರು.
ಇದನ್ನೂ ಓದಿ: ಇದೆಂಥಾ ಮಕ್ಕಳಾಟ? ಬಿಕಿನಿಯಲ್ಲಿ ಪ್ರ್ಯಾಂಕ್ ಮಾಡಿದ ಸಾರಾ ಅಲಿ ಖಾನ್ಗೆ ಛೀಮಾರಿ
2020ರಲ್ಲಿ ಬಿಡುಗಡೆಯಾದ ಮತ್ತೊಂದು ಸಿನಿಮಾ ‘ಕೂಲಿ ನಂಬರ್ 1’ ಕೂಡ ಸಾರಾ ಅಲಿ ಖಾನ್ಗೆ ಯಶಸ್ಸು ತಂದುಕೊಡಲಿಲ್ಲ. 2021ರಲ್ಲಿ ಬಂದ ‘ಅತರಂಗಿ ರೇ’ ಸಹ ಸೋಲು ಕಂಡಿತು. ಮುಂದಿನ ದಿನಗಳಲ್ಲಾದರೂ ಅವರು ಯಶಸ್ಸು ಪಡೆಯುತ್ತಾರಾ ಎಂಬುದನ್ನು ಕಾದು ನೋಡಬೇಕು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.